Home
ಸುದ್ದಿಜಾಲ

2022ರಲ್ಲಿ ಹೆಚ್ಚು ಮಾರಾಟವಾದ ಆಪಲ್‌ ಪೋನ್‌ಗಳಿವು; ಎರಡನೇ ಸ್ಥಾನದಲ್ಲಿ ಈ ಬ್ರ್ಯಾಂಡ್!?

ಮಾರುಕಟ್ಟೆಯಲ್ಲಿ ಈಗ ತರಹೇವಾರಿ ಸ್ಮಾರ್ಟ್‌ಫೋನ್‌ಗಳು ಇವೆ. ಅದರಲ್ಲೂ ಆಪಲ್‌ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ವಿವಿಧ ಆವೃತ್ತಿಯ ಐಫೋನ್‌ಗಳನ್ನು ಪರಿಚಯಿಸಿದೆ. ಈ ನಡುವೆ ಆಪಲ್‌ನ ಯಾವ ಫೋನ್‌ಗಳು ಹೆಚ್ಚು ಮಾರಾಟ ಆಗಿವೆ, ಆಗುತ್ತಿವೆ ಎಂಬ ಬಗ್ಗೆ ನಿಮಗೇನಾದರೂ ಗೊತ್ತಾ!?.

ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಐಫೋನ್‌ಗಳು ಒಂದು ಕೈ ಮೇಲೆಯೇ ಇರುತ್ತವೆ. ಯಾಕೆಂದರೆ ಈ ಫೋನ್‌ಗಳ ಕಾರ್ಯಕ್ಷಮತೆ, ಕ್ಯಾಮೆರಾ ಫೀಚರ್ಸ್‌ ಹಾಗೂ ಇನ್ನಿತರೆ ಸೌಲಭ್ಯಗಳು ಇತರೆ ಫೋನ್‌ಗಳಿಗಿಂತ ಬಹಳ ವಿಭಿನ್ನವಾಗಿರಲಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತವೆ. ಈ ಕಾರಣಕ್ಕಾಗಿ ಹತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಎಂಟು ಆಪಲ್‌ನ ಫೋನ್‌ಗಳೇ ಸೇಲ್‌ ಆಗಿವೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಹೆಚ್ಚು ಸೇಲ್‌ ಆಗಿವೆ, ಯಾವ ಕಾರಣಕ್ಕೆ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

2022ರಲ್ಲಿ ಹೆಚ್ಚು ಮಾರಾಟವಾದ ಆಪಲ್‌ ಪೋನ್‌ಗಳಿವು;ಎರಡನೇ ಸ್ಥಾನದಲ್ಲಿಈ ಬ್ರ್ಯಾಂಡ್

ಯಾವೆಲ್ಲಾ ಫೋನ್‌ಗಳು ಹೆಚ್ಚು ಸೇಲ್‌ ಆಗಿವೆ?

ಕೌಂಟರ್‌ಪಾಯಿಂಟ್ ರಿಸರ್ಚ್‌ ಈ ಸಂಬಂಧ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆ ವರದಿಯ ಪ್ರಕಾರ, ಆಪಲ್‌ ಸ್ಮಾರ್ಟ್‌ಫೋನ್‌ ಲೋಕವನ್ನು ಆಳುತ್ತಿದೆ ಎಂದು ಉಲ್ಲೇಖಿಸಿದೆ. ಹಾಗೆಯೇ 2022 ರಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಹತ್ತರಲ್ಲಿ ಎಂಟು ಸ್ಥಾನವನ್ನು ಆಪಲ್‌ ಪಡೆದಿದೆ ಎಂದು ತಿಳಿಸಿದ್ದು, ಈ ಮೂಲಕ ಇಂದಿಗೂ ಆಪಲ್‌ ತನ್ನದೇ ಆದ ವಿಶೇಷ ಕಾರ್ಯಕ್ಷಮತೆಯಿಂದ ಹೆಚ್ಚು ಪ್ರಸಿದ್ಧಿಯಲ್ಲಿದೆ.

