ಐಫೋನ್ 12 ಫೀಚರ್ಸ್‌ ಲೀಕ್: ಕೊರೊನಾ ಎಫೆಕ್ಟ್‌ನಿಂದ ಬಿಡುಗಡೆ ವಿಳಂಬ!

|

ಐಫೋನ್‌ಗಳು ಅಂದರೇ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಚ್ಚುಮೆಚ್ಚು. ಜನಪ್ರಿಯ ಆಪಲ್ ಸಂಸ್ಥೆಯು ಪ್ರತಿ ವರ್ಷ ಅಪ್‌ಡೇಟ್ ಆವೃತ್ತಿಗಳಲ್ಲಿ ಐಫೋನ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಕಳೆದ ವರ್ಷ ಐಫೋನ್ 11 ಸರಣಿಯನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಭಾರಿ ಅಬ್ಬರ ಸೃಷ್ಠಿಸಿದೆ. ಇದೀಗ ಸಂಸ್ಥೆಯು ಐಫೋನ್ 12 ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಆ ಬಗ್ಗೆ ಕೆಲವು ಮಾಹಿತಿಗಳು ಲೀಕ್ ಆಗಿವೆ. ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಕುತೂಹಲಗಳು ಹೆಚ್ಚಾಗಿವೆ.

ಐಫೋನ್ 12 ಸರಣಿ

ಹೌದು, ಆಪಲ್‌ ಸಂಸ್ಥೆಯು ಈಗ ಐಫೋನ್ 12 ಸರಣಿಯನ್ನು ಲಾಂಚ್ ಮಾಡಲು ತಯಾರಾಗುತ್ತಿದೆ. ಈ ಹೊಸ ಐಫೋನ್ ಆವೃತ್ತಿಯು ಕೆಲವು ಅಚ್ಚರಿಯ ಬದಲಾವಣೆಗಳೊಂದಿಗೆ ಲಗ್ಗೆ ಇಡುವ ಬಗ್ಗೆ ಲೀಕ್‌ ಮಾಹಿತಿಗಳಿಂದ ತಿಳಿದು ಬಂದಿದೆ. ಮುಖ್ಯವಾಗಿ ಐಫೋನ್ 12 ಡಿಸ್‌ಪ್ಲೇರಚನೆಯಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆಗಳಿದ್ದು, ವಿಶಾಲ ಡಿಸ್‌ಪ್ಲೇ ಇರಲಿದ್ದು, ಅಧಿಕ ರೆಸಲ್ಯೂಶನ್ ಹಾಗೂ ಆಟ್ರ್ಯಾಕ್ಟಿವ್ ಡಿಸೈನ್ ಇರುವ ಸಾಧ್ಯತೆಗಳು ಹೆಚ್ಚಿವೆ.

ಬಿಡುಗಡೆ ಆಗಲಿದೆ

ಐಫೋನ್ 12 ಸರಣಿ ಇದೇ ಸೆಪ್ಟಂಬರ್ 2020ರಲ್ಲಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊರೊನಾ ವೈರಸ್‌ ಹಾವಳಿಯಿಂದಾಗಿ ಬಹುಶಃ 2021ರಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಅಂದಹಾಗೆ ಈ ಐಫೋನ್ ಸರಣಿಯ ಮೂರು ಅವತರಣಿಕೆ ಫೋನ್‌ ಮಾದರಿಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ಅವುಗಳಲ್ಲಿ ಒಂದು ಐಫೋನ್ 5G ನೆಟವರ್ಕ್ ಸಫೋರ್ಟ್‌ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ.

6.7 ಇಂಚಿನ ಗಾತ್ರ

ಇನ್ನು ಹೊಸ ಐಫೋನ್ ಸರಣಿಯು ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಮಾದರಿಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಸರಣಿಯ ಫೋನ್‌ಗಳ ಡಿಸ್‌ಪ್ಲೇಗಳು ಭಿನ್ನ ಗಾತ್ರಗಳಲ್ಲಿ ಇರಲಿದ್ದು, ಒಂದು ಮಾದರಿಯು ಗರಿಷ್ಠ 6.7 ಇಂಚಿನ ಗಾತ್ರದ OLED ಡಿಸ್‌ಪ್ಲೇಯನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಬಯೋನಿಕ್ A14 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ.

ಕಾರ್ಯಕ್ರಮ ಮುಂದೂಡುವಿಕೆ

ವರ್ಷದ ಕೊನೆಯ ತಿಂಗಳೊಂದರಲ್ಲಿಯೇ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡುವುದು ರೂಢಿ ಎನ್ನುವಂತೆ ಮಾಡಿದೆ. ಆದರೆ ಈ ಬಾರಿ ಕೊರೊನಾ ಕೇಕೆಯಿಂದಾಗಿ ಐಫೋನ್ ಬಿಡುಗಡೆ ಕಾರ್ಯಕ್ರಮ ಮುಂದೂಡುವಿಕೆ ಆಗುತ್ತದೆ.

Most Read Articles
Best Mobiles in India

English summary
Apple could be set to make drastic design changes to the iPhone 12 as it plans to do away with the notch on the upcoming smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X