Home
ಸುದ್ದಿಜಾಲ

ಐಫೋನ್ 14 ಗೆ ಯಾವ ಇ-ಕಾಮರ್ಸ್‌ ಸೈಟ್‌ ಹೆಚ್ಚು ಡಿಸ್ಕೌಂಟ್ ನೀಡಿದೆ: ಇಲ್ಲಿದೆ ವಿವರ

ಐಫೋನ್‌ ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗುತ್ತಿದೆ ಎಂದರೆ ಯಾರು ತಾನೆ ಖರೀದಿ ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ ಹೇಳಿ. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ವಿವಿಧ ರೀತಿಯ ಡಿಸ್ಕೌಂಟ್‌ ಇದ್ದು, ಪ್ರತಿ ಸೈಟ್‌ಗಳು ಸಹ ಖರೀದಿ ಮಾಡುವವರಿಗೆ ಹಲವು ರೀತಿಯಲ್ಲಿ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿವೆ. ಈ ಮೂಲಕ ನಿಮಗಿಷ್ಟದ ಈ ಇ-ಕಾಮರ್ಸ್‌ ಸೈಟ್‌ ಮೂಲಕ ಐಫೋನ್ ಖರೀದಿ ಮಾಡಬಹುದು.

ಹೌದು, ಐಫೋನ್‌ಗಳು ನಿಮಗೆಲ್ಲರಿಗೂ ತಿಳಿದಂತೆ ಕೊಂಚ ದುಬಾರಿ. ಆದರೂ ಈ ಫೋನ್‌ಗಳಿಗೆ ಭಾರೀ ಬೇಡಿಕೆ ಇದೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ ಆಗಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್, ವಿಜಯ ಸೇಲ್ಸ್‌ ಹಾಗೂ ಕ್ರೋಮಾದಲ್ಲಿ ಐಫೋನ್ 14 ಗೆ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಈ ನಡುವೆ ಯಾವ ಪ್ಲಾಟ್‌ಫಾರ್ಮ್‌ ಬೆಸ್ಟ್‌ ಎಂದು ನೋಡೋಣ ಬನ್ನಿ. ಜೊತೆಗೆ ಯಾವೆಲ್ಲಾ ಬ್ಯಾಂಕ್‌ ಕಾರ್ಡ್‌ಗಳಿಗೆ ಏನೆಲ್ಲಾ ಆಫರ್‌ ಇದೆ ಗಮನಿಸಿ.

ಐಫೋನ್ 14 ಗೆ ಯಾವ ಇ-ಕಾಮರ್ಸ್‌ ಸೈಟ್‌ ಹೆಚ್ಚು ಡಿಸ್ಕೌಂಟ್ ನೀಡಿದೆ: ಇಲ್ಲಿದೆ ವಿವರ

ಐಫೋನ್ 14 ಗೆ ಭಾರೀ ಡಿಸ್ಕೌಂಟ್‌: ಈ ಮೇಲೆ ತಿಳಿಸಿದ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಈ ಫೋನ್‌ಗೆ ಇದೀಗ ಪೈಪೋಟಿಯಲ್ಲಿ ಆಫರ್‌ ಬೆಲೆ ಘೋಷಣೆ ಮಾಡಿವೆ. ಇನ್ನು 128GB ಬೇಸ್‌ ಮಾಡೆಲ್‌ನ ಫೋನ್ ಈ ಫೋನ್, 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, ಕನಿಷ್ಠ 800 ನಿಟ್ಸ್‌ ಬ್ರೈಟ್‌ನೆಸ್‌ ಹಾಗೂ ಗರಿಷ್ಠ 1200 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ A15 ಬಯೋನಿಕ್ ಚಿಪ್‌ಸೆಟ್‌ ಬಲ ಹೊಂದಿದೆ.

ವಿಜಯ್ ಸೇಲ್ಸ್‌ನಲ್ಲಿ ಎಷ್ಟಿದೆ ಡಿಸ್ಕೌಂಟ್‌: ವಿಜಯ್ ಸೇಲ್ಸ್‌ನಲ್ಲಿ ಐಫೋನ್ 14 70999ರೂ. ಗಳ ಆರಂಭಿಕ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ, ನೀವು ಹೆಚ್ಚುವರಿ ರಿಯಾಯಿತಿ ಕೊಡುಗೆ ಬಳಕೆ ಮಾಡಿಕೊಳ್ಳಬಹುದು. ಇದರಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು 4000ರೂ.ಗಳ ಫ್ಲಾಟ್ ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು. ಈ ಮೂಲಕ ಈ ಫೋನ್ ಅನ್ನು 66,999ರೂ. ಗಳಿಗೆ ಖರೀದಿ ಮಾಡಬಹುದು.

