Home
ಸುದ್ದಿಜಾಲ

iPhone: ಈ ಐಫೋನ್‌ಗೆ ಅಮೆಜಾನ್‌ನಲ್ಲಿ 17% ರಿಯಾಯಿತಿ: ಬ್ಯಾಂಕ್‌ ಆಫರ್ ಕೂಡ ಇದೆ..

ಐಫೋನ್‌ (iPhone) ಹೊಂದುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಭಾರತದ ಸಾಕಷ್ಟು ಯುವಕ ಯುವತಿಯರು ಹೇಗಾದರೂ ಮಾಡಿ ಐಫೋನ್‌ ಖರೀದಿ ಮಾಡಬೇಕು ಅನ್ನೋ ಹಠಕ್ಕೆ ಬಿದ್ದಿರುತ್ತಾರೆ. ಅಷ್ಟರಮಟ್ಟಿಗೆ ಈ ಫೋನ್‌ಗಳಿಗೆ ಜನಪ್ರಿಯತೆ ಇದೆ. ಅದರಂತೆ ಯಾರೆಲ್ಲಾ ಐಫೋನ್‌ ಖರೀದಿ ಮಾಡಲು ಮುಂದಾಗಿದ್ದಾರೋ ಅವರು ಇದೀಗ ಆಫರ್ ಬೆಲೆಗೆ ಈ ಫೋನ್‌ ಅನ್ನು ಕೊಂಡುಕೊಳ್ಳಬಹುದಾಗಿದೆ.

ಹೌದು, ಐಫೋನ್‌ಗಳು ದುಬಾರಿ ಬೆಲೆ ಹೊಂದಿರುವುದರಿಂದ ಇವುಗಳನ್ನು ಸಾಕಷ್ಟು ಜನರಿಗೆ ಖರೀದಿ ಮಾಡಲು ಆಗವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಆಫರ್ ಘೋಷಣೆ ಮಾಡಲಿದ್ದು, ಇದರಿಂದ ಭಾರೀ ಹಣ ಉಳಿತಾಯದೊಂದಿಗೆ ಈ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಅಂತೆಯೇ ಈಗ ಐಫೋನ್ 14 ಫೋನ್‌ಗೆ (iPhone 14) ಭರ್ಜರಿ ಆಫರ್ ಇದೆ. ಹಾಗಿದ್ರೆ, ಬನ್ನಿ ಈ ಪೋನ್‌ನ ಆಫರ್ ವಿವರ ಹಾಗೂ ಫೀಚರ್ಸ್‌ ಕಡೆ ಕಣ್ಣಾಯಿಸೋಣ.

ಈ ಐಫೋನ್‌ಗೆ ಅಮೆಜಾನ್‌ನಲ್ಲಿ 17% ರಿಯಾಯಿತಿ: ಬ್ಯಾಂಕ್‌ ಆಫರ್ ಕೂಡ ಇದೆ..

ಐಫೋನ್ 14 ಗೆ ಆಫರ್: ಆಪಲ್‌ ಡಿವೈಸ್‌ ಖರೀದಿ ಮಾಡುವವರಿಗೆ ಅದರಲ್ಲೂ ಐಫೋನ್‌ ಖರೀದಿ ಮಾಡಬೇಕು ಅಂದುಕೊಂಡಿರುವರಿಗೆ ಇದು ಉತ್ತಮ ಸಮಯವಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಈ ಫೋನ್‌ ಮೇಲೆ 17% ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರಿಂದ ಸುಲಭವಾಗಿ ಈ ಫೋನ್‌ ಅನ್ನು ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ.

