Home
ಸುದ್ದಿಜಾಲ

iPhone 15 : ಶೀಘ್ರದಲ್ಲೇ ಹೊಸ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಐಫೋನ್ 15 ಸರಣಿ, ಬೆಲೆ ಎಷ್ಟಿರಬಹುದು!?

ಐಫೋನ್‌ಗಳು(iPhones) ಇಂದು ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯನ್ನು ಆಳುತ್ತಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ಬಹಳ ಬೇಡಿಕೆಯೇ ಇದೆ. ಅಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಟಾಟಾ ಕಂಪೆನಿ ಐಫೋನ್‌ಗಳ ಜೋಡಣೆ ಕಾರ್ಯವನ್ನೂ ಸಹ ಮಾಡುತ್ತದೆ. ಈ ನಡುವೆ ಮುಂದಿನ ಸರಣಿಯ ಐಫೋನ್ 15 ಬಗ್ಗೆ ಕೆಲವು ಫೀಚರ್ಸ್‌ ಲೀಕ್‌ ಆಗಿವೆ.

ಹೌದು, ಆಪಲ್ ತನ್ನ ಮುಂದಿನ ಜನ್ ಐಫೋನ್ 15 ಮತ್ತು ಐಫೋನ್ 15 ಪ್ರೊ(iPhone 15, iPhone 15 Pro) ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಸಜ್ಜಾಗಿದೆ. ಈ ಫೋನ್‌ಗಳು ಲಾಂಚ್‌ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿವೆ. ಅದರಲ್ಲೂ ಕೆಲವೊಂದಷ್ಟು ಜನರು ಯಾವಾಗ ಲಾಂಚ್‌ ಆಗುತ್ತದೆ ಎಂದು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಈಗ ಐಫೋನ್ 15 ಬಗ್ಗೆ ಕೆಲವು ಫೀಚರ್ಸ್‌ ಲೀಕ್‌ ಆಗಿದ್ದು, ಈ ಲೇಖನದಲ್ಲಿ ಅದರ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ಹೊಸ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಐಫೋನ್ 15 ಸರಣಿ, ಬೆಲೆ ಎಷ್ಟಿರಬಹುದು!?

ವಿಶೇಷ ಬದಲಾವಣೆ: ಯುರೋಪಿಯನ್ ಒಕ್ಕೂಟದ ಹೊಸ ನಿಯಮಗಳ ಪರಿಣಾಮ ಆಪಲ್ ತನ್ನದೇ ಸ್ವಾಮ್ಯದ ಲೈಟ್ನಿಂಗ್ ಪೋರ್ಟ್ ಅನ್ನು ಸ್ಥಗಿತ ಮಾಡಲಿದ್ದು, ಸಾರ್ವತ್ರಿಕ ಟೈಪ್-ಸಿ ಪೋರ್ಟ್‌ಗೆ ಬದಲಾಗುತ್ತದೆ ಎಂದು ತಿಳಿದುಬಂದಿದೆ. ಅದರಲ್ಲೂ ಭಾರತ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಐಫೋನ್ 15 ಮಾದರಿಯಲ್ಲಿ ಈ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಜೊತೆಗೆ ಸಾಂಪ್ರದಾಯಿಕ ದರ್ಜೆಯ ಬದಲಿಗೆ ಹೊಸ ದರ್ಜೆಯ ವಿನ್ಯಾಸವನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.

ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಪ್ರಕಾರ, ಈ ವರ್ಷದ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ನಲ್ಲಿ(iPhone 15,iPhone 15 Plus, iPhone 14 Pro, iPhone 14 Pro Max) ಕಾಣಿಸಿಕೊಳ್ಳುವ ಮೊದಲ ಬದಲಾವಣೆ ಎಂದರೆ ಅದು ಡೈನಾಮಿಕ್ ಐಲ್ಯಾಂಡ್ ನಾಚ್ ಎಂದು ತಿಳಿಸಿದೆ. ಡೈನಾಮಿಕ್ ಐಲ್ಯಾಂಡ್ ಸೆಲ್ಫಿ ಕ್ಯಾಮೆರಾ ಕಟೌಟ್ ಮತ್ತು ಫೇಸ್ ಐಡಿ ಸೆನ್ಸರ್‌ಗಳನ್ನು ಮರೆಮಾಡಲು ಡಿಸ್‌ಪ್ಲೇನ ಮೇಲ್ಭಾಗದಲ್ಲಿ ಅಂಡಾಕಾರದ ನಾಚ್ ಇರಲಿದೆಯಂತೆ.

ಅಷ್ಟು ಮಾತ್ರವಲ್ಲದೆ ನೋಟಿಫಿಕೇಶನ್‌(Notification) ಆಧಾರದ ಮೇಲೆ ನಾಚ್ ಅದರ ಗಾತ್ರವನ್ನು ಸರಿಹೊಂದಿಸಬಹುದಾದ ಆಯ್ಕೆ ಪಡೆದುಕೊಳ್ಳಲಿ ಎನ್ನಲಾಗಿದೆ. ಅದಾಗ್ಯೂ ಮತ್ತಷ್ಟು ವರದಿಗಳ ಪ್ರಕಾರ ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಹೊಸ ನಾಚ್ ವಿನ್ಯಾಸವನ್ನು ಹೊಂದಿರಲಿದ್ದು, ಈ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಡಿಸ್‌ಪ್ಲೇಗಳು ಹೊಸ ತಂತ್ರಜ್ಞಾನದೊಂದಿಗೆ ಕಾಣಿಸಿಕೊಳ್ಳಲಿವೆ ಎಂದು ಉಲ್ಲೇಖಿಸಲಾಗಿದೆ.

ಅಂದರೆ ಈ ಡಿಸ್‌ಪ್ಲೇಗಳು LIPO ಅನ್ನು ಹೊಂದಿರಲಿದ್ದು, ಈ LIPO ತಂತ್ರಜ್ಞಾನವನ್ನು ಆಪಲ್ ವಾಚ್ ಸರಣಿ 7 ರಲ್ಲಿ ಆ ಡಿವೈಸ್‌ನ ಅಂಚನ್ನು ತೆಳ್ಳಗೆ ಮಾಡಲು ಮತ್ತು ಡಿಸ್‌ಪ್ಲೇ ಗಾತ್ರವನ್ನು ಹೆಚ್ಚಿಗೆ ಮಾಡಲು ಬಳಕೆ ಮಾಡಲಾಗಿದೆ. ಅದರಂತೆ ಈಗ ಈ ಸೌಲಭ್ಯ ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ನಂತೆಯೇ ಐಫೋನ್ 15 ಪ್ರೊ ಸರಣಿಯು ದುರಸ್ತಿ ಸ್ನೇಹಿಯಾಗಲಿದೆ ಎಂದು ನ್ಯೂಸ್‌ ಲೆಟರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಸಾಮಾನ್ಯ ಐಫೋನ್ 15 ಮಾದರಿಗಳು ಕಳೆದ ವರ್ಷದ A16 ಬಯೋನಿಕ್ ಪ್ರೊಸೆಸರ್‌ಅನ್ನೇ ಹೊಂದಿರುತ್ತವೆ ಎಂದು ವರದಿ ಮಾಡಲಾಗಿದೆ. ಆದರೆ, ಪ್ರೊ ಫೋನ್‌ಗಳು 3 ನ್ಯಾನೋಮೀಟರ್ ಚಿಪ್‌ ಗೆ ಜಂಪ್‌ ಆಗಲಿವೆ ಎಂದು ಊಹಿಸಲಾಗಿದೆ.

ಹೊಸ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳಲಿದೆ ಐಫೋನ್ 15 ಸರಣಿ, ಬೆಲೆ ಎಷ್ಟಿರಬಹುದು!?

