Home
ಸುದ್ದಿಜಾಲ

iPhone 15: ಐಫೋನ್ 15 ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ 40,000 ರೂ.ಒಳಗೆ ಖರೀದಿಸಿ: ಅದೇಗೆ ಅಂತೀರಾ?

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಐಫೋನ್ 15 (iPhone 15) ಗೆ ದೊಡ್ಡ ಬೇಡಿಕೆ ಇದೆ. ಈಗಾಗಲೇ ಸಾಕಷ್ಟು ಜನರು ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಈ ನಡುವೆ ಆಪಲ್‌ ಐಫೋನ್16 ಫೋನ್‌ಗಳ ಕೆಲವು ಮಾಹಿತಿ ಸಹ ಲೀಕ್‌ ಆಗುತ್ತಿವೆ. ಈ ಬೆಳವಣಿಗೆ ನಡುವೆ ಐಫೋನ್ 15 ಸ್ಮಾರ್ಟ್‌ಫೋನ್‌ ಅನ್ನು ಸುಲಭವಾಗಿ ಖರೀದಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಹೌದು, ಐಫೋನ್ 15 ಫೋನ್‌ ದುಬಾರಿ ಬೆಲೆ ಹೊಂದಿದೆಯಾದರೂ ನೀವು ಈಗ ಕಡಿಮೆ ದರದಲ್ಲೇ ಖರೀದಿ ಮಾಡಬಹುದಾಗಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ ನೀಡಲಾಗಿದ್ದು, ಈ ಮೂಲಕ 12 ಸಾವಿರ ಉಳಿತಾಯ ಸಹ ಮಾಡಬಹುದಾಗಿದೆ. ಆದರೆ, ಈಗ ನೀವು ಕೆಲವು ಆಫರ್ ಬಳಕೆ ಮಾಡಿಕೊಂಡು ಈ ಫೋನ್‌ ಅನ್ನು 40,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಸಾಧ್ಯ?, ಏನೆಲ್ಲ ಆಫರ್ ಇದೆ ಅನ್ನೋದನ್ನು ನೋಡೋಣ ಬನ್ನಿ.

 ಐಫೋನ್ 15 ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ 40,000 ರೂ.ಒಳಗೆ ಖರೀದಿಸಿ...

ಐಫೋನ್ 15 ಅಫರ್ ಬೆಲೆಗೆ: ನೀವು ಐಫೋನ್ 15 ಅನ್ನು ಖರೀದಿ ಮಾಡಲು ಮುಂದಾಗಿದ್ರೆ ಇದು ಉತ್ತಮ ಸಮಯ. ಯಾಕೆಂದರೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ (Amazon, Flipkart) ವಿವಿಧ ಕೊಡುಗೆಗಳನ್ನು ನೀಡಲಾಗಿದೆ. ಈ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಆಕರ್ಷಕ ಡೀಲ್‌ಗಳನ್ನು ನೀಡಿದ್ದು, ನೀವು ಈಗಾಗಲೇ ಐಫೋನ್ ಬಳಕೆದಾರರಾಗಿದ್ದರೆ ನಿಮಗೆ ಅನ್ವಯ ಆಗಲಿದೆ. ಯಾಕೆಂದರೆ ನಿಮ್ಮ ಹಳೆಯ ಐಫೋನ್‌ ಅತ್ಯುತ್ತಮವಾಗಿದ್ದರೆ 37,000 ರೂ. ವರೆಗೆ ಡಿಸ್ಕೌಂಟ್‌ ಸಿಗಲಿದೆ.

ವಿವರವಾಗಿ ಹೇಳುವುದಾದರೆ ಅಮೆಜಾನ್ ಮೂಲಕ ಐಫೋನ್ 15 ಅನ್ನು ಖರೀದಿ ಮಾಡಲು ಮುಂದಾದರೆ 128GB ಮಾದರಿಯು 75,900 ರೂ.ಗಳ ಬೆಲೆಯಲ್ಲಿ ಇದು ಕಾಣಿಸಿಕೊಂಡಿದ್ದು, 5% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದಾಗ್ಯೂ ಬೆಲೆ ಟ್ಯಾಗ್‌ನಿಂದ 34,500 ವರೆಗೆ ಕಟ್‌ ಮಾಡಬಹುದು ಅಂದರೆ ವಿನಿಮಯ ಆಫರ್ ಅನ್ನು ನೀಡಲಾಗಿದ್ದು, ನಿಮ್ಮ ಹಳೆಯ ಫೋನ್‌ ಅನ್ನು ಈ ಮೂಲಕ ಮಾರಾಟ ಮಾಡಬಹುದಾಗಿದೆ.

