Home
ಸುದ್ದಿಜಾಲ

ಕಣಿವೆಯಲ್ಲಿ ಸಾವಿಗೆ ಸನಿಹವಿದ್ದ ಮಹಿಳೆ, ನಾಯಿ ರಕ್ಷಿಸಿದ ಐಫೋನ್‌! ಸಿನಿಮಾವನ್ನೇ ಮೀರಿಸುವ ಘಟನೆ ಇದು!

ಐಫೋನ್‌ಗಳು ಕೇವಲ ಕರೆ ಅಥವಾ ವಿಡಿಯೋ ನೋಡಲು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಮಾತ್ರ ಬಳಕೆ ಬರುವುದಿಲ್ಲ. ಬಳಕೆದಾರರ ಅಮೂಲ್ಯ ಜೀವಗಳನ್ನು ಕಾಪಾಡುವ ಕೆಲಸವನ್ನೂ ಮಾಡುತ್ತವೆ. ಈ ಕಾರಣಕ್ಕೆ ಐಫೋನ್‌ಗಳಿಗೆ ಜಗತ್ತಿನಾದ್ಯಂತ ವಿಶೇಷ ಬೇಡಿಕೆ ಇದೆ.

ಹೌದು, ಐಫೋನ್‌ಗಳು ಜನರ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಪ್ರಕರಣಗಳು ಈಗಾಗಲೇ ಹಲವು ಬಾರಿ ವರದಿಯಾಗಿವೆ. ವಿಷಯ ಏನೆಂದರೆ ಈ ಎಲ್ಲಾ ಜೀವ ಉಳಿಸುವ ಘಟನೆಗಳು ಹೆಚ್ಚಾಗಿ ಅಮೆರಿಕಾದಿಂದಲೇ ವರದಿಯಾಗಿವೆ. ಅದಾಗ್ಯೂ ನಮ್ಮ ದೇಶದಲ್ಲೀ ಸಹ ಕೆಲವು ಬಾರಿ ಈ ರೀತಿಯ ಘಟನೆಗಳು ಜರುಗಿದ್ದು, ಈ ಮೂಲಕ ಐಫೋನ್‌ಗಳಿಗೆ ಇರುವ ಕ್ರೇಜ್‌ ಇನ್ನಷ್ಟು ಹೆಚ್ಚಾಗಿದೆ. ಹಾಗಿದ್ರೆ, ಈಗ ಬಚಾವ್ ಆದವರು ಯಾರು?, ಐಫೋನ್ ಇವರಿಗೆ ಹೇಗೆ ಸಹಾಯ ಮಾಡಿತು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಣಿವೆಯಲ್ಲಿ ಸಾವಿಗೆ ಸನಿಹವಿದ್ದ ಮಹಿಳೆ, ನಾಯಿ ರಕ್ಷಿಸಿದ ಐಫೋನ್‌!

ಸಾವಿನ ಸನಿಹದಲ್ಲಿದ್ದ ಯುವತಿ ಪಾರು: ಐಫೋನ್ 14 ನಲ್ಲಿನ ವಿಶೇಷ ಸೌಲಭ್ಯದಿಂದಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಎಂದಿನಂತೆ ಈ ಘಟನೆಯೂ ಅಮೆರಿಕದಿಂದ ವರದಿಯಾಗಿದೆ. ಅಷ್ಟಕ್ಕೂ ಅಮೆರಿಕದಲ್ಲೇ ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಐಫೋನ್ 14 ನ ಫೀಚರ್ಸ್‌ಗಳು ಅಮೆರಿಕಾದಲ್ಲಿ ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಉತಾಹ್‌ನ ಆರ್ಚೆಸ್ ನ್ಯಾಷನಲ್ ಪಾರ್ಕ್‌ನಿಂದ ಸುಮಾರು 10 ಮೈಲುಗಳಷ್ಟು ಪೂರ್ವದಲ್ಲಿರುವ ಮೇರಿ ಜೇನ್ ಕ್ಯಾನ್ಯನ್‌ನಲ್ಲಿ ಹಠಾತ್ ಪ್ರವಾಹದಿಂದ ಕೊಚ್ಚಿಹೋಗಿದ್ದ 38 ವರ್ಷದ ಮಹಿಳೆಯನ್ನು ಐಫೋನ್‌ 14 ಮೂಲಕ ಕಾಪಾಡಲಾಗಿದೆ. ಎರಡೂ ಬದಿಯ ಗುಡ್ಡದ ಹಾದಿಯಲ್ಲಿ ನಡೆದು ಹೋಗುತ್ತಿದ್ದಾಗ ಬೆಟ್ಟದ ನೀರು ರಭಸವಾಗಿ ಹರಿಯುತ್ತಿರುವುದು ಕಂಡುಬಂದಿದೆ. ನಂತರ ಅವರು ತಪ್ಪಿಸಿಕೊಳ್ಳಲು ಸಮೀಪದ ಮರಳು ದಿಬ್ಬದ ಮೇಲೆ ಹತ್ತಿದ್ದಾರೆ. ಆದರೆ, ಈ ದಿಬ್ಬವೂ ಪ್ರವಾಹದಲ್ಲಿ ಕುಸಿದು ಮಹಿಳೆ ಹಾಗೂ ಇವರೊಂದಿಗೆ ಇದ್ದ ನಾಯಿ ಕೊಚ್ಚಿ ಹೋಗಿದೆ.

