iPhone: ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್: 45 ಸಾವಿರಕ್ಕೂ ಐಫೋನ್ 15 ಲಭ್ಯ!
ಫ್ಲಿಪ್‌ಕಾರ್ಟ್ (Flipkart) ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುವ ಮೂಲಕ ಭಿನ್ನ ಫೀಚರ್ಸ್ ಆಯ್ಕೆಯ ಫೋನ್‌ಗಳನ್ನು ಕಡಿಮೆ ಬೆಲೆಗೆ ನೀಡುವ ಕೆಲಸ ಮಾಡಿದೆ. ಅದರಂತೆ ಈಗ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ (Flipkart Republic Day Sale) ನಡೆಯುತ್ತಿದ್ದು, ಈ ವಿಶೇಷ ಸೇಲ್‌ನಲ್ಲಿ 45 ಸಾವಿರಕ್ಕೆ ಐಫೋನ್ 15 (iPhone 15) ಖರೀದಿ ಮಾಡಲು ಅನುವು ಮಾಡಿಕೊಟ್ಟಿದೆ.
ಹೌದು, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆಫರ್ ಬೆಲೆಯಲ್ಲಿ ನೀವು ನೋಡಿರಬಹುದು. ಆದರೆ, ಅದೆಲ್ಲಾ ಆಫರ್‌ಗಿಂತ ಭಿನ್ನ ಆಫರ್ ಈ ಸೇಲ್‌ನಲ್ಲಿ ಲಭ್ಯ ಇದ್ದು, ಅದರಲ್ಲೂ ಐಫೋನ್‌ಗಳು ಈ ವಿಶೇಷ ಸೇಲ್‌ನಲ್ಲಿ ವಿಶೇಷ ಬೆಲೆಯೊಂದಿಗೆ ಕಾಣಿಸಿಕೊಂಡಿವೆ. ಹಾಗಿದ್ರೆ, ಈ ಹೊಸ ಐಫೋನ್ ಅನ್ನು ಅದೇಗೆ 45 ಸಾವಿರಕ್ಕೆ ಖರೀದಿ ಮಾಡಲು ಸಾಧ್ಯ?, ಇದರ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್: ಆಪಲ್ ವಂಡರ್‌ಲಸ್ಟ್ ಈವೆಂಟ್‌ನಲ್ಲಿ (Apple Wonderlust Event) ಐಫೋನ್ 15 ಅನ್ನು 79,999 ರೂ.ಗಳ ಬೆಲೆಗೆ ಲಾಂಚ್ ಮಾಡಲಾಗಿತ್ತು. ಈ ಫೋನ್ ಬಿಡುಗಡೆಯಾದ ಕೆಲವೇ ತಿಂಗಳುಗಳ ನಂತರ, ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅಂದರೆ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಸೇಲ್‌ನಲ್ಲಿ 45,000 ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ವೆನಿಲ್ಲಾ ಐಫೋನ್ 15 ರೂಪಾಂತರದ ಬೆಲೆ 66,999 ಆಗಿದ್ದು, ಹೆಚ್ಚುವರಿಯಾಗಿ ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಐಫೋನ್ 15 ಅನ್ನು 63,999 ಬೆಲೆಯಲ್ಲಿ ಖರೀದಿಸಬಹುದು. ಅದಾಗ್ಯೂ ನೀವು ವಿನಿಮಯ ಆಫರ್ ಬಯಸಿದ್ರೆ ಮಾತ್ರ 54,990 ರೂ. ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ.

