ಐಫೋನ್ 14 ಬೆಲೆಯಲ್ಲಿ ಭರ್ಜರಿ ಇಳಿಕೆ: ಈ ಆಫರ್ ಎಲ್ಲಿ ಲಭ್ಯ!?
ಐಫೋನ್‌ಗಳು ದುಬಾರಿ ಬೆಲೆ ಹೊಂದಿದ್ದರೂ ಸಹ ಇವುಗಳ ಖರೀದಿಗೆ ಜನರು ಹಿಂದೇಟು ಹಾಕುವುದಿಲ್ಲ. ಯಾಕೆಂದರೆ ಈ ಫೋನ್‌ಗಳ ಭದ್ರತಾ ಫೀಚರ್ಸ್, ಕಾರ್ಯಕ್ಷಮತೆ ಹಾಗೂ ಇನ್ನಿತರೆ ಸೌಲಭ್ಯಗಳು ಬಳಕೆದಾರರನ್ನು ಹೆಚ್ಚು ಆಕರ್ಷಿಸುತ್ತವೆ. ಈ ನಡುವೆ ನೀವು ನಿರೀಕ್ಷಿಸದ ಬೆಲೆಗೆ ಐಫೋನ್ 14 ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಹೌದು, ಆಫಲ್ ಐಫೋನ್ 14(Apple iPhone 14)ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 30,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.ಈ ಫೋನ್ ಐಫೋನ್ ಶ್ರೇಣಿಯಲ್ಲಿ ಮೂಲ ಮಾದರಿಯಾಗಿದ್ದು,ಕಳೆದ ವರ್ಷ ಕಂಪನಿಯಿಂದ ಬಿಡುಗಡೆಯಾದ ಈ ಫೋನ್ ಅನ್ನು ಪರ್ಫೆಕ್ಟ್ ರೆಕ್ ನಡೆಸಿದ ಸಮೀಕ್ಷೆಯಲ್ಲಿ ಒಂದು ದಶಕದಲ್ಲಿ ಆಪಲ್‌ನ ಅತಿದೊಡ್ಡ ಗ್ರಾಹಕ ನಿರಾಶೆ ಎಂದು ರೇಟ್ ಮಾಡಲಾಗಿದೆ.ಇದರಿಂದಾಗಿಯೇ ಈ ಫೋನ್‌ಗೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.ಹಾಗಿದ್ರೆ,ಬನ್ನಿ ಈ ಫೋನ್‌ಗೆ ಇರುವ ಆಫರ್ ವಿವರ, ಫೀಚರ್ಸ್ ಕಡೆ ಕಣ್ಣಾಯಿಸೋಣ.

ಐಫೋನ್ 14 ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳನ್ನು ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, 800ನಿಟ್ಸ್ ಕನಿಷ್ಠ ಹಾಗೂ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 1170 x 2532 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಇದರಲ್ಲಿದೆ.
ಐಫೋನ್ 14 ಪ್ರೊಸೆಸರ್ ವಿವರ: ಈ ಫೋನ್ ಆಪಲ್‌ನ A15 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, iOS 16 ರನ್ ಆಗಲಿದೆ. ಜೊತೆಗೆ iOS 16.4.1 ಗೆ ಅಪ್‌ಗ್ರೇಡ್ ಸಹ ಮಾಡಬಹುದಾಗಿದೆ. ಇನ್ನು 6GB RAM ಹಾಗೂ 128GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಮತ್ತು 6GB RAM ಹಾಗೂ 256GB, 6GB RAM, 512GB ನ ವಿವಿಧ ವೇರಿಯಂಟ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ.
ಐಫೋನ್ 14 ಕ್ಯಾಮೆರಾ ರಚನೆ: ಇದರ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 12 MPಯ ಪ್ರಾಥಮಿಕ ಸೆನ್ಸರ್ ಹಾಗೂ ಇದೇ ಪಿಕ್ಸೆಲ್‌ನ ಸೆಕೆಂಡರಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ ಸೆಲ್ಫಿ ಉದ್ದೇಶಕ್ಕಾಗಿ ಈ ಫೋನ್ 12MP ನ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದರಲ್ಲಿ ಹೆಚ್‌ಡಿಆರ್, ಸಿನಿಮಾಟಿಕ್ ಮೋಡ್, 4K ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

ಐಫೋನ್ 14 ಬ್ಯಾಟರಿ ಹಾಗೂ ಇತರೆ: ಈ ಫೋನ್ 3279mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 15W ಹಾಗೂ 7.5W ನ ಎರಡು ಆಯ್ಕೆಯ ವೇಗದ ಚಾರ್ಜಿಂಗ್‌ಗೆ ಬೆಂಬಲ ಪಡೆದುಕೊಂಡಿದೆ. ಈ ಮೂಲಕ ಅರ್ಧಗಂಟೆಯಲ್ಲಿ 50% ಚಾರ್ಜಿಂಗ್ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೋನ್ ಸ್ಟೀರಿಯೋ ಸ್ಪೀಕರ್ ಸೌಲಭ್ಯ, 3.5 ಎಂಎಂ ಜ್ಯಾಕ್ ಆಯ್ಕೆ, ವೈಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಹಾಟ್‌ಸ್ಪಾಟ್ ಬ್ಲೂಟೂತ್ ಆವೃತ್ತಿ 5.3 ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ಐಫೋನ್ 14 ಆಫರ್ ಮಾಹಿತಿ: ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 67,999 ರೂ.ಗೆ ಕಾಣಿಸಿಕೊಂಡಿದ್ದು, ಖರೀದಿದಾರರು ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇಎಮ್‌ಐ ವಹಿವಾಟಿನ ಮೇಲೆ 4000ರೂ.ರಿಯಾಯಿತಿ ನೀಡಲಾಗುತ್ತದೆ. ಈ ಮೂಲಕ ಈ ಫೋನ್ ಬೆಲೆ 63,999ರೂ.ಗೆ ಇಳಿಯುತ್ತದೆ. ನಂತರ ವಿನಿಮಯ ಆಫರ್ ಬಳಕೆ ಮಾಡಿಕೊಂಡು ಬರೋಬ್ಬರಿ 33,000ರೂ.ವರೆಗೂ ಡಿಸ್ಕೌಂಟ್ ಪಡೆಯಬಹುದು. ಇದರಿಂದಾಗಿ ನೀವು ಕೈಗೆಟಕುವ ದರದಲ್ಲಿಈ ದುಬಾರಿ ಬೆಲೆಯ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬುದು.

ಇನ್ನು ಆಪಲ್ ಐಫೋನ್ 14 ಫೋನ್ ಐಫೋನ್ 13 ನಂತೆಯೇ ಬಹುತೇಕ ಫೀಚರ್ಸ್‌ಗಳನ್ನು ಹೊಂದಿದೆ. ಆದರೆ ಹೆಚ್ಚಿನ ಬೆಲೆಯನ್ನು ಹೊಂದಿದೆ. ಆದರೆ, ಇತ್ತೀಚಿನ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿರುವುದರಿಂದಾಗಿ ನೀವು ಸುಲಭವಾಗಿ ಈ ಫೋನ್ ಅನ್ನು ಖರೀದಿ ಮಾಡಬಹುದು.


Click it and Unblock the Notifications