ಆಪಲ್‌ಗೆ ತೀವ್ರ ಪೈಪೋಟಿ ಎದುರಿಸಿರುವುದು ಸ್ಯಾಮ್‌ಸಂಗ್‌. ಕಾರಣ ಏನು ಎಂದರೆ ಮಾರಾಟವಾದ ಹತ್ತು ಫೋನ್‌ಗಳಲ್ಲಿ ಎಂಟು ಫೋನ್‌ಗಳು ಆಪಲ್‌ ಫೋನ್‌ಗಳಾದರೆ ಉಳಿದ ಇನ್ನೆರಡು ಸ್ಯಾಮ್‌ಸಂಗ್‌ ಫೋನ್‌ಗಳಾಗಿವೆ. ಈ ಮೂಲಕ ಸ್ಯಾಮ್‌ಸಂಗ್‌ ಆಪಲ್‌ ಮುಂದೆ ಮಂಡಿಯೂರಿ ಕುಳಿತುಕೊಳ್ಳುವಂತೆ ಆಗಿದೆ. ಇನ್ನುಳಿದಂತೆ ಆಪಲ್‌ನ ಐಫೋನ್ 13 ಫೋನ್‌ ಮಾರಾಟವಾದ ಫೋನ್‌ಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ.

ಹಾಗೆಯೇ ಚೀನಾ, ಯುಎಸ್, ಯುಕೆ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಈ ಫೋನ್ ಹೆಚ್ಚು ಸೇಲ್‌ ಆಗಿದ್ದು, ದಾಖಲೆ ಬರೆದಿದೆ. ಅದರಂತೆ ಐಫೋನ್ 13 ಸೆಪ್ಟೆಂಬರ್ 2021 ಲಾಂಚ್‌ ಆಗಿದ್ದು, ಅಂದಿನಿಂದ ಆಗಸ್ಟ್ 2022 ರವರೆಗೆ ಪ್ರತಿ ತಿಂಗಳು ನಂಬರ್ ಒನ್ ಸ್ಮಾರ್ಟ್‌ಫೋನ್ ಆಗಿ ತನ್ನ ಖ್ಯಾತಿ ಉಳಿಸಿಕೊಂಡು ಬಂದಿದೆ. ಇದಕ್ಕೆ ಕಾರಣ ಏನೆಂದರೆ ಇದಾದ ನಂತರ ಲಾಂಚ್‌ ಆದ ಐಫೋನ್ 14 ಫೋನ್‌ ಬೆಲೆ ಹೆಚ್ಚಿಗೆ ಇದ್ದದ್ದು.

2022ರಲ್ಲಿ ಹೆಚ್ಚು ಮಾರಾಟವಾದ ಆಪಲ್‌ ಪೋನ್‌ಗಳಿವು;ಎರಡನೇ ಸ್ಥಾನದಲ್ಲಿಈ ಬ್ರ್ಯಾಂಡ್

ಇ-ಕಾಮರ್ಸ್‌ ತಾಣಗಳಲ್ಲಿ ಹೆಚ್ಚು ರಿಯಾಯಿತಿ ಪಡೆದ ಫೋನ್‌ ಇದು

ಪ್ರಮುಖ ಇ ಕಾಮರ್ಸ್‌ ತಾಣಗಳಾದ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇತರೆ ಸೈಟ್‌ಗಳಲ್ಲಿ ಈ ಐಫೋನ್ 13 ಹೆಚ್ಚು ಮಾರಾಟ ಆಗುತ್ತಿದೆ. ಹಾಗೆಯೇ ಇಂದಿಗೂ ಅಧಿಕ ರಿಯಾಯಿತಿ ಸಹ ಈ ಫೋನ್‌ಗಳಿಗೆ ಲಭ್ಯವಾಗುತ್ತಿರುವುದೇ ಈ ಫೋನ್‌ ಹೆಚ್ಚು ಖರೀದಿಯಾಗಲು ಸಾಧ್ಯವಾಗಿದೆ. ಸದ್ಯಕ್ಕೆ ಈ ಫೋನ್ ಅನ್ನು ನೀವು 69,900ರೂ. ಗಳ ಆರಂಭಿಕ ಬೆಲೆಯಿಂದ ಖರೀದಿ ಮಾಡಬಹುದಾಗಿದೆ.

