ಹೊಸ ಐಫೋನ್ 15 ಖರೀದಿಸಬೇಕೆ?..ಪ್ರಿ-ಆರ್ಡರ್ ಪ್ರಾರಂಭ ಆಗಿದೆ ನೋಡಿ!
ಜನಪ್ರಿಯ ಆಪಲ್ ಸಂಸ್ಥೆಯ ನೂತನ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿ, ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಠಿಸಿದೆ. ಈ ನೂತನ ಸರಣಿಯು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಈ ನೂತನ ಐಫೋನ್ ಖರೀದಿ ಮಾಡುವ ಭಾರತೀಯ ಗ್ರಾಹಕರು ಮುಂಗಡ ಆರ್ಡರ್ (pre-order iPhone 15) ಮಾಡಲು ಅವಕಾಶ ಲಭ್ಯ.
ಹೌದು, ಆಪಲ್ ತನ್ನ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ ಮಾಡೆಲ್‌ಗಳು ಇಂದಿನಿಂದ (15 ಸೆಪ್ಟೆಂಬರ್) ಭಾರತದಲ್ಲಿ ಸೇಲ್ ಪ್ರಕ್ರಿಯೆ ಪ್ರಾರಂಭಿಸಿದೆ. ಹಾಗಾದರೆ ಐಫೋನ್ 15 ಮುಂಗಡ ಬುಕಿಂಗ್ (pre-order iPhone 15) ಯಾವಾಗ? ಈ ನೂತನ ಐಫೋನ್‌ಗಳ ಬೆಲೆ ಎಷ್ಟು ? ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ ಖರೀದಿ ಮಾಡಬಯಸುವ ಗ್ರಾಹಕರು ಇಂದು (ಸೆ. 15 ರಂದು) ಸಂಜೆ 5:30 ರಿಂದ ಮುಂಗಡ ಬುಕಿಂಗ್ ಮಾಡಬಹುದಾಗಿದೆ. ಅಂದಹಾಗೆ ಇದೇ ಸೆಪ್ಟೆಂಬರ್ 22 ರಿಂದ ನೂತನ ಐಫೋನ್‌ಗಳು ಗ್ರಾಹಕರ ಕೈಸೇರಲಿವೆ.
ಐಫೋನ್ 15 ಬೆಲೆ ಮಾಹಿತಿ :
128GB - 79,900
256GB - 89,900
512GB - 1,09,900
ಐಫೋನ್ 15 ಪ್ಲಸ್ ಬೆಲೆ ಮಾಹಿತಿ :
128GB - 89,900
256GB - 99,000
512GB - 1,19,900
ಐಫೋನ್ 15 ಪ್ರೊ ಬೆಲೆ ಮಾಹಿತಿ :
128GB - 1,34,900
256GB - 1,44,900
512GB - 1,64,900
1 TB - 1,84,900
ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ ಮಾಹಿತಿ :
256GB - 1,59,900
512GB - 1,79,900
1 TB - 1,99,900
ಡಿಸ್‌ಪ್ಲೇ ಫೀಚರ್ಸ್ ಮಾಹಿತಿ :
ಐಫೋನ್ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್ ಬೆಂಬಲ ಸಹ ಹೊಂದಿದೆ. ಈ ಐಫೋನ್ ಪಿಲ್ ಶೇಪ್ ಮಾದರಿ ಪಂಚ್ ಹೋಲ್ ರಚನೆ ಪಡೆದಿದೆ. ಇನ್ನು ಐಫೋನ್ 15 ಪ್ಲಸ್ 6.7 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಕೂಡಾ ಪಿಲ್ ಶೇಪ್ ಮಾದರಿಯ ಪಂಚ್ ಹೋಲ್ ರಚನೆ ಪಡೆದಿದೆ. ಡಾಲ್ಬಿ ವಿಷನ್ ಸಪೋರ್ಟ್ ಕೂಡಾ ಇದೆ.
ಪ್ರೊಸೆಸರ್ ಫೀಚರ್ಸ್ ಮಾಹಿತಿ :
ಐಫೋನ್ 15 ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್ ಸಪೋರ್ಟ್ ಕೂಡಾ ಹೊಂದಿದೆ. ಅಲ್ಲದೇ ಇದು 128GB, 256GB, 512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಐಫೋನ್ 15 ಪ್ಲಸ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.
ಕ್ಯಾಮೆರಾ ಫೀಚರ್ಸ್ ಮಾಹಿತಿ :
ಐಫೋನ್ 15 ಫೋನ್ ಎರಡು ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದ್ದು, 12 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಐಫೋನ್ 15 ಪ್ಲಸ್ ಫೋನಿನ ಮುಖ್ಯ ಕ್ಯಾಮೆರಾವು ಕೂಡಾ 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ತಂತ್ರಜ್ಞಾನ ಪಡೆದುಕೊಂಡಿದೆ.


Click it and Unblock the Notifications








