ಬಹುನಿರೀಕ್ಷಿತ ಐಫೋನ್ 14 ಮ್ಯಾಕ್ಸ್ ಫೋನಿನ ಬೆಲೆ ಲೀಕ್!..ಫೀಚರ್ಸ್ ಏನು?

|

ಟೆಕ್ ವಲಯದಲ್ಲಿ ಆಪಲ್‌ ಸಂಸ್ಥೆಯು ತನ್ನದೇ ಗತ್ತನ್ನು ಹೊಂದಿದೆ. ಆಪಲ್‌ ಈಗಾಗಲೇ ಐಫೋನ್‌ 13 ಸರಣಿಯನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ವರ್ಷ ಐಫೋನ್ 14 ಬರಲಿದ್ದು, ಗ್ರಾಹಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಂದಹಾಗೇ ಈ ಸಲ ಆಪಲ್ ತನ್ನ ಪ್ರಮುಖ ಐಫೋನ್ 14 ಸರಣಿಯಲ್ಲಿ ಮಿನಿ ಆವೃತ್ತಿಯನ್ನು ಪ್ರಾರಂಭಿಸುವ ನಿರೀಕ್ಷೆಯಿಲ್ಲ ಮತ್ತು ಬದಲಿಗೆ ಹೊಸ ಮ್ಯಾಕ್ಸ್ ಮಾದರಿಯನ್ನು ಪರಿಚಯಿಸಲು ವದಂತಿಗಳಿವೆ.

ಬಹುನಿರೀಕ್ಷಿತ ಐಫೋನ್ 14 ಮ್ಯಾಕ್ಸ್ ಫೋನಿನ ಬೆಲೆ ಲೀಕ್!..ಫೀಚರ್ಸ್ ಏನು?

ಆಪಲ್‌ ಸಂಸ್ಥೆಯು ಬಿಡುಗಡೆ ಮಾಡುವ ಹೊಸ ಐಫೋನ್ ಸರಣಿ ಬಗ್ಗೆ ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಅದೇ ರೀತಿ ಈ ವರ್ಷ ಬಿಡುಗಡೆ ಆಗಲಿರುವ ಐಫೋನ್‌ 14 ಸರಣಿ ಬಗ್ಗೆಯು ಹೆಚ್ಚಿನ ನಿರೀಕ್ಷೆಗಳಿದ್ದು, ಆ ಪೈಕಿ ಐಫೋನ್ 14 ಮ್ಯಾಕ್ಸ್ ಸ್ಮಾರ್ಟ್‌ಫೋನ್‌ನ ಅಧಿಕೃತ ಬಿಡುಗಡೆಯ ಮುನ್ನವೇ ಅದರ ಪ್ರಮುಖ ಫೀಚರ್ಸ್‌ ಮತ್ತು ಬೆಲೆಯ ಬಗ್ಗೆ ಕೆಲವು ಮಾಹಿತಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಹಾಗಾದರೇ ಲೀಕ್ ಮಾಹಿತಿ ಪ್ರಕಾರ ಐಫೋನ್‌ 14 ಮ್ಯಾಕ್ಸ್ ಫೋನಿನ ಬೆಲೆ ಮತ್ತು ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ 14 ಸರಣಿ ಯಾವಾಗ ಬಿಡುಗಡೆ ಆಗುತ್ತೆ?
ಸಾಮಾನ್ಯವಾಗಿ ಕಂಪನಿಯು ವರ್ಷದ ಕೊನೆಯಲ್ಲಿ ತನ್ನ ಹೊಸ ಐಫೋನ್‌ಗಳನ್ನು ಪ್ರಕಟಿಸುತ್ತದೆ ಮತ್ತು ಈ ವರ್ಷವೂ ಅದೇ ಹಾಗೆಯೇ ಮಾಡುವ ನಿರೀಕ್ಷೆಯಿದೆ. ಐಫೋನ್ 14 ಸರಣಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಈ ಸರಣಿಯು ಆಪಲ್ ಐಫೋನ್‌ 14, ಐಫೋನ್‌ 14 ಪ್ರೊ, ಐಫೋನ್‌ 14 ಮ್ಯಾಕ್ಸ್ ಮತ್ತು ಐಫೋನ್‌ 14 ಮ್ಯಾಕ್ಸ್‌ ಪ್ರೊ ಸೇರಿದಂತೆ ನಾಲ್ಕು ಮಾದರಿಗಳನ್ನು ಬಿಡುಗಡೆ ಆಗುವ ಸಾಧ್ಯತೆಗಳಿವೆ.

