Home
ಸುದ್ದಿಜಾಲ

ಐಫೋನ್‌ 14 ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಿದ ಯುನಿಕಾರ್ನ್ ಸ್ಟೋರ್‌!

ಐಫೋನ್‌ 14 ಖರೀದಿ ಮಾಡಬೇಕು ಎಂದುಕೊಂಡವರು ತಮ್ಮ ಕನಸನ್ನು ಈಗ ನನಸು ಮಾಡಿಕೊಳ್ಳಬಹುದು. ಅದೂ ಸಹ ಭಾರೀ ರಿಯಾಯಿತಿ ಪಡೆದುಕೊಳ್ಳುವ ಮೂಲಕ. ಅಂದರೆ ಐಫೋನ್‌ 14 ಫೋನ್‌ಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಈ ವಿಶೇಷ ಮಾರಾಟದಲ್ಲಿ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಹೌದು, ಐಫೋನ್‌ ದುಬಾರಿ ಬೆಲೆ ಹೊಂದಿದ್ದು, ಬಹುಪಾಲು ಮಂದಿಗೆ ಈ ಫೋನ್‌ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಅದಾಗ್ಯೂ ಹೇಗಾದರೂ ಮಾಡಿ ಖರೀದಿಮಾಡಲೇಬೇಕು ಎಂದುಕೊಂಡವರಿಗೆ ಇದು ಅತ್ಯುತ್ತಮ ಸಮಯ. ಹಾಗಿದ್ರೆ, ಈ ಐಫೋನ್‌ 14 ಅನ್ನು ಕಡಿಮೆ ಬೆಲೆಗೆ ಹೇಗೆ ಖರೀದಿ ಮಾಡಬಹುದು?, ಇದರ ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 14 ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಿದ ಯುನಿಕಾರ್ನ್ ಸ್ಟೋರ್‌!

ಐಫೋನ್‌ 14 ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸೋಣ. ಇದು 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಇದು ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಆಗಿದೆ. ಇನ್ನು ಡಿಸ್‌ಪ್ಲೇ 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಆಪಲ್‌ನ ಸೆರಾಮಿಕ್ ಶೀಲ್ಡ್ ಗ್ಲಾಸ್ ರಕ್ಷಣೆಯನ್ನು ಪಡೆದಿದೆ.

ಐಫೋನ್‌ 14 ಪ್ರೊಸೆಸರ್‌ ಸಾಮರ್ಥ್ಯ : ಈ ಫೋನ್‌ A15 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, iOS 16 ನಲ್ಲಿ ರನ್‌ ಆಗಲಿದೆ. ಹಾಗೆಯೇ ಈ ಐಫೋನ್‌ ಹೆಚ್ಚುವರಿ GPU ಕೋರ್ ಅನ್ನು ಹೊಂದಿದ್ದು, 5-ಕೋರ್ GPU ಅನ್ನು ಒಳಗೊಂಡಿದೆ. ಇದರೊಂದಿಗೆ 6GB RAM ಮತ್ತು 512GB ವರೆಗಿನ ಇನ್‌ಬಿಲ್ಟ್‌ ಸ್ಟೋರೇಜ್‌ ಆಯ್ಕೆಯಲ್ಲಿ ಇದು ಕಾಣಿಸಿಕೊಂಡಿದೆ.

ಐಫೋನ್‌ 14 ಕ್ಯಾಮೆರಾ ರಚನೆ: ಐಫೋನ್‌ 14 ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು,ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು, 120 ಡಿಗ್ರಿ ವ್ಯೂ ಆಂಗಲ್‌ ಹೊಂದಿರುವ 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಸೆಕೆಂಡರಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಹಾಗೆಯೆ ಸೆಲ್ಪಿ ಉದ್ದೇಶಕ್ಕೆ 12ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆನ್ಸರ್‌ ನೀಡಲಾಗಿದೆ.

ಐಫೋನ್‌ 14 ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಿದ ಯುನಿಕಾರ್ನ್ ಸ್ಟೋರ್‌!

