Home
ಸುದ್ದಿಜಾಲ

iPhone 15 ಬೆಲೆಯಲ್ಲಿ ಭಾರೀ ಇಳಿಕೆ!..ಆಫರ್‌ ಬೆಲೆ ತಿಳಿದ್ರೆ, ನೀವು OMG ಅಂತೀರಾ!

ಟೆಕ್‌ ಉತ್ಪನ್ನಗಳ ಮಾರಾಟದ ಪ್ರಮುಖ ಸ್ಟೋರ್‌ಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ (Flipkart) ತಾಣದಲ್ಲಿ ಆಯ್ದ ಆಪಲ್‌ ಐಫೋನ್‌ಗಳು ರಿಯಾಯಿತಿ ಪಡೆದಿವೆ. ಫ್ಲಿಪ್‌ಕಾರ್ಟ್‌ನ ಈ ವಿಶೇಷ ಮಾರಾಟ ಮೇಳದಲ್ಲಿ ಕೆಲವು ಐಫೋನ್‌ಗಳು ಬೊಂಬಾಟ್‌ ಡಿಸ್ಕೌಂಟ್‌ ಪಡೆದಿದ್ದು, ಹೊಸ ಐಫೋನ್‌ ಖರೀದಿ ಮಾಡಲು ಬಯಸುವ ಗ್ರಾಹಕರು ಹುಬ್ಬೇರಿಸುವಂತೆ ಆಗಿದೆ. ಮುಖ್ಯವಾಗಿ ಆಪಲ್‌ ಐಫೋನ್‌ 15 (Apple iPhone 15) ಫೋನ್‌ ಕೊಡುಗೆಯು ಸಖತ್‌ ಆಕರ್ಷಕ ಎನಿಸಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ (Flipkart) ಪ್ಲಾಟ್‌ಫಾರ್ಮ್‌ ನಲ್ಲಿ ಸದ್ಯ ಆಪಲ್‌ ಐಫೋನ್‌ಗಳು ಸಖತ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಮುಖ್ಯವಾಗಿ ಆಪಲ್‌ ಐಫೋನ್‌ 15 (Apple iPhone 15) ಅತ್ಯುತ್ತಮ ಬೆಲೆ ಇಳಿಕೆ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರ ಸಂಗಸ ತಂದಿದೆ. ಈ ಫೋನ್‌ 128 GB, 256 GB ಹಾಗೂ 512 GB ಆಂತರೀಕ ಸ್ಟೋರೇಜ್‌ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಇದು ಡೈನಾಮಿಕ್ ಐಲ್ಯಾಂಡ್‌ (Dynamic Island) ಆಯ್ಕೆಯನ್ನು ಪಡೆದಿದೆ.

iPhone 15 ಬೆಲೆಯಲ್ಲಿ ಭಾರೀ ಇಳಿಕೆ!..ಆಫರ್‌ ಬೆಲೆ ತಿಳಿದ್ರೆ, ನೀವು OMG ಅಂತೀರಾ!

ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ (Flipkart) ಸೇಲ್‌ನಲ್ಲಿ ಐಫೋನ್‌ 15 ಮೊಬೈಲ್‌ ಶೇ. 17% ರಷ್ಟು ಆಫರ್‌ ಬೆಲೆಯಲ್ಲಿ ಪಡೆದುಕೊಂಡಿದೆ. ಐಫೋನ್‌ 15 (128GB) ಫೋನ್‌ 57,999 ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಎಕ್ಸ್‌ಚೇಂಜ್ ಆಫರ್‌ ಸಹ ಪಡೆದುಕೊಂಡರೆ, ಈ ಐಫೋನ್‌ ಅನ್ನು ಇನ್ನಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಆಪಲ್‌ ಐಫೋನ್‌ 15 ಮೊಬೈಲ್‌ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

ಐಫೋನ್‌ 15 ಮೊಬೈಲ್‌ ಫೀಚರ್ಸ್‌

ಐಫೋನ್‌ 15 ಮೊಬೈಲ್‌ 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, 1600 nits ಬ್ರೈಟ್ನಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಹಾಗೆಯೇ ಇದು ಮಾತ್ರೆ ಮಾದರಿಯ ( ಪಿಲ್‌ ಶೇಪ್‌ ಮಾದರಿ ) ಪಂಚ್‌ ಹೋಲ್‌ ರಚನೆ ಹೊಂದಿದ್ದು, ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ ಐಡಿ ಹೊಂದಿದೆ.

ಐಫೋನ್‌ 15 ಮೊಬೈಲ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್‌ ios 16 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128 GB, 256 GB, 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಐಫೋನ್‌ 15 ಮೊಬೈಲ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದು ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ಎರಡನೇ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಅನ್ನು ಪಡೆದಿದೆ. ಇನ್ನು 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಐಫೋನ್‌ 15 ಮೊಬೈಲ್‌ ತನ್ನ ಈ ಹಿಂದಿನ ಸರಣಿಗಿಂತ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಐಫೋನ್‌ ಪ್ರಿಯರ ಗಮನ ಸೆಳೆದಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್‌ ( Dynamic Island ) ಆಯ್ಕೆಯನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ ಹಾಗೆಯೇ ವಾಯರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯ ಕೂಡಾ ಪಡೆದಿದೆ. ರೋಡ್‌ ಸೈಡ್‌ ಅಸಿಸ್ಟಂಟ್‌ ವೈಯಾ ಸೆಟಲೈಟ್‌ ಆಯ್ಕೆ ಇದೆ.

Best Mobiles in India

English summary
iPhone 15 now available at massive price drop flipkart. check offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+