ಬಹುನಿರೀಕ್ಷಿತ ಐಫೋನ್ 14 ಮ್ಯಾಕ್ಸ್ ಫೋನಿನ ಬೆಲೆ ಲೀಕ್!..ಫೀಚರ್ಸ್ ಏನು?

ಐಫೋನ್‌ 14 ಮ್ಯಾಕ್ಸ್- ಲೀಕ್‌ ಫೀಚರ್ಸ್‌

ಟಿಪ್‌ಸ್ಟರ್ ಪ್ರಕಾರ, ಈ ಐಫೋನ್ 2,248 x 1,284 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿರಲಿದ್ದು, 6.68 ಇಂಚಿನ OLED ಪ್ಯಾನೆಲ್‌ ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಪ್ರಮುಖ ಫೋನ್ 90 Hz ಡಿಸ್‌ಪ್ಲೇಯೊಂದಿಗೆ ಬರುವ ನಿರೀಕ್ಷೆಯಿದೆ. ಸದ್ಯದ ಐಫೋನ್‌ 13 ಸ್ಮಾರ್ಟ್‌ಫೋನ್ 60 Hz ಸ್ಕ್ರೀನ್‌ ಮಾತ್ರ ಹೊಂದಿದೆ. ಇನ್ನು ನೂತನ ಐಫೋನ್‌ ಆಪಲ್‌ನ A 15 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯ ನಿರ್ವಹಿಸಬಹುದು. ಹಾಗೆಯೇ 6 GB RAM ಮತ್ತು 256 GB ವರೆಗಿನ ಸಂಗ್ರಹಣೆಯಿಂದ ಬೆಂಬಲಿತವಾಗಿದೆ ಎಂದು ವರದಿ ಆಗಿದೆ.

ಇನ್ನು ಈ ಐಫೋನ್‌ನ ಹಿಂಭಾಗ ದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಇರಬಹುದು. ಎರಡು 12 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾಗಳನ್ನು ಒಳಗೊಂಡಿರುವ ಸಾಧ್ಯತೆಗಳಿವೆ. ಜೊತೆಗೆ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಇರಲಿದೆ. ಐಫೋನ್ 14 ಮ್ಯಾಕ್ಸ್ ಫೇಸ್ ಐಡಿ ಸೆನ್ಸಾರ್‌ ಅನ್ನು ವೈಶಿಷ್ಟ್ಯಗೊಳಿಸಬಹುದು. ಆದ್ದರಿಂದ ಇದು ಹಿಂದಿನ ಐಫೋನ್‌ಗಳಂತೆಯೇ ಮುಂಭಾಗದಲ್ಲಿ ವಿಶಾಲವಾದ ದರ್ಜೆಯನ್ನು ಹೊಂದಿರುತ್ತದೆ.

ಐಫೋನ್‌ 14 ಮ್ಯಾಕ್ಸ್‌: ಲೀಕ್ ಬೆಲೆ ಎಷ್ಟು?
ಐಫೋನ್ 14 ಮ್ಯಾಕ್ಸ್‌ನ ಬೆಲೆ $899 ಆಗಲಿದೆ ಎಂದು ಟಿಪ್‌ಸ್ಟರ್ ಹೇಳಿಕೊಂಡಿದೆ. ಇದನ್ನು ಪರಿವರ್ತಿಸಿದಾಗ ಭಾರತದಲ್ಲಿ ಸುಮಾರು 69,180 ರೂ. ಈ ಫೋನ್ ಭಾರತದಲ್ಲಿ ಇಷ್ಟು ವೆಚ್ಚವನ್ನು ನಿರೀಕ್ಷಿಸುವುದಿಲ್ಲ. ಹೆಚ್ಚಿನ ಆಮದು ಸುಂಕ, GST ಮತ್ತು ಇತರ ವಿಷಯಗಳ ಕಾರಣದಿಂದಾಗಿ ಯುಎಸ್‌ ಮತ್ತು ಭಾರತದ ಬೆಲೆಗಳಲ್ಲಿ ಯಾವಾಗಲೂ ದೊಡ್ಡ ವ್ಯತ್ಯಾಸವಿದೆ.

Best Mobiles in India

English summary
iPhone 14 Max Price, Specifications Leaked.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X