Home
ಸುದ್ದಿಜಾಲ

ಸಾವಿಗೆ ಸನಿಹದಲ್ಲಿದ್ದ ವಿದ್ಯಾರ್ಥಿಗಳ ಜೀವ ಉಳಿಸಿದ ಐಫೋನ್‌; ಇವರ ಪ್ರವಾಸ ರಣರೋಚಕ!

ಐಫೋನ್‌ 14 ಸ್ಮಾರ್ಟ್‌ಫೋನ್‌ ಸಾವಿನ ದವಡೆಯಲ್ಲಿದ್ದ ವಿದ್ಯಾರ್ಥಿಗಳ ಜೀವ ಉಳಿಸುವ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ತನ್ನ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡಿದೆ. ಇದೇ ರೀತಿಯ ಹಲವಾರು ಘಟನೆಗಳು ಈ ಹಿಂದೆಯೂ ಸಂಭವಿಸಿದ್ದು, ಈ ಮೂಲಕ ಐಫೋನ್‌ ಪ್ರಾಣ ಉಳಿಸುವ ಡಿವೈಸ್‌ ಆಗಿ ಮಾರ್ಪಟ್ಟಿದೆ.

ಹೌದು, ಇತ್ತೀಚೆಗೆ ಲಾಂಚ್‌ ಆಗಿರುವ ಐಫೋನ್ 14 ಫೋನ್‌ಗಳು ವಿವಿಧ ಫೀಚರ್ಸ್‌ ಹೊಂದಿದ್ದು, ಇದರಲ್ಲಿ ತುರ್ತು SOS ಅನ್ನು ಅನ್ನು ಸಹ ನೀಡಲಾಗಿದೆ. ಇದು ಉಪಗ್ರಹದ ಮೂಲಕ ಕೆಲಸ ಮಾಡಲಿದ್ದು, ನೀವೇನಾದರೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದರೆ ಜೀವ ಉಳಿಸುವ ಕಾಯಕವನ್ನು ಇದು ಮಾಡುತ್ತದೆ. ಇದರ ಭಾಗವಾಗಿಯೇ ಸಾವಿನ ಕದ ತಟ್ಟುತ್ತಿದ್ದ ವಿದ್ಯಾರ್ಥಿಗಳ ಜೀವವನ್ನು ಉಳಿಸಲಾಗಿದೆ.ಹಾಗಿದ್ರೆ,ಈ ಘಟನೆ ನಡೆದಿರುವುದು ಎಲ್ಲಿ?,ಜೀವ ಉಳಿಸಲು ಇದು ಹೇಗೆ ಸಹಾಯ ಮಾಡಿತು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಸಾವಿಗೆ ಸನಿಹದಲ್ಲಿದ್ದ ವಿದ್ಯಾರ್ಥಿಗಳ ಜೀವ ಉಳಿಸಿದ ಐಫೋನ್‌; ಇವರ ಪ್ರವಾಸ ರಣರೋಚಕ!

ಈ ಘಟನೆ ಜರುಗಿದ್ದು ಎಲ್ಲಿ?: ಉತಾಹ್‌ನಲ್ಲಿರುವ ಪ್ರೊವೊನಲ್ಲಿನ ಬ್ರಿಗಮ್ ಯಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ಯಾನ್ ರಾಫೆಲ್ ಸ್ವೆಲ್ ರಿಕ್ರಿಯೇಷನ್ ​​ಪ್ರದೇಶಕ್ಕೆ ಹೋಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಅಂದರೆ ವಿದ್ಯಾರ್ಥಿಗಳಾದ ಮಮ್ಫೋರ್ಡ್, ಜೆರೆಮಿ ಮತ್ತು ಸ್ಟೀಫನ್ ವಾಟ್ಸ್ ಈ ಸಾಹಸಮಯ ಪ್ರದೇಶದಲ್ಲಿ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಕಾರಣ ಕಂಡು ಕೇಳಿರದ ಕೇಳಿರದ ಕಣಿವೆಗಳು ಮತ್ತು ಜರಿಗಳೇ ತುಂಬಿರುವ ಪ್ರದೇಶ ಅದಾಗಿತ್ತು.