ಈ ಪಟ್ಟಿಯಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್ ಗೆ ಎರಡನೇ ಸ್ಥಾನ

ಐಫೋನ್ 13 ಆದ ನಂತರ ಹೆಚ್ಚು ಸೇಲ್‌ ಆದ ಫೋನ್‌ಗಳಲ್ಲಿ ಎರಡನೇ ಸ್ಥಾನ ಪಡೆದ ಫೋನ್ ಎಂದರೆ ಐಫೋನ್ 13 ಪ್ರೊ ಮ್ಯಾಕ್ಸ. ವಿಶೇಷ ಎಂದರೆ ಈ ಫೋನ್‌ ಐಫೋನ್ 13 ಪ್ರೊ ಗಿಂತ ಹೆಚ್ಚು ಮಾರಾಟ ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಹಾಗೆಯೇ ಈ ರೀತಿಯ ಬೆಳವಣಿಗೆ ಆಗಿರುವುದು ಇದೇ ಮೊದಲ ಬಾರಿ ಎಂದು ತಂತ್ರಜ್ಞರ ಅಭಿಪ್ರಾಯ. ಇನ್ನುಳಿದಂತೆ ಮೂರನೇ ಸ್ಥಾನದಲ್ಲಿ ಹೊಸ ಐಫೋನ್ 14 ಪ್ರೊ ಇದೆ.

ಹೊಸ ಐಫೋನ್ 14 ಪ್ರೊ ಫೋನ್‌ 2022 ರ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹೆಚ್ಚು ಮಾರಾಟವಾಗಿದೆಯಂತೆ. ಯಾಕೆಂದರೆ ಈ ಫೋನ್‌ ಕಾರ್ಯಕ್ಷಮತೆಯಲ್ಲಿ ಹಿಂದಿನ ಸರಣಿಗಿಂತ ಭಿನ್ನವಾಗಿದ್ದು, ಅದರಲ್ಲಿ ಡೈನಾಮಿಕ್ ಐಲ್ಯಾಂಡ್ ಮತ್ತು ವೇಗದ ಪ್ರೊಸೆಸರ್ ಹೆಚ್ಚು ಜನಪ್ರಿಯತೆ ಪಡೆದಿವೆ. ಇನ್ನು ಶೈಲಿಯ ವಿಚಾರಕ್ಕೆ ಬಂದರೆ ಹಿಂದಿನ ವೇರಿಯಂಟ್‌ ಫೋನ್‌ಗಳ ರೂಪದಲ್ಲೇ ಇದು ಕಾಣಿಸಿಕೊಂಡಿದೆ.

2022ರಲ್ಲಿ ಹೆಚ್ಚು ಮಾರಾಟವಾದ ಆಪಲ್‌ ಪೋನ್‌ಗಳಿವು;ಎರಡನೇ ಸ್ಥಾನದಲ್ಲಿಈ ಬ್ರ್ಯಾಂಡ್

ಈ ಪಟ್ಟಿಯಲ್ಲಿ ಇರುವ ನಾಲ್ಕನೇ ಫೋನ್‌ ಬಗ್ಗೆ ಗಮನಹರಿಸುವುದಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A13 ಎಂಬ ಬಜೆಟ್ ಫೋನ್‌ ಹೆಚ್ಚು ಮಾರಾಟ ಆಗಿದೆ. ಇದಾದ ನಂತರ ಐಫೋನ್‌ 13 ಪ್ರೊ, ಐಫೋನ್‌ 12, ಐಫೋನ್‌ 14, ಐಫೋನ್‌ 14 ಪ್ರೊ ಮತ್ತು ಐಫೋನ್‌ SE 2022 ಹಾಗೂ ಗ್ಯಾಲಕ್ಸಿ A03 ಫೋನ್‌ಗಳು ಕಾಣಿಸಿಕೊಂಡಿದೆ.

Best Mobiles in India

English summary
The report reveals that Apple will occupy eight out of ten of the top selling iPhone in 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+