ಐಫೋನ್ 14 ಪ್ರೊ ಬೆಲೆ ಇಳಿಕೆ!..ನೀವು ಬೇಡಾ ಅಂದ್ರೂ ಸಿಗುತ್ತೆ ಭಾರೀ ಡಿಸ್ಕೌಂಟ್!
ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎನಿಸಿರುವ ಅಮೆಜಾನ್ ಗ್ರಾಹಕರನ್ನು ಸೆಳೆಯಲು ಒಂದಿಲ್ಲೊಂದು ಆಫರ್ ನೀಡುತ್ತಲೇ ಇರುತ್ತದೆ. ಈ ಮೂಲಕ ಆನ್‌ಲೈನ್ ಶಾಪಿಂಗ್ ಪ್ರಿಯರನ್ನು ತನ್ನತ್ತ ಸೆಳೆಯುತ್ತ. ಇನ್ನು ಐಫೋನ್ 15 ಶೀಘ್ರದಲ್ಲೇ ಲಾಂಚ್ ಆಗಲಿದ್ದು ಒಂದೆಡೆಯಾದರೆ, ಇತ್ತ ಅಮೆಜಾನ್ ಪ್ಲಾಟ್‌ಫಾರ್ಮ್ ಆಪಲ್ ಸಂಸ್ಥೆಯ ಐಫೋನ್ 14 ಪ್ರೊ ಫೋನ್‌ಗೆ ಭರ್ಜರಿ ರಿಯಾಯಿತಿ ನೀಡಿದೆ.
ಹೌದು, ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ಲಾಟ್‌ಫಾರ್ಮ್ ಐಫೋನ್ 14 ಫೋನ್ ಶೇ. 8% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಐಫೋನಿನ 128 GB ಸ್ಟೋರೇಜ್ ವೇರಿಯಂಟ್ ಬೆಲೆಯು 1,29,900ರೂ. ಆಗಿದ್ದು, ಅಮೆಜಾನ್ ಆಫರ್‌ನಲ್ಲಿ ಗ್ರಾಹಕರು 1,19,900ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಇನ್ನು ಐಫೋನ್ 14 ಪ್ರೊ ಐಫೋನ್ ಬ್ಲ್ಯಾಕ್, ಪರ್ಪಲ್, ಗೋಲ್ಡ್ ಹಾಗೂ ಸಿಲ್ವರ್ ಕಲರ್ ಆಯ್ಕೆಗಳನ್ನು ಪಡೆದಿದೆ. ಇನ್ನು ಐಫೋನ್ 14 ಪ್ರೊ ಫೋನ್ ನಾಲ್ಕು ವೇರಿಯಂಟ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 128GB, 256GB, 512GB ಹಾಗೂ 1TB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಐಫೋನ್ 14 ಪ್ರೊ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 14 ಪ್ರೊ ಫೀಚರ್ಸ್ ಹೀಗಿವೆ :
ಐಫೋನ್ 14 ಪ್ರೊ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಹಾಗೆಯೇ ಇದು ಆಲ್ವೇಸ್ ಆನ್ ಡಿಸ್‌ಪ್ಲೇ ಪಡೆದುಕೊಂಡಿದೆ. ಹಾಗೆಯೇ ಇದು ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು 65 ಪ್ರತಿಶತ ದೊಡ್ಡ ಸೆನ್ಸಾರ್ ಅನ್ನು ಹೊಂದಿದೆ.
ಐಫೋನ್ 14 ಪ್ರೊ ಕ್ಯಾಮೆರಾವು ಆಕ್ಷನ್ ಮೋಡ್ ಆಯ್ಕೆಯನ್ನು ಪಡೆದುಕೊಂಡಿದ್ದು, ಜೊತೆಗೆ ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕದ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಐಫೋನ್ 14 ಪ್ರೊ A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ಪಡೆದಿದ್ದು, ಆರು-ಕೋರ್ CPU ಹೊಂದಿದೆ.
ಐಫೋನ್ 14 ಫೋನಿನ ಫೀಚರ್ಸ್ ಮಾಹಿತಿ ಇಲ್ಲಿದೆ :
ಈ ಐಫೋನ್ 6.1 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದ್ದು, 1200 nits ಬ್ರೈಟ್ನಸ್ ಬೆಂಬಲ ಅನ್ನು ಒಳಗೊಂಡಿದೆ. ಇದರ ಜೊತೆಗೆ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.
ಐಫೋನ್ 14 ಪ್ಲಸ್ ಪ್ರಮುಖ ಫೀಚರ್ಸ್ ಮಾಹಿತಿ ಇಲ್ಲಿದೆ :
ಐಫೋನ್ 14 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಅನ್ನು ಹೊಂದಿದ್ದು, ಇದರ ಜೊತೆಗೆ ಇದು OLED ಡಿಸ್‌ಪ್ಲೇ ಸಪೋರ್ಟ್ ಹೊಂದಿದ್ದು, ಇದರ ಡಿಸ್‌ಪ್ಲೇಯು 1200nits ಬ್ರೈಟ್ನಸ್ ಪಡೆದಿದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಐಫೋನ್ 15 ಲಾಂಚ್ ಮಾಹಿತಿ :
ಇಡೀ ಸ್ಮಾರ್ಟ್‌ಫೋನ್ ಜಗತ್ತೇ ನಿರೀಕ್ಷೆಯಿಂದ ಕಾಯುತ್ತಿರುವ 'ಐಫೋನ್ 15' ಸರಣಿ ಇದೇ ಸೆಪ್ಟೆಂಬರ್ 12 ರಂದು ರಾತ್ರಿ 10:30 ಗಂಟೆಗೆ ಅಧಿಕೃತವಾಗಿ ಲಾಂಚ್ ಆಗುವುದು ಖಚಿತವಾಗಿದೆ. ಆಪಲ್‌ನ ಹೊಸ ಐಫೋನ್ 15 ಸರಣಿಯು ಐಫೋನ್ 15, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್‌ಗಳನ್ನು ಪಡೆದಿರಲಿದೆ.


Click it and Unblock the Notifications








