Home
ಸುದ್ದಿಜಾಲ

ಭಾರತದಲ್ಲಿ ಐಫೋನ್‌ 15 ಬೆಲೆ ಎಷ್ಟು?..ಸೇಲ್‌ ಯಾವಾಗ? ಇಲ್ಲಿದೆ ವಿವರ

ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದ್ದ ಐಫೋನ್ 15 ಸರಣಿಯನ್ನು ಆಪಲ್ ಸಂಸ್ಥೆಯು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಪಲ್‌ 'ವಂಡರ್‌ಲಸ್ಟ್‌' (Wonderlust) ಹೆಸರಿನ ಕಾರ್ಯಕ್ರಮದ ಮೂಲಕ ತನ್ನ ಐಫೋನ್‌ 15 ಫೋನ್‌ಗಳ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಐಫೋನ್‌ಗಳ ಬೆಲೆ ಭಾರೀ ಸದ್ದು ಮಾಡುತ್ತಿದೆ.

ಹೌದು, ಆಪಲ್‌ ಸಂಸ್ಥೆಯ ಐಫೋನ್ 15 ಸರಣಿ ಲಾಂಚ್ ಆಗಿದ್ದು, ಈ ಸರಣಿಯು ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಈ ನೂತನ ಐಫೋನ್‌ಗಳು ಭಿನ್ನ ವೇರಿಯಂಟ್‌ ಹಾಗೂ ಆಕರ್ಷಕ ಕಲರ್‌ ಆಯ್ಕೆಗಳನ್ನು ಪಡೆದಿವೆ.

ಭಾರತದಲ್ಲಿ ಐಫೋನ್‌ 15 ಬೆಲೆ ಎಷ್ಟು?..ಸೇಲ್‌ ಯಾವಾಗ? ಇಲ್ಲಿದೆ ವಿವರ

ಈ ಸರಣಿಯ ಐಫೋನ್ 15 ಹಾಗೂ ಐಫೋನ್‌ 15 ಪ್ಲಸ್‌ ಆರಂಭಿಕ ಮಾಡೆಲ್‌ಗಳಾಗಿದ್ದು, ಕೆಲವು ಅಪ್‌ಗ್ರೇಡ್ ಫೀಚರ್ಸ್‌ಗಳಿಂದ ಐಫೋನ್‌ ಪ್ರಿಯರನ್ನು ಆಕರ್ಷಿಸಿದೆ. ಹಾಗಾದರೇ ಭಾರತದಲ್ಲಿ ಐಫೋನ್ 15 ಹಾಗೂ ಐಫೋನ್‌ 15 ಪ್ಲಸ್‌ ಬೆಲೆ ಎಷ್ಟು? ಇವುಗಳ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ 15 ಬೆಲೆ ವಿವರ ಹೀಗಿದೆ :
128GB - 79,900
256GB - 89,900
512GB - 1,09,900

ಐಫೋನ್‌ 15 ಪ್ಲಸ್‌ ಬೆಲೆ ವಿವರ ಹೀಗಿದೆ :
128GB - 89,900
256GB - 99,000
512GB - 1,19,900

ಮಾರಾಟ ಯಾವಾಗ :
ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ಮಾಡೆಲ್‌ಗಳನ್ನು ಗ್ರಾಹಕರು ಸೆಪ್ಟೆಂಬರ್ 15 ರಂದು ಸಂಜೆ 5:30 ರಿಂದ ಪ್ರಿ- ಆರ್ಡರ್‌ ಮಾಡಬಹುದಾಗಿದೆ. ಇನ್ನು ಈ ಐಫೋನ್‌ಗಳ ಮಾರಾಟವು ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುತ್ತದೆ.

ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ಡಿಸ್‌ಪ್ಲೇ ಫೀಚರ್ಸ್‌ :
ಐಫೋನ್‌ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್‌ ಬೆಂಬಲ ಸಹ ಪಡೆದುಕೊಂಡಿದೆ. ಈ ಐಫೋನ್‌ ಮಾತ್ರೆ ಮಾದರಿಯ (ಪಿಲ್‌ ಶೇಪ್‌ ಮಾದರಿ) ಪಂಚ್‌ ಹೋಲ್‌ ರಚನೆ ಪಡೆದಿದೆ. ಇನ್ನು ಐಫೋನ್‌ 15 ಪ್ಲಸ್‌ 6.7 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಕೂಡಾ ಪಿಲ್ ಶೇಪ್‌ ಮಾದರಿಯ ಪಂಚ್‌ ಹೋಲ್ ರಚನೆ ಒಳಗೊಂಡಿದೆ. ಡಾಲ್ಬಿ ವಿಷನ್ ಸಪೋರ್ಟ್‌ ಸಹ ಇದೆ.

ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ಪ್ರೊಸೆಸರ್‌ ಫೀಚರ್ಸ್‌ :
ಐಫೋನ್‌ 15 ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128GB, 256GB, 512GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಐಫೋನ್‌ 15 ಪ್ಲಸ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯ ಮಾಡಲಿದೆ.

ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ಕ್ಯಾಮೆರಾ ಫೀಚರ್ಸ್‌ :
ಐಫೋನ್‌ 15 ಫೋನ್‌ ಎರಡು ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಹೊಂದಿದ್ದು, 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಐಫೋನ್‌ 15 ಪ್ಲಸ್‌ ಫೋನಿನ ಮುಖ್ಯ ಕ್ಯಾಮೆರಾವು ಕೂಡಾ 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ತಂತ್ರಜ್ಞಾನ ಹೊಂದಿವೆ.

ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ಬ್ಯಾಟರಿ ಫೀಚರ್ಸ್‌ :
ಐಫೋನ್‌ 15 ಹಾಗೂ ಐಫೋನ್‌ 15 ಪ್ಲಸ್‌ ಮಾಡೆಲ್‌ಗಳು ತನ್ನ ಈ ಹಿಂದಿನ ಸರಣಿಗಿಂತ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿವೆ. ಅಲ್ಲದೇ ಈ ಎರಡು ಐಫೋನ್‌ಗಳು 5G ಸಪೋರ್ಟ್ ಪಡೆದಿವೆ. ಅಲ್ಲದೇ ಹೊಸ ವಾಯರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯ ಸಹ ಒಳಗೊಂಡಿರುವುದು ಪ್ಲಸ್‌ ಪಾಯಿಂಟ್‌. ಇದರೊಂದಿಗೆ ರೋಡ್‌ ಸೈಡ್‌ ಅಸಿಸ್ಟಂಟ್‌ ವೈಯಾ ಸೆಟಲೈಟ್‌ ಆಯ್ಕೆ ಹಾಗೂ ಡೈನಾಮಿಕ್ ಐಲ್ಯಾಂಡ್‌ ಆಯ್ಕೆಗಳನ್ನು ಪಡೆದುಕೊಂಡಿವೆ.

Best Mobiles in India

English summary
iPhone 15, iPhone 15 Plus launched in India. check price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+