ಐಫೋನ್‌ 14 ಬ್ಯಾಟರಿ ಹಾಗೂ ಇತರೆ: ಈ ಫೋನ್‌ 3,279 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇನ್ನುಳಿದಂತೆ ಇದು ಫೇಸ್ ಐಡಿ ಬೆಂಬಲವನ್ನು ಪಡೆದುಕೊಂಡಿದ್ದು, ಈ ಮೂಲಕ ಹೆಚ್ಚುವರಿ ಭದ್ರತೆಯನ್ನು ನೀಡಲಿದೆ. ಹಾಗೆಯೇ ಭೌತಿಕ ಮತ್ತು ಇ-ಸಿಮ್ ಬೆಂಬಲವನ್ನೂ ಇದು ಹೊಂದಿದೆ.

ಐಫೋನ್‌ 14 ಆಫರ್‌ ಬೆಲೆ: ಈ ಸ್ಮಾರ್ಟ್‌ಫೋನ್‌ ಅನ್ನು ನೀವು 14,000 ರೂ.ವರೆಗಿನ ರಿಯಾಯಿತಿ ಪಡೆದುಕೊಳ್ಳುವ ಮೂಲಕ ಖರೀದಿ ಮಾಡಬಹುದಾಗಿದೆ. ಯುನಿಕಾರ್ನ್ ಸ್ಟೋರ್‌ನಲ್ಲಿ ಈ ಆಫರ್‌ ಘೋಷಣೆ ಮಾಡಲಾಗಿದ್ದು, ಈ ಮೂಲಕ ನೀವು ಐಫೋನ್ 14ನ 128GB ಸ್ಟೋರೇಜ್‌ಗಾಗಿ 65,513 ರೂ.ಗಳಷ್ಟೇ ಪಾವತಿ ಮಾಡಬೇಕಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ 71,999 ರೂ. ಗಳ ಬೆಲೆಯಲ್ಲಿ ಮಾರಾಟ ಆಗುತ್ತಿದೆ.

ಹಾಗೆಯೇ ಈ ಯೂನಿಕಾರ್ನ್ ಸ್ಟೋರ್‌ನಲ್ಲಿ ಐಫೋನ್‌ 14 ನ 256GB ವೇರಿಯಂಟ್‌ಗೆ 75,112ರೂ. ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ. ಇದರ ಮೂಲ ದರ 89,900 ರೂ. ಗಳಾಗಿದೆ. ಹಾಗೆಯೇ 512GB ವೇರಿಯಂಟ್‌ ಫೋನ್‌ಗೆ 92,712ರೂ. ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಮೂಲ ದರ 1,09,900 ರೂ. ಗಳಾಗಿದೆ.

ಐಫೋನ್‌ 14 ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಿದ ಯುನಿಕಾರ್ನ್ ಸ್ಟೋರ್‌!

ಹಾಗೆಯೇ ಈ ಯುನಿಕಾರ್ನ್ ಸ್ಟೋರ್ HDFC ಬ್ಯಾಂಕ್ ಕಾರ್ಡ್‌ಗಳಲ್ಲಿ ಈ ಫೋನ್‌ ಖರೀದಿ ಮಾಡಿದರೆ ಹೆಚ್ಚುವರಿ 4,000 ರೂ. ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ಆಫರ್‌ನೊಂದಿಗೆ ನೀವು ಈಗ ಐಫೋನ್‌ ಬೇಸ್‌ ಮಾಡೆಲ್‌ ಅನ್ನು 65,513 ರೂ. ಗಳಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಫೋನ್ ನೇರಳೆ, ಕೆಂಪು, ಮಿಡ್ನೈಟ್ ಕಪ್ಪು, ಸ್ಟಾರ್ಲೈಟ್ ಬಣ್ಣ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಕಂಡುಬರುತ್ತದೆ.

Best Mobiles in India

English summary
A great offer has been announced for the iPhone 14 phone at the Unicorn Store, through which this phone can be purchased at an affordable price. The phone have A15 Bionic chipset and has a 6.1-inch FHD+ display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+