ಅಮೆಜಾನ್‌ನಲ್ಲಿ ಆಫರ್‌ ಎಷ್ಟಿದೆ?: ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಈ ಫೋನ್ 71,999ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಹೆಚ್ಚುವರಿ ರಿಯಾಯಿತಿ ಕೊಡುಗೆಗಳು ಲಭ್ಯ ಇದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು 4000 ರೂ. ಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಈ ಮೂಲಕ ಅವರು 67,999ರೂ. ಗಳಿಗೆ ಈ ಫೋನ್‌ ತಮ್ಮದಾಗಿಸಿಕೊಳ್ಳಬಹುದು. ಇದರೊಂದಿಗೆ ಇನ್ನೂ ಹೆಚ್ಚಿನ ವಿನಿಮಯ ಹಾಗೂ ಬ್ಯಾಂಕ್‌ ಆಫರ್ ಲಭ್ಯ.

ಐಫೋನ್ 14 ಗೆ ಯಾವ ಇ-ಕಾಮರ್ಸ್‌ ಸೈಟ್‌ ಹೆಚ್ಚು ಡಿಸ್ಕೌಂಟ್ ನೀಡಿದೆ: ಇಲ್ಲಿದೆ ವಿವರ

ಫ್ಲಿಪ್‌ಕಾರ್ಟ್‌ನಲ್ಲಿ ಎಷ್ಟಿದೆ?: ಮತ್ತೊಂದು ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ 69,999ರೂ. ಗಳ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು 4,000 ರೂ. ಗಳ ಫ್ಲಾಟ್ ರಿಯಾಯಿತಿಯೊಂದಿಗೆ 65,999ರೂ. ಗಳಿಗೆ ಈ ಫೋನ್‌ ಖರೀದಿ ಮಾಡಬಹುದು. ಹಾಗೆಯೇ ಇದರಲ್ಲೂ ವಿನಿಮಯ ಹಾಗೂ ಇನ್ನಿತರೆ ಆಫರ್‌ ಲಭ್ಯ ಇದ್ದು, ಸದುಪಯೋಗಪಡಿಸಿಕೊಳ್ಳಬಹುದು.

ಕ್ರೋಮಾದಲ್ಲಿ ಸಿಗುವ ಆಫರ್ ಏನು?: ನೀವೇನಾದರೂ ಕ್ರೋಮಾ ಸೈಟ್‌ ಮೂಲಕ ಖರೀದಿ ಮಾಡಲು ಮುಂದಾದರೆ ಈ ಫೋನ್‌ ಖರೀದಿಗೆ 71,999ರೂ. ಗಳಲ್ಲಿ ಖರೀದಿ ಮಾಡಬಹುದು. ಆದರೆ, ಇದು ಸಾಮಾನ್ಯ ದರ ಆಗಿದ್ದು. ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು 4,000 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನೀವು ಈ ಫೋನ್‌ ಅನ್ನು 67,999 ರೂ. ಗಳಿಗೆ ಕೊಂಡುಕೊಳ್ಳಬಹುದು.

ಐಫೋನ್ 14 ಗೆ ಯಾವ ಇ-ಕಾಮರ್ಸ್‌ ಸೈಟ್‌ ಹೆಚ್ಚು ಡಿಸ್ಕೌಂಟ್ ನೀಡಿದೆ: ಇಲ್ಲಿದೆ ವಿವರ

ಈ ನಾಲ್ಕರಲ್ಲಿ ಯಾವುದು ಬೆಸ್ಟ್‌?: ಈ ನಾಲ್ಕು ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಉತ್ತಮ ಆಫರ್‌ ಘೋಷಣೆ ಮಾಡಿದರಾದರೂ ಸಹ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ ಹೆಚ್ಚಿನ ರಿಯಾಯಿತಿ ಲಭ್ಯ ಇದೆ. ಅದರಲ್ಲೂ ವಿನಿಮಯ ಆಫರ್‌ ಇರುವುದರಿಂದ ಈ ಮೂಲಕ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಳ್ಳುವುದರೊಂದಿಗೆ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Best Mobiles in India

English summary
As you all know iPhones are quite expensive. However, there is a huge demand for these phones. Meanwhile, major e-commerce sites Amazon, Flipkart, Vijaya Sales and Chroma have announced huge offers for iPhone 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+