ಹೊಸ ಐಫೋನ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಆಫರ್ ಮಿಸ್ ಮಾಡ್ಕೋಬೇಡಿ!
ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಫ್ಲಿಪ್‌ಕಾರ್ಟ್ ನಲ್ಲಿ ಈಗ 'ಫ್ಲಿಪ್‌ಕಾರ್ಟ್ ಸೇವಿಂಗ್ ಡೇಸ್ ಸೇಲ್' ಪ್ರಾರಂಭವಾಗಿದೆ. ಈ ಮಾರಾಟ ಮೇಳದಲ್ಲಿ ಆಪಲ್ ಸಂಸ್ಥೆಯು ಆಯ್ದ ಐಫೋನ್ ಹಾಗೂ ಇತರೆ ಉತ್ಪನ್ನಗಳು ಆಕರ್ಷಕ ಡಿಸ್ಕೌಂಟ್ ಪಡೆದಿದ್ದು, ಮುಖ್ಯವಾಗಿ ಐಫೋನ್ 13 ಫೋನ್ ಅನ್ನು ಭಾರೀ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ.
ಹೌದು, ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಫ್ಲಿಪ್‌ಕಾರ್ಟ್ ಸೇವಿಂಗ್ ಡೇಸ್ ಸೇಲ್ ಮೇಳ ಆಯೋಜಿಸಲಾಗಿದೆ. ಇದ್ರಲ್ಲಿ ಮುಖ್ಯವಾಗಿ ಆಪಲ್ ಐಫೋನ್ 13 ಬೊಂಬಾಟ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರ ಗಮನ ಸೆಳೆದಿದೆ. ರಿಯಾಯಿತಿ ದರದಲ್ಲಿ ಐಫೋನ್ ಖರೀದಿಸುವವರಿಗೆ ಇದೊಂದು ಸಕಾಲ ಎನ್ನಬಹುದು.

ಫ್ಲಿಪ್‌ಕಾರ್ಟ್ ನ ಈ ಸೇಲ್‌ನಲ್ಲಿ ಐಫೋನ್ 13 ಫೋನಿನ ಜೊತೆಗೆ ಐಫೋನ್ 12 ಸಹ ಭಾರೀ ಆಫರ್ ಪಡೆದಿವೆ. ಅಂದಹಾಗೆ ಐಫೋನ್ 13 (128GB ವೇರಿಯಂಟ್) 57,999ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಐಫೋನ್ 12 ಫೋನ್ 53,999ರೂ. ಗಳಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಕ್ಯಾಶ್‌ಬ್ಯಾಕ್ ಸೇರಿ ಇತರೆ ಆಫರ್ ಆಯ್ಕೆಗಳು ಲಭ್ಯ. ಇನ್ನುಳಿದಂತೆ ಐಫೋನ್ 13 ಮತ್ತು ಐಫೋನ್ 12 ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
ಐಫೋನ್ 13 ಫೋನ್ ಫೀಚರ್ಸ್ ಮಾಹಿತಿ : ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದ ಪಡೆದಿದೆ. ಜೊತೆಗೆ 1200 nits ಬ್ರೈಟ್ನೆಸ್ ಅನ್ನು ಇದು ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಪವರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5G ಅನ್ನು ಬೆಂಬಲಿಸುತ್ತದೆ.
ಹಾಗೆಯೇ ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಪಡೆದಿದೆ. ಇನ್ನೊಂದು ಕ್ಯಾಮೆರಾವು ಸಹ 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಬಳಕೆದಾರರು ಯಾವುದೇ ಸಂದರ್ಭದಲ್ಲಿಯೂ ಉತ್ತಮ ಫೋಟೊ ಸೆರೆಹಿಡಿಯಲು ಪೂರಕವಾಗಿದ್ದು, ಸಿನಿಮ್ಯಾಟಿಕ್ ಮೋಡ್ ಆಯ್ಕೆ ಅನ್ನು ಒದಗಿಸಲಾಗಿದೆ.
ಐಫೋನ್ 12 ಫೋಣಿನ ಫೀಚರ್ಸ್ ಮಾಹಿತಿ : ಐಫೋನ್ 12 OLED ಡಿಸ್‌ಪ್ಲೇ ಮಾದರಿ ಅನ್ನು ಪಡೆದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಸಹ 5G ಅನ್ನು ಸಪೋರ್ಟ್ ಮಾಡುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್ ಅನ್ನು ಹೊಂದಿವೆ. ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.
ಐಫೋನ್ 14 ಫೋನ್ ಫೀಚರ್ಸ್ ಮಾಹಿತಿ : ಈ ಐಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಅನ್ನು ಪಡೆದಿದ್ದು, 1200 nits ಬ್ರೈಟ್ನಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ.
ಜೊತೆಗೆ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 128GB, 256GB ಮತ್ತು 512 GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.


Click it and Unblock the Notifications