ಅಷ್ಟು ಮಾತ್ರವಲ್ಲದೆ ಪ್ರೊ ಮಾದರಿಗಳಲ್ಲಿ ಪ್ರೋಗ್ರಾಮೆಬಲ್ ಆಕ್ಷನ್ ಬಟನ್ ಇರಲಿದೆ ಎಂದು ಹೇಳಲಾಗುತ್ತಿದ್ದು, ಇದು ಬಳಕೆದಾರರಿಗೆ ಶಾರ್ಟ್‌ಕಟ್‌ಗಳನ್ನು ಹೊಂದಿಸಲು ಅನುಮತಿಸುತ್ತದೆ. ಉದಾಹರಣೆಗೆ, ಬಳಕೆದಾರರು ಅಸಿಸ್ಟೆವ್ ಟಚ್‌ನಂತಹ ಪ್ರವೇಶ ಫೀಚರ್ಸ್‌ಗಳನ್ನು ಇದರಲ್ಲಿ ಪ್ರವೇಶಿಸಬಹುದು ಅಥವಾ ಈ ಬಟನ್‌ನೊಂದಿಗೆ ನೋ ಡಿಸ್ಟರ್ಬ್‌ ರೀತಿಯ ಫೋಕಸ್ ಮೋಡ್‌ಗೆ ಬದಲಾಯಿಸಿಕೊಳ್ಳಬಹುದಾಗಿದೆಯಂತೆ.

ಉಳಿದಂತೆ ಈ ಹೊಸ ಫೀಚರ್ಸ್‌ ಸುಧಾರಿತ ಪ್ರೊಸೆಸರ್‌ಗಳು (processor) ಸಂಭಾವ್ಯವಾಗಿ ಬೆಲೆ ಏರಿಕೆ ಮಾಡಲಿವೆ ಎಂದೂ ಸಹ ಹೇಳಲಾಗುತ್ತಿದೆ. ಅಂದರೆ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಯಲ್ಲಿ ಭಾರಿ ಬೆಲೆ ಏರಿಕೆ ಆಗಲಿದೆ ಎನ್ನಲಾಗಿದೆ. ಐಫೋನ್ 15 ಪ್ರೊ ಬೆಲೆ $1,099 ಆಗಿರಬಹುದು ಎನ್ನಲಾಗಿದೆ. ಅಂದರೆ ಭಾರತೀಯ ರೂಗಳಲ್ಲಿ 90,429.90ರೂ.ಗಳಾಗಿರಲಿದೆ. ಆದಾಗ್ಯೂ ಭಾರತಕ್ಕೆ ಈ ಫೋನ್‌ಗಳು ಇನ್ನೂ ಹೆಚ್ಚಿನ ಬೆಲೆ ಹೊಂದಿರಬಹುದು ಎನ್ನಲಾಗಿದೆ.

ಯಾಕೆಂದರೆ ಯುಎಸ್ ಮಾರುಕಟ್ಟೆಗೆ (US market) ಹೋಲಿಸಿದರೆ ಕಳೆದ ಬಾರಿ ಆಪಲ್‌ ಭಾರತದಲ್ಲಿ $300 ಹೆಚ್ಚಳದೊಂದಿಗೆ ಐಫೋನ್‌ 14 ಪ್ರೊ ಅನ್ನು ಪರಿಚಯಿಸಿತ್ತು. ಅಂದರೆ ಭಾರತದಲ್ಲಿ ಇದರ ಬೆಲೆ 1,29,900 ರೂ.ಗಳಾಗಿತ್ತು. ಈ ಕಾರಣದಿಂದಾಗಿ ಐಫೋನ್‌ ಪ್ರೊ ಹಾಗೂ ಮ್ಯಾಕ್ಸ್‌ ಫೋನ್‌ಗಳು ಹೆಚ್ಚಿನ ಬೆಲೆ ಹೊಂದಿರಲಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Apple is all set to launch its next-gen iPhone 15 and iPhone 15 Pro smartphones. These phones have created a whirlwind in the market even before their launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+