ಈ ಪ್ರದೇಶಕ್ಕೆ ಪ್ರವಾಸ ಬೆಳೆಸುವ ಮುನ್ನವೇ ಇವರೆಲ್ಲಾ ಅದರ ಬಗ್ಗೆ ಸಾಕಷ್ಟು ಸಂಶೋಧನೆಯನ್ನೂ ಸಹ ನಡೆಸಿದ್ದರು. ಈ ಪ್ರದೇಶದ ಬಗ್ಗೆ ಈ ಹಿಂದೆ ಸಾಕಷ್ಟು ಓದಿ ತಿಳಿದುಕೊಂಡು ಅಲ್ಲಿಗೆ ಪ್ರಯಾಣಿಸಲು ಸುಮಾರು ಒಂದು ವರ್ಷದಿಂದ ಪ್ಲ್ಯಾನ್‌ ಸಹ ಮಾಡಿಕೊಂಡಿದ್ದರು. ಆದರೆ, ಈ ಪ್ರವಾಸ ಇವರ ಜೀವವನ್ನೇ ತೆಗೆಯುವ ಮಟ್ಟಕ್ಕೆ ಹೋಗಿದ್ದು ಮಾತ್ರ ಶೋಚನೀಯ ಸಂಗತಿ.

ಸಾವಿಗೆ ಸನಿಹದಲ್ಲಿದ್ದ ವಿದ್ಯಾರ್ಥಿಗಳ ಜೀವ ಉಳಿಸಿದ ಐಫೋನ್‌; ಇವರ ಪ್ರವಾಸ ರಣರೋಚಕ!

ಪ್ರಕೃತಿಯ ಮುಂದೆ ಯಾರೂ ಸರಿಸಮಾನರಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಯಾಕೆಂದರೆ ವಿದ್ಯಾರ್ಥಿಗಳ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ. ಇದರಲ್ಲಿನ ಹೆಚ್ಚುವರಿ ಆರ್ದ್ರ ಚಳಿಗಾಲವು ಕಣಿವೆಯನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿತ್ತು. ಅದಾಗ್ಯೂ ಇವರ ಮುಂದಿನ ಪ್ರಯಾಣವು ಅವರು ನಿರೀಕ್ಷಿಸಿದ್ದಕ್ಕಿಂತ ಕಠಿಣವಾಯಿತು. ನಂತರ ಅವರು ಕಣಿವೆಯಲ್ಲಿ ನೀರು ತುಂಬಿದ ಕುಳಿಯಲ್ಲಿ ಸಿಲುಕಿಕೊಂಡರು. ನಂತರ ಹೇಗೋ ಮಾಡಿ ಇದರಿಂದ ಹೊರಬಂದು ತಮ್ಮ ಪ್ರಯಾಣ ಮುಂದುವರೆಸಿದ್ದರು. ಆದರೆ, ಮತ್ತೆ ದೊಡ್ಡ ಹಳ್ಳದಲ್ಲಿ ಸಿಲುಕಿಕೊಂಡರು.

ಈ ವೇಳೆ ಎಲ್ಲಾ ರೀತಿಯ ಸಾಹಸ ಮೆರೆದರೂ ಸಹ ಅಲ್ಲಿಂದ ಒಂದು ಕಾಲನ್ನು ಕೀಳುವುದಕ್ಕೂ ಸಾಧ್ಯವಾಗಲಿಲ್ಲವಂತೆ. ಆದರೂ ಸಹ ಗಂಟೆಗಟ್ಟಲೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದರೂ ಯಾವುದೇ ಯಶಸ್ಸು ಅವರಿಗೆ ಕಾಣಿಸಲಿಲ್ಲ. ಇದರೊಂದಿಗೆ ಹೆಚ್ಚು ಕಾಲ ನೀರಿನಲ್ಲೇ ಇದ್ದುದ್ದರಿಂದ ದೇಹವು ಸಹ ಅವರ ನಿಯಂತ್ರಣ ತಪ್ಪಿತ್ತು. ಅದರಲ್ಲೂ ಅದು ಯಾವುದೇ ನೆಟ್‌ವರ್ಕ್ ಕವರೇಜ್ ಇಲ್ಲದ ಪ್ರದೇಶವಾಗಿದ್ದರಿಂದ ಹೊರಗಿನ ಪ್ರಪಂಚದ ಸಹಾಯ ಪಡೆಯಲು ಅವರಿಗೆ ಸಾಧ್ಯವೇ ಆಗಲಿಲ್ಲ.

