Home
ಸುದ್ದಿಜಾಲ

ಐಫೋನ್‌ 13ಗೆ ಭಾರೀ ಡಿಸ್ಕೌಂಟ್‌ ಘೋಷಣೆ: ಐಫೋನ್ ಖರೀದಿಸಲು ಇದು ಸಕಾಲ!

ಆಪಲ್‌ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ವಿಶೇಷ ಫೀಚರ್ಸ್‌ ಹೊಂದಿರುವ ಹಿನ್ನೆಲೆ ಬೆಲೆ ಸಹ ದುಬಾರಿಯಾಗಿರುತ್ತದೆ. ಆದರೆ, ಈ ದುಬಾರಿ ಬೆಲೆಯ ಫೋನ್‌ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡುವ ಕಾಲ ಬಂದಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ.

ಹೌದು, ಆಪಲ್‌ನ ಬಹು ಬೇಡಿಕೆಯ ಹಾಗೂ ಹೆಚ್ಚು ಮಾರಾಟ ಆಗುತ್ತಿರುವ ಐಫೋನ್ 13 ಭರ್ಜರಿ ಡಿಸ್ಕೌಂಟ್‌ ಪಡೆದುಕೊಂಡಿದ್ದು, ಈ ಫೋನ್ ಖರೀದಿ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದರು ಈ ಮೂಲಕ ಅವರ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಬಲ ಹೊಂದಿದ್ದು, 5G ಬೆಂಬಲಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಐಫೋನ್‌ 13ಗೆ ಭಾರೀ ಡಿಸ್ಕೌಂಟ್‌ ಘೋಷಣೆ: ಐಫೋನ್ ಖರೀದಿಸಲು ಇದು ಸಕಾಲ!

ಆಫಲ್‌ ಐಫೋನ್‌ ಪ್ರಮುಖ ಫೀಚರ್ಸ್‌: ಈ ಸ್ಮಾರ್ಟ್‌ಫೋನ್‌ ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸಿದರೆ ಒಳಿತು. ಅಂತೆಯೇ ಈ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಹಾಗೂ 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಇದು A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಬಲ ಪಡೆದುಕೊಂಡಿದೆ.

ಹಾಗೆಯೇ ಕ್ಯಾಮೆರಾ ವಿಚಾರದಲ್ಲಿ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಅದರಲ್ಲಿ ಪ್ರಮುಖವಾಗಿ 12 ಮೆಗಾಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ , ಹಾಗೂ 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿದೆ. ಇನ್ನುಳಿದಂತೆ 12 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ ಸಹ ಪಡೆದುಕೊಂಡಿದ್ದು, ಐಆರ್ ಆಧಾರಿತ ಫೇಸ್ ಐಡಿಯನ್ನು ಹೊಂದಿದೆ.

ಐಫೋನ್ 13 ಆಫರ್‌ ಬೆಲೆ ವಿವರ: ಆಸಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ಈ ಫೋನ್‌ ಅನ್ನು 54,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ನಿಮಗೆ ಅವಕಾಶ ಇದೆ. ಈ ಫೋನ್‌ನ ಸಾಮಾನ್ಯ ದರ 69,900ರೂ. ಗಳಾಗಿದೆ. ಆದರೆ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಬೇಸಿಗೆ ಮಾರಾಟವನ್ನು ನಡೆಸುತ್ತಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಫೋನ್‌ಗೆ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ.

ಏನೆಲ್ಲಾ ಬ್ಯಾಂಕ್‌ ಆಫರ್‌ ಲಭ್ಯ?: ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ ಲಭ್ಯವಾಗಲಿದೆ. ಜೊತೆಗೆ ಪೇಟಿಎಮ್ ವಾಲೆಟ್‌ನಲ್ಲಿ ಖರೀದಿ ಮಾಡಿದರೆ 100 ತ್ವರಿತ ಕ್ಯಾಶ್‌ಬ್ಯಾಕ್ ಸಹ ಲಭ್ಯ. ಹಾಗೂ ಪಾರ್ಟ್ನರ್ ಆಫರ್‌ ಸಹ ಇದ್ದು, ಇದರಲ್ಲಿ ಪೇ ಲೇಟರ್‌ ಮೂಲಕ ಖರೀದಿ ಮಾಡಿದರೆ 500 ರೂ. ವರೆಗಿನ ಗಿಫ್ಟ್ ಕಾರ್ಡ್ ಸಹ ಲಭ್ಯವಾಗುತ್ತದೆ.

ಐಫೋನ್‌ 13ಗೆ ಭಾರೀ ಡಿಸ್ಕೌಂಟ್‌ ಘೋಷಣೆ: ಐಫೋನ್ ಖರೀದಿಸಲು ಇದು ಸಕಾಲ!

ಹಾಗೆಯೇ ವಿನಿಮಯ ಆಫರ್‌ ಸಹ ಲಭ್ಯವಿದ್ದು, ಇದರಲ್ಲಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸೇಲ್‌ ಮಾಡಬಹುದು. ಆದರೆ, ಇದು ಉತ್ತಮವಾಗಿ ಕೆಲಸ ಮಾಡುತ್ತಿದ್ದರೆ ಸುಮಾರು 26,000ರೂ. ಗಳಿಗೂ ಅಧಿಕ ರಿಯಾಯಿತಿಯನ್ನು ಈ ಫೋನ್‌ ಖರೀದಿಯ ಮೇಲೆ ಪಡೆದುಕೊಳ್ಳಬಹುದು. ಇನ್ನು ಫ್ಲಿಪ್‌ಕಾರ್ಟ್ ಇಎಮ್‌ಐ ತಿಂಗಳಿಗೆ 3,653ರೂ. ಗಳಿಂದ ಆರಂಭ ಆಗುತ್ತವೆ. ಈ ವಿಶೇಷ ಆಫರ್ ಏಪ್ರಿಲ್ 13 ರಿಂದ ಆರಂಭ ಆಗಿದ್ದು, ಏಪ್ರಿಲ್ 17 ರವರೆಗೆ ಮುಂದುವರಿಯುತ್ತದೆ.

Best Mobiles in India

English summary
A huge offer has been announced on Flipkart for iPhone 13. you can get this phone for just Rs 54,999. This Summer sale offer is valid for few days only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+