 ಐಫೋನ್ 15 ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ 40,000 ರೂ.ಒಳಗೆ ಖರೀದಿಸಿ...

ಫ್ಲಿಪ್‌ಕಾರ್ಟ್ ವಿಷಯಕ್ಕೆ ಬಂದರೆ ಈ ಫೋನ್‌ ಮೇಲೆ 37,500 ರೂ. ಗಳ ವರೆಗಿನ ವಿನಿಮಯ ಆಫರ್ ನೀಡಲಾಗಿದೆ. ಆಯ್ದ ಮಾದರಿಗಳ ಮೇಲೆ ಹೆಚ್ಚುವರಿ 3,000ರೂ. ಗಳ ಆಫರ್ ಸಹ ಇದ್ದು ಫ್ಲಿಪ್‌ಕಾರ್ಟ್‌ ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಇಎಮ್‌ಐ ಮತ್ತು ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 5,000 ರೂಪಾಯಿಗಳ ರಿಯಾಯಿತಿ ಸಹ ಸಿಗಲಿದೆ. ಜೊತೆಗೆ ಇಎಮ್‌ಐ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಎಮ್‌ಐ ಮೇಲೆ 5,000 ರೂ. ನೀಡಲಾಗುತ್ತಿದ್ದು, ಈ ಮೂಲಕ ನಲವತ್ತು ಸಾವಿರದ ಆಸುಪಾಸಿನಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್ ಹೊರತುಪಡಿಸಿ ಅಧಿಕೃತ ಆಪಲ್‌ ಮಾರಾಟಗಾರರಾದ iNvent ಸ್ಟೋರ್ ಮೂಲಕ ಕಡಿಮೆ ದರದಲ್ಲಿ ಅಂದರೆ 71,900 ರೂ.ಗಳಲ್ಲಿ ಐಫೋನ್‌ 15 ಅನ್ನು ಖರೀದಿ ಮಾಡಬಹುದಾಗಿದೆ. ಅಂದರೆ 3,000 ರೂ.ಗಳ ತ್ವರಿತ ರಿಯಾಯಿತಿ ಮತ್ತು 5,000 ರೂ.ಗಳ ಕ್ಯಾಶ್‌ಬ್ಯಾಕ್‌ ಆಯ್ಕೆಯನ್ನು ಈ ಫೋನ್‌ ಮೇಲೆ ನೀಡಲಾಗಿದೆ.

ಇನ್ನು ಐಫೋನ್ 15 ಅತ್ಯಂತ ಶಕ್ತಿಶಾಲಿ ಡಿವೈಸ್‌ಗಳಲ್ಲಿ ಒಂದಾಗಿದೆ. ಈ ಫೋನ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಅನ್ನು ಪಡೆದಿದೆ. ಈ ಸೌಲಭ್ಯ ಹಿಂದೆ ಉನ್ನತ-ಶ್ರೇಣಿಯ ವೇರಿಯಂಟ್‌ಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಬೇಸಿಕ್‌ ವೇರಿಯಂಟ್‌ನಲ್ಲೂ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಕಾಣಿಸಿಕೊಂಡಿದ್ದು, ಇದಕ್ಕಾಗಿ ಜನರು ಆಕರ್ಷಿತರಾಗಿದ್ದಾರೆ.

 ಐಫೋನ್ 15 ಅನ್ನು ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ 40,000 ರೂ.ಒಳಗೆ ಖರೀದಿಸಿ...

ಹಾಗೆಯೇ ಈ ಫೋನ್ ಇದು ಟೈಟಾನಿಯಂ ಮಿಶ್ರಲೋಹ ಫ್ರೇಮ್ ನೊಂದಿಗೆ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಶಕ್ತಿಯುತ A16 ಬಯೋನಿಕ್ ಚಿಪ್‌ನೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲೂ ಪ್ರಮುಖವಾಗಿ ಈ ಫೋನ್ ವೇಗವಾದ ಡೇಟಾ ವರ್ಗಾವಣೆಗಾಗಿ ಯುಎಸ್‌ಬಿ 3.2 ಜನ್ 5 ಅನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
iPhone 15 phone can now be purchased at a low price. Because Flipkart and Amazon have announced an offer for this phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+