Home
ಸುದ್ದಿಜಾಲ

iPhone ಖರೀದಿಸುವ ಪ್ಲ್ಯಾನ್‌ ಇದ್ರೆ, ಕೂಡಲೇ ಖರೀದಿಸಿ!..ಈ ಆಫರ್‌ ಬಿಡಬೇಡಿ!

ಪ್ರಮುಖ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯ ಬ್ಲ್ಯಾಕ್‌ ಫ್ರೈಡ್‌ ಸೇಲ್‌ (Black Friday Sale) ಚಾಲ್ತಿ ಇದೆ. ಈ ವಿಶೇಷ ಮಾರಾಟದಲ್ಲಿ ಕೆಲವು ಆಯ್ದ ಮೊಬೈಲ್‌ಗಳು ಆಕರ್ಷಕ ರಿಯಾಯಿತಿಯಲ್ಲಿ ಖರೀದಿಗೆ ಲಭ್ಯ ಇವೆ. ಡಿಸ್ಕೌಂಟ್‌ನಲ್ಲಿ ಹೊಸ ಐಫೋನ್‌ ಖರೀದಿಸಬೇಕೆ ಎಂದುಕೊಂಡಿದ್ದರೆ, ಈ ಆಫರ್ ಸೂಕ್ತ. ಏಕೆಂದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಆಪಲ್‌ ಐಫೋನ್‌ 15 (Apple iPhone 15) ಮೊಬೈಲ್‌ ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಲೀಡಿಂಗ್ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಆಪಲ್‌ ಐಫೋನ್‌ 15 (Apple iPhone 15) ಮೊಬೈಲ್ ಶೇ. 15% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ಐಫೋನ್‌ 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಖರೀದಿದಾರರು 58,749ರೂ. ಗಳ ಕೊಡುಗೆಯ ದರದಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಡಿಸ್ಕೌಂಟ್‌ ಪಡೆದುಕೊಂಡರೆ, ಇನ್ನಷ್ಟು ಕೊಡುಗೆ ಸಹ ಸಿಗಲಿದೆ.

iPhone ಖರೀದಿಸುವ ಪ್ಲ್ಯಾನ್‌ ಇದ್ರೆ, ಕೂಡಲೇ ಖರೀದಿಸಿ!..ಈ ಆಫರ್‌ ಬಿಡಬೇಡಿ!

ಅಂದಹಾಗೆ ಐಫೋನ್‌ 15 ಮೊಬೈಲ್‌ A16 ಬಯೋನಿಕ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆ ಪಡೆದಿದ್ದು, ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದು 128 GB, 256 GB ಹಾಗೂ 512 GB ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಆಪಲ್‌ ಐಫೋನ್‌ 15 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌

ಐಫೋನ್‌ 15 ಮೊಬೈಲ್‌ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, 1600 nits ಬ್ರೈಟ್ನಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಹಾಗೆಯೇ ಇದು ಮಾತ್ರೆ ಮಾದರಿಯ ( ಪಿಲ್‌ ಶೇಪ್‌ ಮಾದರಿ ) ಪಂಚ್‌ ಹೋಲ್‌ ರಚನೆ ಹೊಂದಿದ್ದು, ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ ಐಡಿ ಒಳಗೊಂಡಿದೆ.

ಪ್ರೊಸೆಸರ್‌ ಯಾವುದು

ಐಫೋನ್‌ 15 ಮೊಬೈಲ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್‌ ios 16 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128 GB, 256 GB ಹಾಗೂ 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್‌ ಮಾಹಿತಿ

ಐಫೋನ್‌ 15 ಮೊಬೈಲ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದ್ದು, ಅವುಗಳಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದು ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಅನ್ನು ಪಡೆದಿದೆ. ಇನ್ನು 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಹಾಗೂ ಇತರೆ

ಐಫೋನ್‌ 15 ಮೊಬೈಲ್‌ ತನ್ನ ಈ ಹಿಂದಿನ ಸರಣಿಗಿಂತ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಐಫೋನ್‌ ಪ್ರಿಯರ ಗಮನ ಸೆಳೆದಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್‌ ( Dynamic Island ) ಆಯ್ಕೆಯನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ. ಅಲ್ಲದೇ ವಾಯರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ರೋಡ್‌ ಸೈಡ್‌ ಅಸಿಸ್ಟಂಟ್‌ ವೈಯಾ ಸೆಟಲೈಟ್‌ ಆಯ್ಕೆ ಇದೆ.

Best Mobiles in India

English summary
iPhone 15 Gets Massive Discount in Flipkart's Black Friday Sale. Check out offers, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+