ಈ ನಡುವೆ ಈ ಗ್ರೂಪ್‌ನ ಮೂರನೇ ಸದಸ್ಯ ಸ್ಟೀಫನ್ ವಾಟ್ಸ್ ಎಂಬ ವಿದ್ಯಾರ್ಥಿ ಬಳಿ ಇದ್ದ ಐಫೋನ್ ಸಹಾಯಕ್ಕೆ ಬಂದಿದೆ. ಸ್ಟೀಫನ್ ವಾಟ್ಸ್ ಉಪಗ್ರಹ ಸಂಪರ್ಕದ ಫಿಚರ್ಸ್‌ ಇರುವ ಐಫೋನ್ 14 ಅನ್ನು ಹೊಂದಿದ್ದು, ಆತ 911 ಗೆ ತುರ್ತು ಸಂದೇಶವನ್ನು ಸೆಂಡ್‌ ಮಾಡಿದ್ದಾನೆ. ಈ ಮೂಲಕ ಯಾರಾದರೂ ನಮ್ಮನ್ನು ರಕ್ಷಣೆ ಮಾಡಲು ಬಂದೇ ಬರುತ್ತಾರೆ ಎಂದು ನಂಬಿದ್ದಾರೆ.

ಸಾವಿಗೆ ಸನಿಹದಲ್ಲಿದ್ದ ವಿದ್ಯಾರ್ಥಿಗಳ ಜೀವ ಉಳಿಸಿದ ಐಫೋನ್‌; ಇವರ ಪ್ರವಾಸ ರಣರೋಚಕ!

ಇಷ್ಟೆಲ್ಲಾ ಆದ ಮೇಲೆ ಸಾವಿನ ದವಡೆಯಲ್ಲಿದ್ದ ಅವರು ಹೇಗೋ ಮಾಡಿ ಆ ಕೊಳದಿಂದ ಹೊರಬಂದಿದ್ದಾರೆ. ಆದರೆ, ಅವರಲ್ಲಿ ಉಂಟಾದ ಭಯ, ಆಯಾಸ ಮತ್ತು ನಿಶ್ಯಕ್ತಿಯಿಂದಾಗಿ ಅವರು ಮತ್ತೆ ಒಂದು ಹೆಜ್ಜೆ ಕೂಡ ಮುಂದೆ ಇಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಜೊತೆಗೆ ಹೆಚ್ಚು ಚಳಿ ಇದ್ದುದ್ದರಿಂದ ಸ್ವಲ್ಪ ಬೆಂಕಿ ಹಾಕಿ ದೇಹವನ್ನು ಬೆಚ್ಚಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ಈ ಕಡೆ ಐಫೋನ್ 14 ನಿಂದ ಬಂದ ತುರ್ತು ಸಂದೇಶವನ್ನು ಅನುಸರಿಸಿ ಸಾಲ್ಟ್ ಲೇಕ್ ಸಿಟಿಯಿಂದ ಹೊರಟ ಹೆಲಿಕಾಪ್ಟರ್ ಅಲ್ಲಿಗೆ ತಲುಪಿದೆ. ವೈದ್ಯಕೀಯ ತಂಡ ಸೇರಿದಂತೆ ರಕ್ಷಣಾ ಕಾರ್ಯಕರ್ತರು ಈ ಮೂವರನ್ನೂ ಸುರಕ್ಷಿತವಾಗಿ ಹೊರ ತಂದಿದ್ದಾರೆ. ತಕ್ಷಣ ಚಿಕಿತ್ಸೆ ಹಾಗೂ ಇತರೆ ನೆರವು ನೀಡಿದ ಬಳಿಕ ಮೂವರ ಪ್ರಾಣ ಉಳಿಸಲಾಗಿದೆ. ಇದರೊಂದಿಗೆ ಐಫೋನ್ 14 ರ ಉಪಗ್ರಹ ಸಂಪರ್ಕ ಫೀಚರ್ಸ್‌ಗೆ ಅವರು ಧನ್ಯರಾಗಿದ್ದಾರೆ.

ಏನಿದು ಉಪಗ್ರಹ ಸಂಪರ್ಕ ಸೇವೆ: ಆಪಲ್ ಸೆಪ್ಟೆಂಬರ್ 2022 ರಲ್ಲಿ ಐಫೋನ್ 14 ನೊಂದಿಗೆ ಉಪಗ್ರಹ ಸಂಪರ್ಕ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಈ ಫೀಚರ್ಸ್‌ ಅನ್ನು ಮಾಡಲು, ತುರ್ತು SOS ಸ್ಲೈಡರ್ ಕಾಣಿಸಿಕೊಳ್ಳುವವರೆಗೆ ಸೈಡ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಒತ್ತಿ ಹಿಡಿದುಕೊಳ್ಳಬೇಕಿದೆ. ತುರ್ತು ಸೇವೆಗಳಿಗೆ ಕರೆ ಮಾಡಲು ತುರ್ತು ಕರೆ ಸ್ಲೈಡರ್ ಬಳಕೆ ಮಾಡಬಹುದಾಗಿದೆ.

Best Mobiles in India

English summary
Recently launched iPhone 14 phones have various features including emergency SOS. Through these new features, three students have saved their lives despite being in the jaws of death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+