ಐಫೋನ್ 13 ಗೆ 9,402 ರೂ.ರಿಯಾಯಿತಿ... ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ
ಐಫೋನ್ (iPhone) ಖರೀದಿ ಮಾಡಬೇಕೆಂಬ ಆಸೆ ಹಲವರಿಗೆ ಇದ್ದೇ ಇರುತ್ತದೆ. ಆದರೆ ದುಬಾರಿ ಬೆಲೆಯಿಂದ ಕೆಲವರು ಹಿಂದೆ ಸರಿದಿರಬಹುದು. ಅದಾಗ್ಯೂ ನೀವು ಈ ಐಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದು. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ (E-commerce site) ಭರ್ಜರಿ ರಿಯಾಯಿತಿ ನೀಡಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) ಈಗಾಗಲೇ ದೀಪಾವಳಿ ಹಿನ್ನೆಲೆ ವಿಶೇಷ ಸೇಲ್ ಆಯೋಜನೆ ಮಾಡಿದ್ದು, ಈ ಸೇಲ್‌ನಲ್ಲಿ ಎಲ್ಲಾ ರೀತಿಯ ಸ್ಮಾರ್ಟ್ ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ನೀಡಿದ್ದು, ಇದರ ಭಾಗವಾಗಿಯೇ ಐಫೋನ್ 13 ಗೂ ಸಹ ಉತ್ತಮ ಡಿಸ್ಕೌಂಟ್ ನೀಡಿದೆ. ಆದರೆ ಇಂದೇ ಈ ಆಫರ್ ಕೊನೆಯಾಗಲಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ವಿವರ ಹಾಗೂ ಫೀಚರ್ಸ್ ತಿಳಿಯೋಣ ಬನ್ನಿ.

ಐಫೋನ್ 13 ಆಫರ್ ವಿವರ: ಅಮೆಜಾನ್ ದೀಪಾವಳಿ ಸೇಲ್ (Amazon Diwali Sale) ಡಿಸೆಂಬರ್ 10 ರಂದು ಅಂದರೆ ಇಂದು ಕೊನೆಯಾಗಲಿದೆ. ಈ ನಡುವೆ ಐಫೋನ್ 13 ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತಿದೆ. ಯಾಕೆಂದರೆ ಈ ಫೋನ್ ಮೇಲೆ ಬರೋಬ್ಬರಿ 9,402 ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ಇನ್ನೂ ವಿವಿಧ ರೀತಿಯ ಬ್ಯಾಂಕ್ ಆಫರ್ ನೀಡಿರುವುದರಿಂದ ಭಾರೀ ಹಣ ಉಳಿತಾಯದೊಂದಿಗೆ ಐಫೋನ್ ಖರೀದಿ ಮಾಡಬಹುದಾಗಿದೆ.
ಈ ಸ್ಮಾರ್ಟ್‌ಫೋನ್ ಅನ್ನು ಇದೀಗ 50,498 ರೂಗಳಿಗೆ ಖರೀದಿಸಬಹುದಾಗಿದೆ. ಆದರೆ, ಈ ಆಫರ್ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಐಫೋನ್ 15 ಸರಣಿಯ ಬಿಡುಗಡೆಯ ನಂತರ ಆಪಲ್ ಸ್ಟೋರ್‌ಗಳಲ್ಲಿ ಐಫೋನ್ 13 ನ ಬೆಲೆ 59,900 ರೂ.ಗೆ ಇಳಿದಿದೆ ಎಂಬುದು ಗಮನಿಸಬೇಕಾದ ಸಂಗತಿ. ಜೊತೆಗೆ ಗ್ರಾಹಕರು ಅಮೆಜಾನ್‌ನಲ್ಲಿ 9,402ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಇಷ್ಟೇ ಅಲ್ಲದೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000ರೂ. ವರೆಗೆ ರಿಯಾಯಿತಿ ಕೊಡುಗೆಯೂ ಲಭ್ಯ ಇದೆ.

