ಹೊಸ ಐಫೋನ್ ಖರೀದಿಸಬೇಕೆ?..ಹಾಗಿದ್ರೆ, ಈ ಆಫರ್ ಬಿಡಬೇಡಿ!
ಮೊಬೈಲ್ ಮಾರುಕಟ್ಟೆಯಲ್ಲಿ ಐಫೋನ್‌ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಬಹುತೇಕರು ಐಫೋನ್ ಖರೀದಿಸುವ ಪ್ಲ್ಯಾನ್ ಹೊಂದಿರುತ್ತಾರೆ. ನೀವು ಕೂಡಾ ಹೊಸ ಐಫೋನ್ ಖರೀದಿಸುವ ಯೋಚನೆ ಮಾಡಿದ್ದರೆ, ಈ ಸುದ್ದಿ ಖಂಡಿತಾ ನಿಮಗಾಗಿ. ಏಕೆಂದರೆ ಜನಪ್ರಿಯ ಐಫೋನ್ 14 ಮೊಬೈಲ್‌ಗೆ ಈಗ ಬಿಗ್ ಆಫರ್ ಲಭ್ಯ ಇದೆ.
ಹೌದು, ಇ ಕಾಮರ್ಸ್ ದೈತ್ಯ ತಾಣ ಎನಿಸಿರುವ ಫ್ಲಿಪ್‌ಕಾರ್ಟ್ ನಲ್ಲಿ ಐಫೋನ್ 14 ಫೋನಿಗೆ ಬರೋಬ್ಬರಿ ಶೇ 15% ರಷ್ಟು ನೇರ ಡಿಸ್ಕೌಂಟ್ ನೀಡಲಾಗಿದೆ. ಹೀಗಾಗಿ ಗ್ರಾಹಕರು 128GB ಸ್ಟೋರೇಜ್‌ನ ಐಫೋನ್ 14 ಅನ್ನು 58,999ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಈ ಆಫರ್ ಜೊತೆಗೆ ಇತರೆ ಆಯ್ದ ಕೆಲವು ಬ್ಯಾಂಕ್‌ಗಳ ರಿಯಾಯಿತಿ, ಎಕ್ಸ್‌ಚೇಂಜ್ ಕೊಡುಗೆ ಸೇರಿದಂತೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುವ ಇತರೆ ಕೊಡುಗೆಗಳನ್ನು ಸಹ ಪಡೆಯಬಹುದಾಗಿದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗಾದರೆ ಈ ಐಫೋನ್ 14 ಸರಣಿಯ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಐಫೋನ್ 14 ಫೋನ್ - ಫೀಚರ್ಸ್
ಈ ಜನಪ್ರಿಯ ಐಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಪಡೆದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ಅಲ್ಲದೇ ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.

ಅದೇ ರೀತಿ ಈ ಐಫೋನ್ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಮೂರು ಸ್ಟೋರೇಜ್ ಆಯ್ಕೆ ಇದ್ದು, 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಹಾಗೆಯೇ ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.
ಐಫೋನ್ 14 ಪ್ಲಸ್ - ಫೀಚರ್ಸ್
ಅದೇ ರೀತಿ ಐಫೋನ್ 14 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಒಳಗೊಂಡಿದ್ದು, OLED ಡಿಸ್‌ಪ್ಲೇ ಪಡೆದುಕೊಂಡಿದೆ. ಇದರ ಜೊತೆಗೆ 1200 nits ಬ್ರೈಟ್ನಸ್ ಸಪೋರ್ಟ್ ಸಹ ಇದೆ. ಇನ್ನು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಹಾಗೆಯೇ ಇದರ ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ವನ್ನು ನೀಡಲಾಗಿದೆ. ಇದು ಮೂರು ಸ್ಟೋರೇಜ್ ಆಯ್ಕೆ ಪಡೆದಿದ್ದು, 128 GB, 256 GB ಮತ್ತು 512 GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್ ಪಡೆದಿದೆ.
ಐಫೋನ್ 14 ಪ್ರೊ - ಫೀಚರ್ಸ್
ಇನ್ನು ಈ ಐಫೋನ್ ಕೂಡಾ ಮೂರು ಸ್ಟೋರೇಜ್ ಆಯ್ಕೆ ಪಡೆದಿದ್ದು, 128 GB, 256 GB ಮತ್ತು 512 GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಇದರ ಹಿಂಬದಿಯಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಹಾಗೆಯೇ ಇದು ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಆಯ್ಕೆ ಕೂಡಾ ಪಡೆದಿದೆ.


Click it and Unblock the Notifications