ಇಷ್ಟಾದರೂ ಕೈನಲ್ಲಿ ಇದ್ದ ಅವರ ಐಫೋನ್‌ ಅನ್ನು ಅನ್ನು ಬಿಟ್ಟಿಲ್ಲ. ದುರಂತ ಏನೆಂದರೆ ಆ ಪ್ರದೇಶದಲ್ಲಿ ಯಾವುದೇ ನೆಟ್‌ವರ್ಕ್ ಕವರೇಜ್ ಇಲ್ಲದ ಕಾರಣ, ಮಹಿಳೆ ತುರ್ತು ತಂಡಕ್ಕೆ ಕರೆ ಮಾಡಿ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಅವರು ಐಫೋನ್‌ನ ಉಪಗ್ರಹ ಸಂಪರ್ಕ ಫೀಚರ್ಸ್‌ ಬಳಸಲು ಮುಂದಾಗಿದ್ದಾರೆ. ಸೆಲ್ಯುಲಾರ್ ನೆಟ್‌ವರ್ಕ್ ಕವರೇಜ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ತುರ್ತು ಸೇವೆಗಳನ್ನು ಸಂಪರ್ಕಿಸಲು ಈ ಫೀಚರ್ಸ್‌ ಸಹಾಯ ಮಾಡಲಿದೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದ ವಿಚಾರ.

ಇನ್ನು ಮಹಿಳೆಯ ವಿಚಾರಕ್ಕೆ ಬರೋಣ. ಜೀವ ಉಳಿಸಿಕೊಳ್ಳುವ ದಾರಿಯನ್ನು ಹುಡುಕುತ್ತಾ ಮುಂದೆ ಸಾಗುತ್ತಲೇ ಇದ್ದರಂತೆ. ಜೊತೆಗೆ ತಾನು ಕಳುಹಿಸಿದ ಮೆಸೆಜ್‌ ವಿಫಲವಾಗಿದೆ, ಇನ್ನೇನು ಸಾವು ಸಮೀಪಿಸುತ್ತಿದೆ ಎಂದು ಭಾವಿಸುತ್ತಲೇ ಸಾಧ್ಯವಾದಷ್ಟು ಜೀವಕ್ಕಾಗಿ ಹೋರಾಡೋಣ ಎಂದು ಹೋಗುತ್ತಿದ್ದಾಗ SOS ಅನ್ನು ಪ್ರಯತ್ನಿಸಿದ ಎಂಟು ನಿಮಿಷಗಳ ನಂತರ ಭದ್ರತಾ ತಂಡವು ವಿನಂತಿಯನ್ನು ಸ್ವೀಕರಿಸಿದೆ. ಸಂದೇಶ ರವಾನೆಯ ಸಮಯದಲ್ಲಿ GPS ಮಾಹಿತಿ ಮಾತ್ರ ತಂಡಕ್ಕೆ ತಲುಪಿದೆ. ಇದು ರಕ್ಷಣೆ ಮಾಡುವವರಿಗೆ ಸವಾಲಾಗಿತ್ತು.

