Home
ಸುದ್ದಿಜಾಲ

iPhone 13 ಮೊಬೈಲ್‌ಗೆ ಮತ್ತೆ ಭಾರೀ ಡಿಸ್ಕೌಂಟ್‌; ಈ ಚಾನ್ಸ್‌ ಕಳ್ಕೋಬೇಡಿ!

ಪ್ರಮುಖ ಆನ್‌ಲೈನ್‌ ಸ್ಟೋರ್‌ಗಳ ಪೈಕಿ ಒಂದಾಗಿರುವ ಅಮೆಜಾನ್‌ (Amazon) ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ವಿಶೇಷ ಮಾರಾಟ ಮೇಳ ಆಯೋಜಿಸುತ್ತ ಸಾಗಿದೆ. ಇದೀಗ ದೀಪಾವಳಿ ಪ್ರಯುಕ್ತ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ ಸೇಲ್‌ ಘೋಷಿಸಿದೆ. ಈ ಮಾರಾಟದಲ್ಲಿ ಹಲವು ಉತ್ಪನ್ನಗಳು ರಿಯಾಯಿತಿ ಪಡೆದಿದ್ದು, ಮೊಬೈಲ್‌ಗಳು ಕೂಡಾ ಬೊಂಬಾಟ್‌ ಬೆಲೆಯಲ್ಲಿಯಲ್ಲಿ ಲಭ್ಯ ಇವೆ. ಮುಖ್ಯವಾಗಿ ಆಪಲ್‌ ಸಂಸ್ಥೆಯ ಐಫೋನ್‌ 13 (iPhone 13) ವಾವ್‌ ಎನಿಸುವ ಡಿಸ್ಕೌಂಟ್‌ ಪಡೆದಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.

ಹೌದು, ಇ ಕಾಮರ್ಸ್‌ ದೈತ್ಯ ಅಮೆಜಾನ್‌ (Amazon) ಇ-ಕಾಮರ್ಸ್ ತಾಣದಲ್ಲಿ ಇದೀಗ ಆಯ್ದ ಕೆಲವು ಜನಪ್ರಿಯ ಫೋನ್‌ಗಳು ಸಖತ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಆಪಲ್‌ ಐಫೋನ್‌ 13 ಮೊಬೈಲ್‌ ದೊಡ್ಡ ಡೀಲ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಐಫೋನ್‌ ಪ್ರಿಯರು ಅಚ್ಚರಿ ಪಡುವಂತೆ ಆಗಿದೆ. ಅದೇ ರೀತಿ ಆಪಲ್‌ ಐಫೋನ್‌ 14, ಐಫೋನ್‌ 15 ಮೊಬೈಲ್‌ಗಳು ಸಹ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

iPhone 13 ಮೊಬೈಲ್‌ಗೆ ಮತ್ತೆ ಭಾರೀ ಡಿಸ್ಕೌಂಟ್‌; ಈ ಚಾನ್ಸ್‌ ಕಳ್ಕೋಬೇಡಿ!

ಅಮೆಜಾನ್‌ (Amazon) ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ ಮಾರಾಟದಲ್ಲಿ ಐಫೋನ್‌ 13 (128GB) ಫೋನ್‌ 42,999ರೂ. ಗಳ ವಿಶೇಷ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಇದಕ್ಕೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ ಕೊಡುಗೆಗಳನ್ನು ಹಾಗೂ ಆಕರ್ಷಕ ಇಎಮ್‌ಐ ಆಯ್ಕೆ ಕೂಡಾ ಪಡೆಯಬಹುದಾಗಿದೆ. ಬ್ಯಾಂಕ್‌ ಆಫರ್‌ ಪಡೆದುಕೊಂಡರೇ ಇನ್ನಷ್ಟು ರಿಯಾಯಿತಿ ಸಿಗಲಿದೆ. ಹಾಗಿದ್ರೆ, Amazon ತಾಣದಲ್ಲಿ ಡಿಸ್ಕೌಂಟ್‌ ಬೆಲೆಗೆ ಐಫೋನ್‌ 13 ಖರೀದಿಸಿ. ಇನ್ನುಳಿದಂತೆ ಆಪಲ್‌ ಐಫೋನ್‌ 13 ಮೊಬೈಲ್‌ನ ಫೀಚರ್ಸ್‌ ಬಗ್ಗೆ ತಿಳಿಯೋಣ. ಮುಂದೆ ಓದಿರಿ.

ಐಫೋನ್ 13 ಮೊಬೈಲ್‌ ಫೀಚರ್ಸ್‌ ಹೀಗಿವೆ

ಐಫೋನ್ 13 ಮೊಬೈಲ್‌ 6.1 ಇಂಚಿನ ರೇಟಿನಾ XDR ಡಿಸ್‌ಪ್ಲೇ ಹೊಂದಿದ್ದು, 2532 X1170 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 460 ppi ಸಹ ಪಡೆದಿದೆ. ಇದರ ಜೊತೆಗೆ 1200 nits ಬ್ರೈಟ್ನೆಸ್‌ ಹೊಂದಿದೆ. ಅಲ್ಲದೇ ಇದು ಫಿಂಗರ್ಪ್ರಿಂಟ್-ನಿರೋಧಕ ಓಲಿಯೋಫೋಬಿಕ್ ಲೇಪನ ಪಡೆದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ (A15 Bionic chip) ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಅಲ್ಲದೇ 5G ಅನ್ನು ಸಪೋರ್ಟ್‌ ಮಾಡುತ್ತದೆ.

ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಮೊದಲ ಕ್ಯಾಮೆರಾವು 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಕ್ಯಾಮೆರಾವು 5x ವರೆಗೆ ಡಿಜಿಟಲ್ ಜೂಮ್, ಸೆನ್ಸರ್-ಶಿಫ್ಟ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, ಪನೋರಮಾ (63MP ವರೆಗೆ), ನೈಟ್‌ ಮೋಡ್, ಬರ್ಸ್ಟ್ ಮೋಡ್, ಡೀಪ್ ಫ್ಯೂಷನ್, ಸ್ಮಾರ್ಟ್ HDR 4 ನಂತಹ ಆಯ್ಕೆಗಳನ್ನು ಒಳಗೊಂಡಿದಕೆ.

ಅಲ್ಲದೇ ಈ ಫೋನ್‌ ಕ್ಯಾಮೆರಾವು 60 fps ನಲ್ಲಿ 4K ವರೆಗೆ ಡಾಲ್ಬಿ ವಿಷನ್‌ನೊಂದಿಗೆ HDR ವೀಡಿಯೊ ರೆಕಾರ್ಡಿಂಗ್, ವೀಡಿಯೊಗಾಗಿ ಸೆನ್ಸರ್-ಶಿಫ್ಟ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ವೈಡ್), 24 fps, 25 fps, 30 fps, ಅಥವಾ 60 fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಸಪೋರ್ಟ್‌ ಮಾಡುತ್ತದೆ. ಹಾಗೆಯೇ ಇದು 120 fps ಅಥವಾ 240 fps ನಲ್ಲಿ 1080p ಗಾಗಿ ಸ್ಲೋ ಮೋಷನ್‌ ವೀಡಿಯೊ ಸಪೋರ್ಟ್ ಮಾಡುತ್ತದೆ. ಇದು QuickTake ವೀಡಿಯೊ ಆಯ್ಕೆ ಒಳಗೊಂಡಿದೆ.

Best Mobiles in India

English summary
iPhone 13 Receive Massive Price Cut on Amazon Great Indian Festival Sale. check offer details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+