ಈ ಫೋನ್ ಅನ್ನೇ ಯಾಕೆ ಖರೀದಿಸಬೇಕು?: ಹೊಸ ಐಫೋನ್ ಸರಣಿ ಇದೆ ಅದರಲ್ಲೂ ಐಫೋನ್ 14 ಸರಣಿ ಫೋನ್‌ಗಳು ಸಹ ಇವೆ. ಆದರೂ ಸಹ ಐಫೋನ್ 13 ಅನ್ನೇ ಯಾಕೆ ಖರೀದಿ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮನೆಮಾಡಿರಬಹುದು. ವಿಷಯ ಏನೆಂದರೆ ಐಫೋನ್ 13 ಐಫೋನ್ 14 ಸ್ಮಾರ್ಟ್‌ಫೋನ್‌ನಂತೆಯೇ ಇದೆ. ಇದು ಭಾರತದಲ್ಲಿ ಸುಮಾರು 57,999 ರೂ.ಗಳಿಗೆ ಮಾರಾಟವಾಗುತ್ತಿದೆ.
ಎರಡರಲ್ಲೂ ಅದೇ ಕ್ಯಾಮರಾ, ಡಿಸ್‌ಪ್ಲೇ, ಬ್ಯಾಟರಿ ಮತ್ತು ಚಿಪ್‌ಸೆಟ್ ಅನ್ನು ನೋಡಬಹುದು. ಅದರಲ್ಲೂ ಕಾರ್ಯಕ್ಷಮತೆಯ ವಿಷಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವಿನ್ಯಾಸವು ಒಂದೇ ಆಗಿರುವುದರಿಂದ ಜೊತೆಗೆ ಬೆಲೆ ಕಡಿಮೆ ಇರುವುದರಿಂದ ಬೆಸ್ಟ್ ಆಯ್ಕೆ ಎಂದು ಹೇಳಲಾಗಿದೆ. ಇದರೊಂದಿಗೆ ಐಫೋನ್ 13 ನವೀಕರಣಗಳನ್ನು ಸ್ವೀಕರಿಸಲು ಸಹ ಅರ್ಹವಾಗಿದೆ. ಹಾಗೆಯೇ ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಒಂದು ದಿನದ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ.
ಆದರೆ ಈ ಫೋನ್‌ಗೆ ವೇಗದ ಚಾರ್ಜಿಂಗ್‌ಗೆ ಯಾವುದೇ ಬೆಂಬಲವಿಲ್ಲ. ಅಷ್ಟೇ ಅಲ್ಲದೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ಪಡೆಯುವುದಿಲ್ಲ. ಉಳಿದಂತೆ ಡಿಸ್‌ಪ್ಲೇ ಅತ್ಯುತ್ತವಾಗಿದ್ದು, ಕಂಟೆಂಟ್ ಬಳಕೆಗೆ ಸಾಕಷ್ಟು ಅನುಕೂಲಕರಾಗಿದೆ. ಪರಿಣಾಮ ನೀವು ಐಫೋನ್ ಅಭಿಮಾನಿಗಳಾಗಿದ್ದರೆ ಈ ಫೋನ್ ಖರೀದಿ ಮಾಡುವುದು ಉತ್ತಮ ಎನ್ನಬಹುದು.

ಅಮೆಜಾನ್‌ನಲ್ಲಿ ಈ ಫೋನ್ ಅಷ್ಟೇ ಅಲ್ಲದೆ ಸ್ಯಾಮ್‌ಸಂಗ್, ಒನ್‌ಪ್ಲಸ್, ಒಪ್ಪೋ ಸೇರಿದಂತೆ ಎಲ್ಲಾ ರೀತಿಯ ಬ್ರ್ಯಾಂಡ್‌ನ ಫೋನ್‌ಗಳಿಗೆ ಬಂಫರ್ ಆಫರ್ ನೀಡಿದೆ. ಈ ಸೇಲ್ ಇಂದು ಕೊನೆಯಾಗಲಿದ್ದು, ನೀವೇನಾದರೂ ಹಣ ಉಳಿಸುವ ಆಲೋಚನೆಯಲ್ಲಿದ್ರೆ ಈ ಕ್ಷಣವೇ ನಿಮಗೆ ಇಷ್ಟವಾಗುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಪೂರ್ಣ ಹಣ ಪಾವತಿ ಮಾಡಲು ಕಷ್ಟ ಎಂದಾದರೆ ಇಎಮ್‌ಐ ಆಯ್ಕೆ ಸೌಲಭ್ಯ ಸಹ ಪಡೆದುಕೊಳ್ಳಬಹುದು.


Click it and Unblock the Notifications