ರಕ್ಷಣಾ ತಂಡ ಹೆಲಿಕಾಪ್ಟರ್ ಮೂಲಕ ಸ್ಥಳಕ್ಕಾಗಮಿಸಿ ಮಹಿಳೆಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮೆಸೆಜ್‌ ವಿಫಲವಾಗಿದೆ ಮತ್ತು ಯಾರೂ ತಮ್ಮನ್ನು ರಕ್ಷಿಸಲು ಬರುವುದಿಲ್ಲ ಎಂದು ಭಾವಿಸಿದ ಮಹಿಳೆ ಸುಮಾರು ಎರಡು ಮೈಲುಗಳಷ್ಟು ಕೆಳಗೆ ಹೋಗಿದ್ದಾರೆ. ಅದಾಗ್ಯೂ ರಕ್ಷಣಾ ಹೆಲಿಕಾಪ್ಟರ್ ಕಡಿದಾದ ಭೂಪ್ರದೇಶವನ್ನು ಸ್ಕ್ಯಾನ್ ಮಾಡಿ ಕೊನೆಗೂ ಮಹಿಳೆಯನ್ನು ಪತ್ತೆ ಮಾಡಿದೆ.

ವಿಷಯ ಏನೆಂದರೆ ಈ ವೇಳೆ ಹೆಲಿಕಾಪ್ಟರ್ ಅನ್ನು ಈ ಕಣಿವೆಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಆದರೆ, ಹೆಲಿಕಾಪ್ಟರ್ ಸಿಬ್ಬಂದಿ ಮಹಿಳೆ ಎಲ್ಲಿದ್ದಾರೆ ಎಂದು ಇತರೆ ಶೋಧ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಅಲ್ಲಿಗೆ ತಲುಪಿದಾಗ ಮಹಿಳೆ ತಲೆಯಿಂದ ಪಾದದವರೆಗೆ ಕೆಸರು ಹೊದ್ದು ಸುಸ್ತಾಗಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ನಂತರ, ಈ ಘಟನೆಯಲ್ಲಿ ಈಕೆಗೆ ಗಂಭೀರ ಗಾಯವಾಗಿಲ್ಲ ಎಂದು ತಿಳಿದ ಸಿಬ್ಬಂದಿ ಸಾವಿನ ಹಾದಿಯಿಂದ ಹೊರತಂದಿದ್ದಾರೆ.

ಕಣಿವೆಯಲ್ಲಿ ಸಾವಿಗೆ ಸನಿಹವಿದ್ದ ಮಹಿಳೆ, ನಾಯಿ ರಕ್ಷಿಸಿದ ಐಫೋನ್‌!

ಇನ್ನು ಈ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್‌ನೊಂದಿಗೆ ಉಪಗ್ರಹ ಸಂಪರ್ಕ ಫೀಚರ್ಸ್ ಫೋನ್‌ನ ಮಾಲೀಕರಿಗೆ ಏನಾದರೂ ಸಮಸ್ಯೆ ಆದಾಗ ಅದನ್ನು ಇತರರಿಗೆ ತಿಳಿಯುವಂತೆ ಮಾಡುತ್ತದೆ. ಕ್ರ್ಯಾಶ್ ಪತ್ತೆ ಫೀಚರ್ಸ್‌ನೊಂದಿಗೆ ಈಗಾಗಲೇ ಅನೇಕ ಜನರಿಗೆ ಈ ರೀತಿಯ ಸಹಾಯ ಮಾಡಿದೆ. ಈ ಕಾರಣಕ್ಕೆ ಈಗ ಐಫೋನ್‌ ಹೊರತುಪಡಿಸಿ ಇತರೆ ಫೋನ್‌ಗಳಲ್ಲೂ ಸಹ ಈ ಫೀಚರ್ಸ್‌ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ.

Best Mobiles in India

English summary
Cases where iPhones have played a crucial role in saving people's lives have already been reported many times. Now a woman and her dog who were close to death were saved.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+