ಇದೇ ನೋಡಿ ಈ ವರ್ಷದ ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್!
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ನೀವು ಹಲವಾರು ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡಿರಬಹುದು ಅಥವಾ ನೋಡಿರಬಹುದು. ಅದಾಗ್ಯೂ ಕೆಲವು ಸ್ಮಾರ್ಟ್‌ಫೋನ್‌ಗಳು ಮಾತ್ರ ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡಿ ಹೆಚ್ಚು ಜನಪ್ರಿಯತೆ ಪಡೆಯುತ್ತವೆ. ಅದರಂತೆ ಈಗ ಈ ವರ್ಷದ ಅತ್ಯಂತ ಜನಪ್ರಿಯ ಫೋನ್ ಯಾವುದು ಎಂಬ ವರದಿ ಹೊರಬಿದ್ದಿದೆ.
ಹೌದು, ಫೋನ್‌ಗಳು ಇಂದು ಬಳಕೆದಾರರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರ. ಈ ನಡುವೆ ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್, ಶಿಯೋಮಿ, ಲೆನೊವೊ, ಒಪ್ಪೋ, ರಿಯಲ್‌ಮಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ವಿವಿಧ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಫೋನ್‌ಗಳನ್ನು ಅನಾವರಣ ಮಾಡಿವೆ. ಆದರೂ ಈ ಫೋನ್ ಮಾತ್ರ ಜಗತ್ತಿನ ಅತ್ಯಂತ ಜನಪ್ರಿಯ ಫೋನ್ ಆಗಿ ಗುರುತಿಸಿಕೊಂಡಿದೆ. ಹಾಗಿದ್ರೆ, ಯಾವುದು ಈ ಫೋನ್?, ಈ ಫೋನ್‌ನ ಫೀಚರ್ಸ್ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್: ಕಳೆದ ಕೆಲವು ವರ್ಷಗಳಿಂದ ಐಫೋನ್‌ಗಳು ಯಾವಾಗಲೂ ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳೆಂದೇ ಗುರುತಿಸಿಕೊಳ್ಳುತ್ತಿವೆ. ಈಗ ಈ ಸಂಪ್ರದಾಯ ಮುಂದುವರೆದಿದೆ. ಒಮ್ಡಿಯಾದ (Omdia) ವರದಿಯಂತೆ ಐಫೋನ್ 14 ಪ್ರೊ ಮ್ಯಾಕ್ಸ್ (iPhone 14 Pro Max) ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಎಂದು ತಿಳಿಸಲಾಗಿದೆ. ಈ ಐಫೋನ್ 14 ಪ್ರೊ ಮ್ಯಾಕ್ಸ್ ಅತ್ಯಂತ ದುಬಾರಿ ಐಫೋನ್ ಆಗಿದ್ದರೂ ಸಹ ಜನರು ಇದನ್ನು ಹೆಚ್ಚಾಗಿಯೇ ಖರೀದಿ ಮಾಡಿದ್ದಾರೆ.
ಐಫೋನ್ 14 ಪ್ರೊ ಮ್ಯಾಕ್ಸ್ ಈ ವರ್ಷದ ಮೊದಲಾರ್ಧದಲ್ಲಿ ವಿಶ್ವದಾದ್ಯಂತ ಹೆಚ್ಚು ರವಾನೆಯಾದ ಸ್ಮಾರ್ಟ್‌ಫೋನ್ ಆಗಿದೆ. ಅಂದರೆ ಆಪಲ್ ಒಟ್ಟು 26.5 ಮಿಲಿಯನ್ ಯುನಿಟ್‌ಗಳನ್ನು ರವಾನಿಸಿದೆ ಎಂದು ಒಮ್ಡಿಯಾದ ಸ್ಮಾರ್ಟ್‌ಫೋನ್ ಮಾಡೆಲ್ ಮಾರ್ಕೆಟ್ ಟ್ರ್ಯಾಕರ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಈ ಡೇಟಾವನ್ನು 2023 ರ ಮೊದಲಾರ್ಧದಲ್ಲಿ ಸಂಗ್ರಹ ಮಾಡಲಾಗಿದೆ. ಜೊತೆಗೆ ಈ ಪ್ರೀಮಿಯಂ ಫೋನ್‌ಗೆ ಇಂದಿಗೂ ಬೇಡಿಕೆ ಹೆಚ್ಚುತ್ತಿದೆ ಎನ್ನಲಾಗಿದೆ.
