Home
ಸುದ್ದಿಜಾಲ

ಐಫೋನ್ 13 ಫೋನ್‌ ಬೆಲೆಯಲ್ಲಿ 27,401 ರೂ.ಕಡಿತ, ಆದ್ರೂ ಖರೀದಿಸಬೇಡಿ! ಯಾಕಂದ್ರೆ?

ಆಪಲ್‌ನ ಐಫೋನ್‌ (Apple iPhone) ಖರೀದಿ ಮಾಡಲು ಮುಂದಾಗಿರುವವರಿಗಂತೂ ಇದು ಹಬ್ಬ ಎನ್ನಬಹುದು. ಯಾಕೆಂದರೆ ಒಂದಾದ ಮೇಲೊಂದರಂತೆ ಆಪಲ್‌ನ ಫೋನ್‌ಗಳಿಗೆ ವಿವಿಧ ರೀತಿಯಲ್ಲಿ ಡಿಸ್ಕೌಂಟ್‌ ಘೋ‍ಷಣೆ ಮಾಡಲಾಗುತ್ತಿದೆ. ಅದರಂತೆ ಈಗ ಐಫೋನ್‌ 15 (iPhone 15) ಸರಣಿ ಲಾಂಚ್‌ ಹಿನ್ನೆಲೆ ಐಫೋನ್ 13( iPhone 13) ಮೇಲೆ 27,401ರೂ.ಗಳ ಬೃಹತ್ ಬೆಲೆ ಕಡಿತವಾಗಿದೆ.

ಹೌದು, ಫ್ಲಾಟ್ ಡಿಸ್ಕೌಂಟ್ ಆಫರ್‌ನೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ(Flipkart) ಐಫೋನ್ 13 ಫೋನ್ 27,401 ರೂ.ಗಳ ದೊಡ್ಡ ಮೊತ್ತದ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಹಾಗಿದ್ರೆ ಈ ಆಫಲ್‌ ಅನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು?, ಈ ಯಾವ ವೇರಿಯಂಟ್‌ಗೆ ಇಷ್ಟೊಂದು ರಿಯಾಯಿತಿ ನೀಡಲಾಗುತ್ತಿದೆ ಎಂಬಿತ್ಯಾದಿ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 13 ಫೋನ್‌ ಬೆಲೆಯಲ್ಲಿ 27,401 ರೂ.ಕಡಿತ, ಆದ್ರೂ ಖರೀದಿಸಬೇಡಿ! ಯಾಕಂದ್ರೆ?

ಐಫೋನ್ 13ಗೆ ಭಾರೀ ಡಿಸ್ಕೌಂಟ್‌: ಐಫೋನ್ 13 ಆಪಲ್‌ನ ಅತ್ಯಂತ ಪ್ರೀತಿಯ ಮಾದರಿಗಳಲ್ಲಿ ಒಂದಾಗಿದ್ದು, ಐಫೋನ್ 14 (iPhone 14) ಗೆ ಹೋಲಿಕೆ ಮಾಡಿಕೊಂಡರೆ ಬಜೆಟ್ ಸ್ನೇಹಿ ಫೋನ್‌ ಇದಾಗಿದೆ. ಪ್ರಸ್ತುತ, ಐಫೋನ್‌ 13 ಗೆ ಭಾರೀ ರಿಯಾಯಿತಿ ನೀಡಲಾಗಿದೆ. ಆದಾಗ್ಯೂ, ಗ್ರಾಹಕರು ತಾಳ್ಮೆಯಿಂದ ವರ್ತಿಸುವುದು ಮತ್ತು ಇನ್ನೂ ಕೆಲವು ದಿನಗಳವರೆಗೆ ಅದನ್ನು ಖರೀದಿಸದೆ ಇರುವುದು ಸೂಕ್ತವಾಗಿದೆ.

ಐಫೋನ್ 13 ಫೋನ್‌ನ 128GB ಸ್ಟೋರೇಜ್ ಮಾಡೆಲ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ 52,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರ ಸಾಮಾನ್ಯ ದರ 79,900 ರೂ.ಗಳು. ಈ ಮೂಲಕ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ 27,401ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಆಪಲ್‌ ಈ ಫೋನ್‌ ಲಾಂಚ್‌ ಮಾಡಿದಾಗ 79,900ರೂ.ಗಳಿಗೆ ಪರಿಚಯಿಸಿತ್ತು. ಕಳೆದ ವರ್ಷ 69,900 ರೂಳ.ಗಳಿಗೆ ಇಳಿಯಿತು. ಈಗ 59,900 ರೂ.ಗಳಿಗೆ ಇಳಿದಿದೆ.

