Home
ಸುದ್ದಿಜಾಲ

ನೀವು ಬೇಡ ಅಂದ್ರೂ, ಈ ಐಫೋನ್‌ಗಳಿಗೆ ಈಗ ಭರ್ಜರಿ ಡಿಸ್ಕೌಂಟ್‌ ಲಭ್ಯ!

ಆಪಲ್‌ ಐಫೋನ್‌ ಖರೀದಿಸುವ ಗ್ರಾಹಕರಿಗೆ ಮತ್ತೆ ಗುಡ್‌ನ್ಯೂಸ್‌ ಸಿಕ್ಕಿದೆ. ಜನಪ್ರಿಯ ಐಫೋನ್‌ 13 ಫೋನ್‌ ಇದೀಗ ಬೊಂಬಾಟ್‌ ರಿಯಾಯಿತಿ ಪದೆದಿದೆ. ಹಾಗೆಯೇ ಕಳೆದ ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಆಗಿರುವ ಆಪಲ್‌ ಐಫೋನ್‌ 14 ಸಹ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗಿದ್ರೆ..ಈ ಕೊಡುಗೆ ಉತ್ತಮವೇ?

ನೀವು ಬೇಡ ಅಂದ್ರೂ, ಈ ಐಫೋನ್‌ಗಳಿಗೆ ಈಗ ಭರ್ಜರಿ ಡಿಸ್ಕೌಂಟ್‌ ಲಭ್ಯ!

ಏನಾದರೂ ಸ್ಪೆಷಲ್‌ ದಿನಗಳ ಬಂದರೆ ಇ ಕಾಮರ್ಸ್‌ ತಾಣಗಳು ಆಫರ್‌ ಘೋಷಣೆ ಮಾಡುತ್ತವೆ. ಸದ್ಯ ಪ್ರೇಮಿಗಳ ದಿನದ ಪ್ರಯುಕ್ತ ಆಪಲ್‌ ಐಫೋನ್‌ ಮಾರಾಟದ ಥರ್ಡ್‌ ಪಾರ್ಟಿ ಪ್ಲಾಟ್‌ಫಾರ್ಮ್ ಆಗಿರುವ iVenus store ಇದೀಗ ಐಫೋನ್‌ 13, ಐಫೋನ್ 14 ಹಾಗೂ ಐಫೋನ್‌ 14 ಪ್ಲಸ್‌ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ತಿಳಿಸಿದೆ.

iVenus ಸ್ಟೋರ್‌ ನೀಡಿರುವ ಕೊಡುಗೆಯ ಜೊತೆಗೆ ಹೆಚ್‌ಡಿಎಫ್‌ಸಿ ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಖರೀಸಿದರೆ ಹೆಚ್ಚುವರಿಯಾಗಿ 4,000 ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. ಇದಲ್ಲದೆ ಎಕ್ಸ್‌ಚೇಂಜ್ ಕೊಡುಗೆಯೂ ಸಹ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗಾದರೆ ಕೊಡುಗೆಯ ಬೆಲೆ ಎಷ್ಟು ಹಾಗೂ ಈ ಐಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೀವು ಬೇಡ ಅಂದ್ರೂ, ಈ ಐಫೋನ್‌ಗಳಿಗೆ ಈಗ ಭರ್ಜರಿ ಡಿಸ್ಕೌಂಟ್‌ ಲಭ್ಯ!

ಐಫೋನ್‌ಗಳಿಗೆ ಭರ್ಜರಿ ಕೊಡುಗೆ ಲಭ್ಯ

iVenus store ಆನ್‌ಲೈನ್‌ ತಾಣದಲ್ಲಿ ಐಫೋನ್‌ 13 ಡಿಸ್ಕೌಂಟ್‌ ಬೆಲೆಯು 62,900ರೂ. ಆಗಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಇನ್‌ಸ್ಟಂಟ್‌ 2,000ರೂ. ಕ್ಯಾಶ್‌ಬ್ಯಾಂಕ್‌ ಸಿಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ. ಹಾಗೆಯೇ ಐಫೋನ್ 14 ಫೋನ್‌ 71,900ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಇನ್‌ಸ್ಟಂಟ್‌ 4,000ರೂ. ಕ್ಯಾಶ್‌ಬ್ಯಾಂಕ್‌ ಸಿಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ. ಅದೇ ರೀತಿ ಐಫೋನ್ 14 ಪ್ಲಸ್‌ ಫೋನ್‌ 80,900ರೂ, ಪ್ರೈಸ್‌ ಟ್ಯಾಗ್‌ನಲ್ಲಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಇನ್‌ಸ್ಟಂಟ್‌ 4,000ರೂ. ಕ್ಯಾಶ್‌ಬ್ಯಾಂಕ್‌ ಸಿಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ.

ನೀವು ಬೇಡ ಅಂದ್ರೂ, ಈ ಐಫೋನ್‌ಗಳಿಗೆ ಈಗ ಭರ್ಜರಿ ಡಿಸ್ಕೌಂಟ್‌ ಲಭ್ಯ!

ಐಫೋನ್ 14 ಫೋನಿನ ಪ್ರಮುಖ ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಐಫೋನ್ 13 ಫೋನಿನ ಪ್ರಮುಖ ಫೀಚರ್ಸ್‌

6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ.

ನೀವು ಬೇಡ ಅಂದ್ರೂ, ಈ ಐಫೋನ್‌ಗಳಿಗೆ ಈಗ ಭರ್ಜರಿ ಡಿಸ್ಕೌಂಟ್‌ ಲಭ್ಯ!

ಐಫೋನ್ 14 ಪ್ಲಸ್‌ ಫೋನಿನ ಪ್ರಮುಖ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.

Best Mobiles in India

English summary
iPhone 14, iPhone 13 and iPhone 14 Plus Available at Big Discount; check offer details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+