ಅಚ್ಚರಿ ಏನೆಂದರೆ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಋಣಾತ್ಮಕ ಬೆಳವಣಿಗೆಯನ್ನು ದಾಖಲು ಮಾಡುತ್ತಿದೆ ಎಂದು ಹಲವಾರು ವರದಿಗಳನ್ನು ನಾವು ಗಮನಿಸಿರಬಹುದು. ಆದರೆ ಓಮ್ಡಿಯಾ ಪ್ರಕಾರ, ಆರ್ಥಿಕ ಹಿಂಜರಿತ ಮತ್ತು ಬಳಕೆ ಮಾಡಿದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ (ಸೆಕೆಂಡ್ ಹ್ಯಾಂಡ್ ಫೋನ್) ವಿಸ್ತರಣೆಯಿಂದಾಗಿ ಮಧ್ಯಮದಿಂದ ಕಡಿಮೆ-ಮಟ್ಟದ ಮಾರುಕಟ್ಟೆ ಕುಗ್ಗುತ್ತದೆ ಎಂದು ತಿಳಿಸಿದೆ.
ಮತ್ತೊಂದೆಡೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಉಲ್ಲೇಖಿಸಿದೆ. ಏಕೆಂದರೆ ಆಪಲ್‌ನ ಪ್ರೀಮಿಯಂ ಮಾದರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ಆಪಲ್‌ನ ಐಫೋನ್ ಸರಣಿಗಳಲ್ಲಿ ಪ್ರೊ ಮತ್ತು ಮ್ಯಾಕ್ಸ್‌ನಂತಹ ಉನ್ನತ ಮಟ್ಟದ ವೇರಿಯಂಟ್‌ಗಳ ಮಾರಾಟದ ಪ್ರಮಾಣವು ಹೆಚ್ಚಾಗುತ್ತಲೇ ಇದೆ ಎಂದು ವರದಿಯಿಂದ ತಿಳಿದುಬಂದಿದೆ.
ಅದಾಗ್ಯೂ ಮುಂದಿನ ವರ್ಷದ ಮುನ್ಸೂಚನೆಯು ಸ್ಮಾರ್ಟ್‌ಫೋನ್ ಮಾರುಕಟ್ಟೆ ಉತ್ತಮವಾಗಿರುವುದಿಲ್ಲ ಎಂದೂ ಸಹ ಹೇಳಲಾಗುತ್ತಿದೆ. ಮಧ್ಯದಿಂದ ಕಡಿಮೆ-ಮಟ್ಟದ ಮಾರುಕಟ್ಟೆಯಲ್ಲಿನ ಕುಸಿತವು ಈ ವರ್ಷದ ದ್ವಿತೀಯಾರ್ಧದಲ್ಲಿ ಮುಂದುವರಿಯುವ ನಿರೀಕ್ಷೆಯಿದ್ದು, ಹೊಸ ಐಫೋನ್ ಐಫೋನ್ 15 ಬಿಡುಗಡೆಯೊಂದಿಗೆ ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರೀಮಿಯಂ ಮಾರುಕಟ್ಟೆ ಬೆಳೆಯಲಿದೆ ಎಂಬ ನಿರೀಕ್ಷೆ ಮಾಡಲಾಗಿದೆ.

ಈ ಸಂಬಂಧ ಮಾಹಿತಿ ನೀಡಿರುವ ಓಮ್ಡಿಯಾದ ಹಿರಿಯ ಸಂಶೋಧಕ ಹಾಂಗ್, ಆಪಲ್ ಐಫೋನ್‌ಗಳಿಗೆ ಇದೇ ರೀತಿಯ ಪ್ರವೃತ್ತಿ ಇರಲಿದೆ. ಪ್ರೀಮಿಯಂ ಮಾದರಿಗಳಿಗೆ ಇರುವ ದೊಡ್ಡ ಬೇಡಿಕೆಯಿಂದಾಗಿ ಪ್ರೊ ಮತ್ತು ಪ್ರೊ ಮ್ಯಾಕ್ಸ್ ನ ಆಪಲ್ ಸಾಗಣೆಗಳು ಹೆಚ್ಚಾಗುತ್ತವೆ. ಆದರೆ, ಒಟ್ಟಾರೆ ಐಫೋನ್ ಸಾಗಣೆಗಳು ಕಳೆದ ವರ್ಷಕ್ಕೆ ಹೋಲುತ್ತವೆ ಅಥವಾ ಪ್ರಮಾಣಿತ ಮತ್ತು ಪ್ಲಸ್ ಮಾದರಿಗಳಿಗೆ ದುರ್ಬಲ ಬೇಡಿಕೆಯಿಂದಾಗಿ ಸ್ವಲ್ಪ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.


Click it and Unblock the Notifications