ಐಫೋನ್ 13 ಅನ್ನು ಈಗ ಯಾಕೆ ಖರೀದಿ ಮಾಡಬಾರದು?: ಇನ್ನೇನು ಕೆಲವೇ ದಿನಗಳಲ್ಲಿ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್‌ ಆಯೋಜನೆ ಮಾಡಲಾಗುತ್ತದೆ. ಈ ಎರಡೂ ಪ್ಲಾಟ್‌ಫಾರ್ಮ್‌ಗಳು ಫೋನ್‌ಗಳ ಮೇಲೆ ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಘೋಷಣೆ ಮಾಡಲಿವೆ. ಟೀಸರ್‌ಗಳು ಸೂಚಿಸಿದಂತೆ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟ ಮತ್ತು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಅಕ್ಟೋಬರ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಆರಂಭ ಆಗಲಿದೆ.

ಜೊತೆಗೆ ಫ್ಲಿಪ್‌ಕಾರ್ಟ್ ನೀಡುರುವ ಟೀಸರ್ ಪೇಜ್‌ನಲ್ಲಿ ಐಫೋನ್‌ಗಳಲ್ಲಿ ದೊಡ್ಡ ರಿಯಾಯಿತಿ ಸಿಗಲಿದೆ ಎಂದು ತಿಳಿದುಬಂದಿದೆ. ಆದರೆ ಈ ಟೀಸರ್‌ನಲ್ಲಿ ಐಫೋನ್ 14 ಅನ್ನು ಉಲ್ಲೇಖಿಸಿಲ್ಲ. ಬದಲಾಗಿ ಐಫೋನ್ 13 ಅನ್ನು ತೋರಿಸಲಾಗಿದೆ. ಈ ಸಂಬಂಧ ಉಳಿದ ವಿವರಗಳು ಸದ್ಯಕ್ಕೆ ತಿಳಿದಿಲ್ಲ. ಅದಾಗ್ಯೂ ಐಫೋನ್ 13 ಮತ್ತು ಐಫೋನ್ 14 ಕೆಲವು ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿದೆ ಇದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಚೇಂಜ್ ಆಫರ್‌ಗಳನ್ನು ಸಹ ಕ್ಲೈಮ್ ಮಾಡಿಕೊಳ್ಳಬಹುದು.ಈ ಮೂಲಕ ಐಫೋನ್ 13 ಅನ್ನು 45,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹೀಗಾಗಿ ನೀವು ಐಫೋನ್‌ ಅನ್ನು ಖರೀದಿ ಮಾಡಬೇಕು ಎಂದರೆ ಈ ತಿಂಗಳ ಅಂತ್ಯದ ವರೆಗೂ ತಾಳ್ಮೆಯಿಂದ ಇರುವುದು ಯೋಗ್ಯವಾಗಿದೆ. ಇದರಿಂದ ನೀವು ಹಣ ಉಳಿತಾಯ ಮಾಡಬಹುದಾಗಿದೆ.

ಐಫೋನ್ 13 ಫೋನ್‌ ಬೆಲೆಯಲ್ಲಿ 27,401 ರೂ.ಕಡಿತ, ಆದ್ರೂ ಖರೀದಿಸಬೇಡಿ! ಯಾಕಂದ್ರೆ?

ಇನ್ನು ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನ ವಿಶೇಷ ಸೇಲ್‌ನಲ್ಲಿ ಕೇವಲ ಐಫೋನ್‌ ಮಾತ್ರವಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ, ಐಕ್ಯೂ, ರಿಯಲ್‌ಮಿ, ಪೊಕೊ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ನೀಡಲಾಗುತ್ತದೆ ಎಂದು ಟೀಸರ್‌ ಮೂಲಕ ತಿಳಿದುಬಂದಿದೆ. ಇದರಿಂದಾಗಿ ಐಫೋನ್‌ ಖರೀದಿ ಮಾಡಲು ಯಾರಿಗೆಲ್ಲಾ ಸಾಧ್ಯ ಇಲ್ಲವೋ ಅವರು ಈ ಆಂಡ್ರಾಯ್ಡ್‌ ಫೋನ್‌ಗಳನ್ನು ಅದರಲ್ಲೂ ಇತ್ತೀಚಿಗೆ ಲಾಂಚ್‌ ಆಗಿರುವ ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
The iPhone 13 phone has received a huge price cut of Rs 27,401 on Flipkart with a flat discount offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+