ಅಮೆಜಾನ್‌ ಆಫರ್ ವಿವರಕ್ಕೆ ಬಂದರೆ ಇದೀಗ ನೀವು ಈ ಫೋನ್‌ ಅನ್ನು 79,900ರೂ.ಗಳ ಬೆಲೆ ಹೊಂದಿರುವ ಈ ಫೋನ್‌ ಅನ್ನು ನೀವು ಇದೀಗ 65,998ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಆಫರ್ ಬೆಲೆಗೆ ಲಭ್ಯ ಇರುವ ಫೋನ್ 256GB ವೇರಿಯಂಟ್‌ನದ್ದಾಗಿದೆ. ಹಾಗೆಯೇ ಇಲ್ಲಿಯವರೆಗೆ ನೀಡಲಾದ ಕೊಡುಗೆಗಳಲ್ಲಿ ಈಗ ಈ ಫೋನ್‌ಗೆ ನೀಡಲಾದ ಕೊಡುಗೆ ಅತ್ಯುತ್ತಮ ಎನಿಸಿದೆ. ಇಷ್ಟೆ ಅಲ್ಲದೆ ನೀವು ಬ್ಯಾಂಕ್‌ ಆಫರ್ ಸಹ ಲಭ್ಯ ಇದ್ದು, ಇದರೊಂದಿಗೆ ವಿನಿಮಯ ಆಫರ್ ಮೂಲಕ ಇನ್ನೂ ಹೆಚ್ಚಿನ ಸೌಲಭ್ಯ ಪಡೆಯಬಹುದಾಗಿದೆ.

ಈ ಐಫೋನ್‌ಗೆ ಅಮೆಜಾನ್‌ನಲ್ಲಿ 17% ರಿಯಾಯಿತಿ: ಬ್ಯಾಂಕ್‌ ಆಫರ್ ಕೂಡ ಇದೆ..

ಈ ಫೋನ್ ಖರೀದಿ ಮಾಡುವಾಗ ನೀವು ಸಿಟಿಬ್ಯಾಂಕ್ ಕಾರ್ಡ್‌ನಲ್ಲಿ ಇಎಂಐ ಇಲ್ಲದ ವ್ಯವಹಾರ ಮಾಡಿದ್ರೆ 750 ರೂ.ಗಳ ವರೆಗೆ ಅಥವಾ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅಂತೆಯೇ ಅವರು ಕನಿಷ್ಠ ಒನ್‌ಕಾರ್ಡ್‌‌ ಇಎಂಐ ವ್ಯವಹಾರದಲ್ಲಿ 1200 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೆ, ವಿನಿಮಯ ಆಫರ್ ಸಹ ಲಭ್ಯ ಇದ್ದು 27,000ರೂ.ಗಳ ವರೆಗೆ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ತಿಳಿದುಕೊಳ್ಳಿ.

ಈ ಸ್ಮಾರ್ಟ್‌ಫೋನ್ 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಯೊಂದಿಗೆ ಆಪಲ್ A15 ಬಯೋನಿಕ್ ಚಿಪ್‌ಸೆಟ್‌ನಿಂದ ಈ ಫೋನ್‌ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಬಹು ಬಣ್ಣದ ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಅವುಗಳೆಂದರೆ ಮಿಡ್ನೈಟ್, ಪರ್ಪಲ್, ಸ್ಟಾರ್‌ಲೈಟ್, ಪ್ರೊಡಕ್ಟ್‌ ರೆಡ್‌, ಬ್ಲೂ ಮತ್ತು ಎಲ್ಲೋ ಕಲರ್‌ನ ಆಯ್ಕೆಯಲ್ಲಿ ಲಭ್ಯ ಇದೆ.

ಈ ಐಫೋನ್‌ಗೆ ಅಮೆಜಾನ್‌ನಲ್ಲಿ 17% ರಿಯಾಯಿತಿ: ಬ್ಯಾಂಕ್‌ ಆಫರ್ ಕೂಡ ಇದೆ..

ಜೊತೆಗೆ ಈ ಸ್ಮಾರ್ಟ್‌ಫೋನ್‌ 12 ಮೆಗಾಪಿಕ್ಸೆಲ್‌ನ ರಿಯರ್‌ ಸೆನ್ಸರ್ ಹಾಗೂ 12 ಮೆಗಾಪಿಕ್ಸೆಲ್‌ನ ಅಲ್ಟ್ರಾ ವೈಡ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಹಾಗೂ ಆಯ್ಕೆ ಪಡೆದಿದೆ. ಈ ಡಿಸ್‌ಪ್ಲೇ 2532x1170 ಪಿಕ್ಸೆಲ್‌ ಸ್ಜ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಸೆರಾಮಿಕ್ ಶೀಲ್ಡ್ ರಕ್ಷಣೆಯೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ ತಡಯಾಕೆ ಈ ಆಫರ್ ಬಳಕೆ ಮಾಡಿಕೊಂಡು ಈ ಐಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಿ.

Best Mobiles in India

English summary
iPhone 14 with 17% discount on Amazon. Also there is a bank offer at the time of purchase.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+