ಸದ್ಯ ನೀವೇನಾದರೂ ಹೊಸ iPhone ಖರೀದಿಸುವ ಪ್ಲ್ಯಾನ್ ಇದ್ರೆ, ಈ ಆಫರ್ ಸೂಪರ್!
ಟೆಕ್ ಉತ್ಪನ್ನಗಳ ಮಾರಾಟದ ಪ್ರಮುಖ ಸ್ಟೋರ್‌ಗಳಲ್ಲಿ ಒಂದಾಗಿರುವ ಅಮೆಜಾನ್ (Amazon) ತಾಣದಲ್ಲಿ ಆಯ್ದ ಆಪಲ್ ಐಫೋನ್‌ಗಳು ರಿಯಾಯಿತಿ ಪಡೆದಿವೆ. ಅಮೆಜಾನ್‌ನ ಈ ವಿಶೇಷ ಮಾರಾಟ ಮೇಳದಲ್ಲಿ ಕೆಲವು ಐಫೋನ್‌ಗಳು ಬೊಂಬಾಟ್ ಡಿಸ್ಕೌಂಟ್ ಪಡೆದಿದ್ದು, ಹೊಸ ಐಫೋನ್ ಖರೀದಿ ಮಾಡಲು ಬಯಸುವ ಗ್ರಾಹಕರು ಹುಬ್ಬೇರಿಸುವಂತೆ ಆಗಿದೆ. ಮುಖ್ಯವಾಗಿ ಆಪಲ್ ಐಫೋನ್ 13 (iPhone 13) ಫೋನ್ ಆಫರ್ ಭಾರೀ ಗಮನ ಸೆಳೆದಿದೆ.
ಹೌದು, ಅಮೆಜಾನ್ (Amazon) ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಸದ್ಯ ಆಪಲ್ ಐಫೋನ್‌ಗಳು ಸಖತ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಮುಖ್ಯವಾಗಿ ಆಪಲ್ ಐಫೋನ್ 13 ಅತ್ಯುತ್ತಮ ಡಿಸ್ಕೌಂಟ್ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರ ಖುಷಿ ತಂದಿದೆ. ಅದೇ ರೀತಿ ಆಪಲ್ ಐಫೋನ್ 14 ಸಹ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಅಮೆಜಾನ್ (Amazon) ಸೇಲ್‌ನಲ್ಲಿ ಐಫೋನ್ 13 ಹಾಗೂ ಐಫೋನ್ 14 ಭಾರೀ ಆಫರ್ ಪಡೆದಿವೆ. ಐಫೋನ್ 13 (128GB) ಫೋನ್ 49,900ರೂ. ಮತ್ತು ಐಫೋನ್ 14 (128GB) ಮೊಬೈಲ್ 59,900ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗಾದರೇ ಆಪಲ್ ಐಫೋನ್ 13 ಹಾಗೂ ಆಪಲ್ ಐಫೋನ್ 14 ಮೊಬೈಲ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
ಐಫೋನ್ 13 ಮೊಬೈಲ್ ಫೀಚರ್ಸ್ ಹೀಗಿವೆ
ಐಫೋನ್ 13 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಇದರ ಜೊತೆಗೆ 1200 nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ 5G ಅನ್ನು ಸಪೋರ್ಟ್ ಮಾಡುತ್ತದೆ.
ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದು ಒಳಗೊಂಡಿದೆ.
ಐಫೋನ್ 14 ಮೊಬೈಲ್ ಫೀಚರ್ಸ್ ಹೀಗಿವೆ
ಈ ಐಫೋನ್ 6.1 ಮೊಬೈಲ್ ಇಂಚಿನ FHD+ ಡಿಸ್‌ಪ್ಲೇ ಪಡೆದಿದ್ದು, 1200 nits ಬ್ರೈಟ್ನಸ್ ಸಪೋರ್ಟ್ ಪಡೆದಿದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಜೊತೆಗೆ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ 128GB, 256GB ಮತ್ತು 512 GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ - ಸಿಮ್ ಆಯ್ಕೆ ಒಳಗೊಂಡಿದೆ.
ಐಫೋನ್ 14 ಪ್ಲಸ್ ಮೊಬೈಲ್ ಫೀಚರ್ಸ್ ಹೀಗಿವೆ
ಐಫೋನ್ 14 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಅನ್ನು ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








