iphone: ಆಪಲ್ ಐಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್! 50 ಸಾವಿರಕ್ಕಿಂತ ಕಡಿಮೆಗೆ ಈ ಫೋನ್ ಲಭ್ಯ
ಆಪಲ್ ಐಫೋನ್ (Apple iPhone) ಅಂದ್ರೆ ಭಾರತೀಯರಿಗೆ ವಿಶೇಷವಾದ ಪ್ರೀತಿ. ಅದರಲ್ಲೂ ಬಹುಪಾಲು ಜನರು ಹಣ ಇಲ್ಲದೇ ಇದ್ದರೂ ಸಹ ಇಎಮ್‌ಐ ಆಯ್ಕೆಯಲ್ಲಿ ಈ ಫೋನ್ ಅನ್ನು ಖರೀದಿ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಈ ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಇದೆ. ಆದರೆ ಈಗ ನೀವು ಆಫರ್ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ.
ಹೌದು, ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale) ಸಮಯದಲ್ಲಿ ಐಫೋನ್ 13 (iPhone 13) ಅನ್ನು ಭಾರೀ ಆಫರ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ನಿಮಗೆ ಲಭ್ಯ ಇರಲಿದೆ. ಹಾಗಿದ್ರೆ, ಈ ವಿಶೇಷ ಸೇಲ್ ಎಂದಿನಿಂದ ಆರಂಭ, ಯಾವ ವೇರಿಯಂಟ್‌ಗೆ ಈ ಆಫರ್ ಇರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಐಫೋನ್ 13 ಗೆ ಆಫರ್ : ಐಫೋನ್ 13 ನ ಸಾಮಾನ್ಯ ವೇರಿಯಂಟ್‌ನ ಸಾಮಾನ್ಯ ಬೆಲೆ 49,999 ರೂ.ಆಗಿದ್ದು, ಅಮೆಜಾನ್‌ನಲ್ಲಿ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಮ್‌ಐ ವ್ಯವಹಾರ ಬಳಕೆ ಮಾಡಿದ್ರೆ 1,000 ರಿಯಾಯಿತಿಯೊಂದಿಗೆ 48,999 ರೂ.ಗಳಲ್ಲಿ ಇದನ್ನು ಖರೀದಿ ಮಾಡಬಹುದು. ಈ ವೇಳೆ ನೀವು ವಿನಿಮಯ ಆಫರ್ ಬಳಕೆ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಹಳೆಯ ಫೋನ್ ಉತ್ತಮವಾಗಿದ್ದರೆ 22,500ರೂ.ವರೆಗೂ ಹಣ ಉಳಿತಾಯ ಮಾಡಬಹುದಾಗಿದೆ.
ಇನ್ನೂ ಅಮೆಜಾನ್‌ನ ಈ ವಿಶೇಷ ಸೇಲ್ ನಾಳೆಯಿಂದ ಅಂದರೆ ಜನವರಿ 13 ರಂದು ಆರಂಭ ಆಗಲಿದ್ದು, ಜನವರಿ 17 ರವರೆಗೆ ಇರುತ್ತದೆ. ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಸೇಲ್ ಲೈವ್ ಆಗಲಿದ್ದು, ಅಮೆಜಾನ್ ಪ್ರೈಮ್ ಗ್ರಾಹಕರು ಎಂದಿನಂತೆ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಇವರು ಜನವರಿ 13 ರ ಮಧ್ಯರಾತ್ರಿಯಿಂದ ಈ ಸೇಲ್‌ಗೆ ಎಂಟ್ರಿ ನೀಡಬಹುದಾಗಿದೆ.

ಗಮನಾರ್ಹವಾಗಿ, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ (Amazon, Flipkart) ಈಗ 128GB ವೇರಿಯಂಟ್‌ನ ಐಫೋನ್ 13 ಬೆಲೆ 53,000 ರೂ.ಗಳಾಗಿದೆ. ಇನ್ನು ಐಫೋನ್ 13 ರ ಹೊರತಾಗಿ, ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಮತ್ತು ಐಫೋನ್ 15 ಸರಣಿಗಳು ಸೇರಿದಂತೆ ಇತರ ಐಫೋನ್ ವೇರಿಯಂಟ್‌ಗಳು ಮುಂಬರುವ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ವಿಶೇಷ ಸೇಲ್‌ನಲ್ಲಿ ಬೆಲೆ ಕಡಿತದೊಂದಿಗೆ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಐಫೋನ್ 13 ಫೀಚರ್ಸ್: ಈ ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಇದು 2532x1170 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 460 PPI ನ ಪಿಕ್ಸೆಲ್ ಸಾಂದ್ರತೆ, ಹೆಚ್‌ಡಿಆರ್ ಸೌಲಭ್ಯ ಪಡೆದಿದ್ದು, 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಜೊತೆಗೆ ಈ ಫೋನ್ ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ಹೊಂದಿದ್ದು, ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಪಡೆದಿದೆ.

ಹಾಗೆಯೇ ಹೆಚ್ಚು ಬೇಡಿಕೆ ಇರುವ ಈ ಫೋನ್ A15 ಬಯೋನಿಕ್ ಚಿಪ್‌ಸೆಟ್ ಬಲ ಪಡೆದಿದ್ದು, ಇದನ್ನು 5nm ಉತ್ಪಾದನಾ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ ಜೊತೆಗೆ ಇದು 6 ಕೋರ್ CPU ಅನ್ನು ಒಳಗೊಂಡಿದೆ. ಉಳಿದಂತೆ f/1.6 ದ್ಯುತಿರಂಧ್ರವನ್ನು ಹೊಂದಿರುವ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.


Click it and Unblock the Notifications








