ಐಫೋನ್ 15 ಲಾಂಚ್‌ಗೆ ಇನ್ನೂ 8 ದಿನ ಬಾಕಿ!..ಬೆಲೆ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ!
ಸ್ಮಾರ್ಟ್‌ಫೋನ್ ಜಗತ್ತೇ ಎದುರುನೋಡುತ್ತಿರುವ ಬಹುನಿರೀಕ್ಷಿತ 'ಐಫೋನ್ 15' ಸರಣಿ ಇದೇ ಸೆಪ್ಟೆಂಬರ್ 12 ರಂದು ರಾತ್ರಿ 10:30 ಗಂಟೆಗೆ ಅಧಿಕೃತವಾಗಿ ಲಾಂಚ್ ಆಗುವುದು ಖಚಿತವಾಗಿದೆ. ಆಪಲ್‌ನ ಹೊಸ ಐಫೋನ್ 15 ಸರಣಿಯು ಐಫೋನ್ 15, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್‌ಗಳನ್ನು ಒಳಗೊಂಡಿರಲಿದೆ.
ಹೌದು, ಇದೇ ಸೆಪ್ಟೆಂಬರ್ 12 ರಂದು ಆಪಲ್ ಕಂಪನಿಯು ಅಧಿಕೃತವಾಗಿ ಐಫೋನ್ 15 ಸರಣಿಯನ್ನು ಲಾಂಚ್ ಮಾಡಲಿದೆ. ಆದರೆ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಸರಣಿಯು ಐಫೋನ್ ಪ್ರಿಯರನ್ನು ಸೆಳೆದಿದೆ. ಅಧಿಕೃತ ಲಾಂಚ್‌ಗೆ ಜಸ್ಟ್ 9 ದಿನಗಳು ಮಾತ್ರ ಬಾಕಿ ಇದ್ದು, ಆನ್‌ಲೈನ್‌ನಲ್ಲಿ ಲೀಕ್ ಆದ ಕೆಲವು ಫೀಚರ್ಸ್‌ಗಳ ಮಾಹಿತಿಯು ಫೋನ್ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಆಪಲ್ ಐಫೋನ್ 15 ಸರಣಿ ಫೋನ್‌ಗಳ ಬೆಲೆ ಎಷ್ಟು? ಈ ಐಫೋನ್‌ಗಳ ಫೀಚರ್ಸ್‌ಗಳು ಏನು? ಇತರೆ ಕೆಲವು ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಐಫೋನ್ 15 ಸರಣಿಯ ನಿರೀಕ್ಷಿತ ಫೀಚರ್ಸ್ :
ಐಫೋನ್ 15 ಸರಣಿಯ ಎಲ್ಲ ಫೋನ್‌ಗಳು ಈ ಹಿಂದಿನ ಫೋನ್‌ಗಳ ಡಿಸ್‌ಪ್ಲೇ ಮಾದರಿಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಸ್ಟ್ಯಾಂಡರ್ಡ್ ಮತ್ತು ಪ್ರೊ ವೇರಿಯಂಟ್‌ಗಳಲ್ಲಿ 6.1 ಇಂಚಿನ ಸ್ಕ್ರೀನ್ ಅನ್ನು ಕಾಣಬಹುದಾಗಿದೆ ಎಂದು ಸಂಸ್ಥೆಯು ಹೇಳಿದೆ. ಇನ್ನು ಪ್ಲಸ್ ಮತ್ತು ಪ್ರೊ ಮ್ಯಾಕ್ಸ್ ವೇರಿಯಂಟ್‌ಗಳಲ್ಲಿ 6.7 ಇಂಚಿನ OLED ಡಿಸ್‌ಪ್ಲೇ ಇರುವ ಸಾಧ್ಯತೆಗಳು ಇವೆ.
ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ನೂತನ A17 ಚಿಪ್‌ಸೆಟ್ ನಲ್ಲಿ ಕಾರ್ಯ ನಿರ್ವಹಿಸುವ ನಿರೀಕ್ಷೆಗಳಿವೆ. ಈ ಫೋನ್ 3 ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ಮೊದಲ A ಸರಣಿಯ ಆಪಲ್ ಚಿಪ್ ಎಂದು ಹೇಳಲಾಗುತ್ತದೆ. ಇನ್ನೆರಡು ವೇರಿಯಂಟ್‌ಗಳು ಕಳೆದ ವರ್ಷದ A16 ಚಿಪ್ಸೆಟ್ ಅನ್ನು ಪಡೆದಿರಲಿವೆ ಎನ್ನಲಾಗಿದೆ.
ಐಫೋನ್ 15 ವೇರಿಯಂಟ್‌ಗಳು ಐಫೋನ್ 14 ಪ್ರೊ ಮಾದರಿಗಳಂತೆ 48 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ರಚನೆ ಹೊಂದಿವೆ ಎಂದು ಹೇಳಲಾಗುತ್ತದೆ. ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ 5-6x ವರೆಗೆ ಆಪ್ಟಿಕಲ್ ಜೂಮ್‌ಗಾಗಿ ಪೆರಿಸ್ಕೋಪ್ ಲೆನ್ಸ್ ಅನ್ನು ಪಡೆದಿರುವ ನಿರೀಕ್ಷೆಗಳಿವೆ. ಆದರೆ ಐಫೋನ್ 15 ಪ್ರೊ ಇದನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ.
ಇನ್ನು ಐಫೋನ್ 14 ಪ್ರೊ ಮ್ಯಾಕ್ಸ್‌ನಲ್ಲಿ ಇರುವ 3x ಆಪ್ಟಿಕಲ್ ಜೂಮ್ ಅನ್ನು ಐಫೋನ್ 15 ಪ್ರೊ ನಲ್ಲಿಯೂ ಮುಂದುವರಿಸಬಹುದು. ಹೆಚ್ಚುವರಿಯಾಗಿ, ಹಿಂಬದಿ-ಕ್ಯಾಮೆರಾ LiDAR ಸ್ಕ್ಯಾನರ್ ಅನ್ನು ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಐಫೋನ್ 15 ಸರಣಿಯ ಫೋನ್‌ಗಳು ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿರಲಿವೆ.
ಐಫೋನ್ 15 ಸ್ಟ್ಯಾಂಡರ್ಡ್ ಆವೃತ್ತಿಯು 3,877mAh ಬ್ಯಾಟರಿ ಅನ್ನು ಹೊಂದಿರಲಿದ್ದು, ಇದು ಐಫೋನ್ 14 ಗಿಂತ ಅಧಿಕ ಆಗಿರಲಿದೆ. ಐಫೋನ್ 15 ಪ್ರೊ ಫೋನ್ 3,650mAh ಬ್ಯಾಟರಿ ಅನ್ನು ಹೊಂದಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಇದು ಕೂಡಾ ಐಫೋನ್ 14 ಪ್ರೊ ಮಾಡೆಲ್ ಬ್ಯಾಟರಿ ಗಿಂತ ಅಧಿಕ ಎನ್ನಲಾಗಿದೆ.
ಇನ್ನು ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ 4,852mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವ ಸಾಧ್ಯತೆಗಳಿವೆ. ಇದು ಐಫೋನ್ 14 ಪ್ರೊ ಮ್ಯಾಕ್ಸ್ ನಲ್ಲಿ ಲಭ್ಯ ಇರುವ 4,323mAh ಗಿಂತ ಅಧಿಕ ಆಗಿದೆ. ಈ ವೇರಿಯಂಟ್‌ಗಳು 35W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸಪೋರ್ಟ್ ಪಡೆದಿರುವ ಸಾಧ್ಯತೆಗಳು ಇಧಿಕ. ಐಫೋನ್ 15 ಮಾಡೆಲ್ ಬೆಲೆಯು ಯುಎಸ್‌ಎ ನಲ್ಲಿ $799 ರಿಂದ ಪ್ರಾರಂಭ ಎಂದು ಅಂದಾಜಿಸಲಾಗಿದೆ.


Click it and Unblock the Notifications