ದೋಷರಹಿತ ಸ್ಥಿತಿಯಲ್ಲಿರುವ ಹಳೆಯ ಐಫೋನ್ 13 (iPhone 13) ಸುಮಾರು 26,000 ರೂ.ಗಳ ಮೌಲ್ಯ ಹೊಂದಿದ್ದರೆ, ಅದೇ ಸ್ಥಿತಿಯಲ್ಲಿರುವ ಐಫೋನ್ 14 (iPhone 14) ಸುಮಾರು 30,000 ರೂ.ಗಳ ಬೆಲೆ ಹೊಂದಿರಲಿದೆ. ಈ ಕಾರಣಕ್ಕಾಗಿಯೇ ಹೊಸ ಫೋನ್ ಅನ್ನು ಪರಿಣಾಮಕಾರಿ 41,000ರೂ.ಗಳು ಮತ್ತು 37,000 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ನೀವು ಈ ಹಳೇ ಫೋನ್ ಅನ್ನು ನೇರವಾಗಿ ನೀವೇ ಬೇರೆ ಯಾರಿಗಾದರೂ ಸೇಲ್ ಮಾಡಿದ್ರೆ ಇನ್ನೂ ಹೆಚ್ಚಿನ ಮೊತ್ತ ಪಡೆಯಬಹುದಾಗಿದೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ.
ಐಫೋನ್ 15 ಫೀಚರ್ಸ್: ಐಫೋನ್ 14 ಪ್ರೊ ನಲ್ಲಿ ಕಂಡು ಬಂದ ಫೀಚರ್ಸ್ ಈ ಐಫೋನ್ 15 ನಲ್ಲಿ ಕಾಣಿಸಿಕೊಂಡಿದೆ. ಅಂದರೆ ಸಾಂಪ್ರದಾಯಿಕ ನಾಚ್ ಅನ್ನು ಬದಲಿಸುವ ಹೊಸ ಡೈನಾಮಿಕ್ ಐಲ್ಯಾಂಡ್ ತಂತ್ರಜ್ಞಾನವನ್ನು ಐಫೋನ್ 15 ನಲ್ಲಿ ನೋಡಬಹುದು. ಈ ಹೊಸ ಆವಿಷ್ಕಾರವು ಬಳಕೆದಾರರಿಗೆ ತಮ್ಮ ಐಫೋನ್‌ಗಳೊಂದಿಗೆ ಸಂವಹನ ನಡೆಸಲು ಹೆಚ್ಚು ಸುಲಭ ಮಾರ್ಗವನ್ನು ನೀಡುತ್ತದೆ.

ಡಿಸ್‌ಪ್ಲೇ ಗಾತ್ರವು ಹಿಂದಿನ ಜನ್‌ನಂತೆಯೇ 6.1 ಇಂಚು ಇದೆಯಾದರೂ ಆಪಲ್ ಗಮನಾರ್ಹವಾಗಿ ಬ್ರೈಟ್‌ನೆಸ್ ಅನ್ನು 2000 ನಿಟ್ಸ್‌ಗಳಿಗೆ ಹೆಚ್ಚಿಗೆ ಮಾಡಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಐಫೋನ್ 15 ವರ್ಧಿತ ಕ್ಯಾಮೆರಾ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಕ್ವಾಡ್ ಪಿಕ್ಸೆಲ್ ಸೆನ್ಸರ್ ಆಯ್ಕೆಯೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಕ್ಷಿಪ್ರ ಆಟೋಫೋಕಸ್‌ಗಾಗಿ 100 % ಫೋಕಸ್ ಪಿಕ್ಸೆಲ್ ಆಯ್ಕೆಯನ್ನು ಪಡೆದಿವೆ. ಇದು 24 ಮೆಗಾಪಿಕ್ಸೆಲ್ ಸೂಪರ್-ಹೈ-ರೆಸಲ್ಯೂಶನ್ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಕೆ ಮಾಡಿಕೊಂಡು ಕೆಲಸ ಮಾಡುತ್ತದೆ.
ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024 ನಲ್ಲಿ ಐಫೋನ್ ಮಾತ್ರವಲ್ಲದೆ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್‌ಗಳು ಸಹ ಆಫರ್ ಬೆಲೆಗೆ ಲಭ್ಯ ಇವೆ. ಭಾರತದಲ್ಲಿ ಜನವರಿ 14 ರಿಂದ ಈ ಸೇಲ್ ಆರಂಭ ಆಗಿದ್ದು, ಖರೀದಿದಾರರು ನಥಿಂಗ್ ಫೋನ್ 2 ಅನ್ನು ಸಹ ಈ ವೇಳೆ ಬಂಫರ್ ಆಫರ್ ಮೂಲಕ ಖರೀದಿ ಮಾಡಬಹುದಾಗಿದೆ. ಈ ಫೋನ್ ಅನ್ನು ನೀವು 32,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 44,999 ರೂ.ಗಳಾಗಿದೆ.


Click it and Unblock the Notifications








