Just In
- 8 hrs ago
ಇತ್ತೀಚಿನ ಒಪ್ಪೋ ಮೊಬೈಲ್ಗಳಿಗೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
- 21 hrs ago
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- 23 hrs ago
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- 24 hrs ago
20,000ರೂ.ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
Don't Miss
- News
ಆರ್ ಅಶೋಕ್ 1998 ಉಪ ಚುನಾವಣೆಯಲ್ಲಿ ಗೆದ್ದಿದ್ದು ಕಳ್ಳ ವೋಟಿನಿಂದ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Sports
ಥಾಮಸ್ ಕಪ್ ವಿಜೇತರನ್ನು ಅಭಿನಂದಿಸಿದ ಪ್ರಧಾನಿ; ಮೋದಿಗೆ ನೀಡಿದ್ದ ಭರವಸೆ ಈಡೇರಿಸಿದ ಲಕ್ಷ್ಯ ಸೇನ್
- Movies
ರಿಲೀಸ್ಗೂ ಮೊದಲೇ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಭವಿಷ್ಯ ನುಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಫೋನ್ 13 ಖರೀದಿಸುವ ಗ್ರಾಹಕರೇ ಈ ಆಫರ್ ಒಮ್ಮೆ ಗಮನಿಸಿ!
ಆಪಲ್ ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇ ಖದರ್ ಹೊಂದಿವೆ. ಐಫೋನ್‌ಗಳ ಬೆಲೆ ದುಬಾರಿ ಇದ್ದು, ಎಲ್ಲರೂ ಖರೀದಿ ಮಾಡಲು ಮುಂದಾಗುವುದಿಲ್ಲ. ಆದರೆ ಕೆಲವರಿಗೆ ಐಫೋನ್ ಮೇಲೆ ಒಲವು ಇರುತ್ತದೆ. ಇನ್ನು ಕೆಲವು ಗ್ರಾಹಕರು ಐಫೋನ್ ಡಿಸ್ಕೌಂಟ್ನಲ್ಲಿ ಲಭ್ಯ ಇದ್ದಾಗ ಅಥವಾ ಬೆಲೆ ಇಳಿಕೆ ಆದಾಗ ಖರೀದಿಗೆ ಮುಂದಾಗುತ್ತಾರೆ. ಇದೀಗ ಅಂತಹ ಸಮಯ ಬಂದಿದ್ದು, ಆಪಲ್ ಸಂಸ್ಥೆಯ ಇತ್ತೀಚಿನ ಐಫೋನ್ 13 ಭರ್ಜರಿ ರಿಯಾಯಿತಿ ಪಡೆದಿದೆ.

ಹೌದು, ಆಪಲ್ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಐಫೋನ್ 13 ಸರಣಿಯು ನಾಲ್ಕು ಮಾಡೆಲ್‌ಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಆಗಿದೆ. ಆ ಪೈಕಿ ಐಫೋನ್ 13 ಫೋನ್ ಅನ್ನು ಗ್ರಾಹಕರು ಬೊಂಬಾಟ್ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. 128GB ಆಂತರೀಕ ಸಂಗ್ರಹದ ಐಫೋನ್ 13 ಮಾಡೆಲ್ ಅನ್ನು ದೊಡ್ಡ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಈ ಫೋನ್ ಬೆಲೆ 79,900 ರೂ. ಆಗಿತ್ತು.
ಕೊಡುಗೆ ಏನು?
ಅಧಿಕೃತ ಆಪಲ್ ವೆಬ್‌ಸೈಟ್ ನಲ್ಲಿ (Indiaistore.com) ಈ ಕೊಡುಗೆಯನ್ನು ಗ್ರಾಹಕರು ಪಡೆಯಬಹುದು. ಗ್ರಾಹಕರು ಐಫೋನ್ 13 ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿ ಮಾಡಿ ಖರೀದಿಸಿದರೇ, 6,000ರೂ.ಗಳ ರಿಯಾಯಿತಿ ಸಿಗಲಿದೆ. ಹಾಗೆಯೇ ಇಎಮ್‌ಐ ಆಯ್ಕೆಯಲ್ಲಿಯೂ ಈ ಕೊಡುಗೆ ಲಭ್ಯವಾಗಲಿದೆ. ರಿಯಾಯಿತಿ ನಂತರ 73,900 ರೂ.ಗೆ ಸಿಗಲಿದೆ. ಇದರೊಂದಿಗೆ ಐಫೋನ್ ಎಕ್ಸ್‌ಚೆಂಜ್ (ಉತ್ತಮ ಸ್ಥಿತಿಯಲ್ಲಿನ ಐಫೋನ್ ವಿನಿಮಯ) ಮಾಡುವ ಮೂಲಕ ಇನ್ನಷ್ಟು ಆಕರ್ಷಕ ರಿಯಾಯಿತಿ ಪಡೆಯಬಹುದು.

ಐಫೋನ್ 13 ಫೋನ್ ಫೀಚರ್ಸ್
ಐಫೋನ್ 13 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.
ಐಫೋನ್ 13 ಮಿನಿ ಫೋನ್ ಫೀಚರ್ಸ್
ಐಫೋನ್ 13 ಮಿನಿ ಫೋನ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 800nits ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯ.

ಐಫೋನ್ 13 ಪ್ರೊ ಫೋನ್ ಫೀಚರ್ಸ್
ಐಫೋನ್ 13 ಪ್ರೊ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ.
ಐಫೋನ್ 13 ಪ್ರೊ ಮ್ಯಾಕ್ಸ್ ಫೀಚರ್ಸ್
ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತಮ ರೆಸಲ್ಯೂಶನ್ ಪಡೆದಿದೆ. ಸೂಪರ್ ರೆಟೀನಾ XDR ಡಿಸ್‌ಪ್ಲೇ ಮಾದರಿಯಲ್ಲಿದೆ. ಹೈ ಎಂಡ್ ಬ್ರೈಟ್ನೆಸ್ ಹೊಂದಿದೆ. ಹಾಗೆಯೇ ಈ ಫೋನ್ ಸಹ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ನೈಟ್ ಮೋಡ್ ಆಯ್ಕೆ ಇದ್ದು, ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಬಹುದಾಗಿದೆ. ಹಾಗೆಯೇ ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಇದ್ದು, ಅತ್ಯುತ್ತಮ ವಿಡಿಯೋ ರೆಕಾರ್ಡ್ ಬೆಂಬಲಿಸಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ.
ಐಫೋನ್ 12 ಫೀಚರ್ಸ್
ಆಪಲ್ ಕಂಪನಿಯ ಈ ಹಿಂದಿನ ಜನಪ್ರಿಯ ಐಫೋನ್ 12 ಸರಣಿ ಯಲ್ಲಿ ಐಫೋನ್ 12 ಫೋನ್ ಗಮನ ಸೆಳೆದಿದೆ. ಈ ಫೋನ್ OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸಂವೇದಕ ಗಳನ್ನು ಹೊಂದಿವೆ. ನೈಟ್ ಮೋಡ್ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999