Home
ಸುದ್ದಿಜಾಲ

ಇದೇ ಬೆಸ್ಟ್‌ ಸೆಲ್ಫಿ ಸ್ಮಾರ್ಟ್‌ಫೋನ್‌ ಅಂತೆ!..ಇದರ ಬೆಲೆ ಕೇಳಿದ್ರೆ, ತಲೆ ತಿರುಗುತ್ತೆ!

ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಾಗುತ್ತವೆ. ಅದೇ ರೀತಿ ಈಗ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಆಪಲ್‌ ಐಫೋನ್‌ ಸರಣಿಯ ಹೈ ಎಂಡ್‌ ಮೊಬೈಲ್‌ ಆಗಿರುವ ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಫೋನ್‌ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂದು DxOMark ರೇಟಿಂಗ್ ಮಾಡಿದೆ.

ಹೌದು, ನೂತನ ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್‌ ಬೆಸ್ಟ್‌ ಸೆಲ್ಫಿ ಕ್ಯಾಮೆರಾ ಎಂದು DXOMARK ರೇಟ್ ಮಾಡಿದೆ. ಅಂದಹಾಗೆ DXOMARK ಒಂದು ವಾಣಿಜ್ಯ ವೆಬ್‌ಸೈಟ್ ಆಗಿದ್ದು, ಇದು ಸ್ಮಾರ್ಟ್‌ಫೋನ್‌ಗಳು, ಲೆನ್ಸ್‌ಗಳು ಮತ್ತು ಕ್ಯಾಮೆರಾಗಳನ್ನು ವೈಜ್ಞಾನಿಕವಾಗಿ ನಿರ್ಣಯಿಸುವ ಸ್ವತಂತ್ರ ಬೆಂಚ್‌ಮಾರ್ಕ್‌ ಆಗಿದೆ.

ಇದೇ ಬೆಸ್ಟ್‌ ಸೆಲ್ಫಿ ಸ್ಮಾರ್ಟ್‌ಫೋನ್‌ ಅಂತೆ!..ಬೆಲೆ ಕೇಳಿದ್ರೆ, ತಲೆ ತಿರುಗುತ್ತೆ

DxOMark ಐಫೋನ್ 15 ಪ್ರೊ ಮ್ಯಾಕ್ಸ್ ಫೋನಿಗಾಗಿ ತನ್ನ ಸೆಲ್ಫಿ ಕ್ಯಾಮೆರಾ ಪರೀಕ್ಷಾ ಫಲಿತಾಂಶಗಳನ್ನು ಶೇರ್ ಮಾಡಿಕೊಂಡಿದೆ. ಆಪಲ್‌ ಸಂಸ್ಥೆಯ ನೂತನ ಹಾಗೂ ಹೈ ಎಂಡ್ ಬೆಲೆಯ ಈ ಐಫೋನ್ 149 ಸ್ಕೋರ್‌ಗೆ ತಲುಪಿದಂತೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಇನ್ನು DxOMark ಸೆಲ್ಫಿ ಕ್ಯಾಮೆರಾ ಪರೀಕ್ಷೆಯಲ್ಲಿ ಅತ್ಯಧಿಕ ಸ್ಕೋರ್ ಇದಾಗಿದೆ. ಹೀಗಾಗಿ ಈ ಐಫೋನ್ ಈಗ ಸೆಲ್ಫಿ ಕ್ಯಾಮೆರಾ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಇದೆ.

DxOMark ಸೆಲ್ಫಿ ಕ್ಯಾಮೆರಾ ಪರೀಕ್ಷೆಯಲ್ಲಿ ಕಳೆದ ವರ್ಷದ ಐಫೋನ್ 14 ಪ್ರೊ ಮ್ಯಾಕ್ಸ್ 145 ಸ್ಕೋರ್‌ಗಳನ್ನು ಪಡೆದುಕೊಂಡಿತ್ತು. ಹೊಸ ಐಫೋನ್ 15 ಪ್ರೊ ಮ್ಯಾಕ್ಸ್‌ ಫೋನ್‌ ಹಿಂದಿನಂತೆಯೇ ಅದೇ ಕ್ಯಾಮೆರಾ ರಚನೆ ಅನ್ನು ಹೊಂದಿದ್ದರೂ ಉತ್ತಮ ಕಾರ್ಯಕ್ಷಮತೆಯನ್ನು ನೀಡಲು ನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ.

ಈ ಐಫೋನ್‌ f/1.9 ಅಪರ್ಚರ್, ಆಟೋಫೋಕಸ್ ಮತ್ತು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಜೊತೆಗೆ ಅದೇ 12ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಇದೇ ಬೆಸ್ಟ್‌ ಸೆಲ್ಫಿ ಸ್ಮಾರ್ಟ್‌ಫೋನ್‌ ಅಂತೆ!..ಬೆಲೆ ಕೇಳಿದ್ರೆ, ತಲೆ ತಿರುಗುತ್ತೆ

ಐಫೋನ್ 15 ಪ್ರೊ ಮ್ಯಾಕ್ಸ್ ಫೋನಿನ ಫೀಚರ್ಸ್‌ ಹೀಗಿವೆ

ಆಪಲ್‌ ಸಂಸ್ಥೆಯ ನೂತನ ಈ ಐಫೋನ್‌ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಅನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ A17 ಪ್ರೊ ಬಯೋನಿಕ್ ಚಿಪ್‌ಸೆಟ್‌ ಪವರ್‌ ಪಡೆದುಕೊಂಡಿದ್ದು, ಇದು 3 ನ್ಯಾನೋ ಮೀಟರ್ ಚಿಪ್, ವೇಗವಾದ ಕಾರ್ಯ ಕ್ಷಮತೆಗಾಗಿ 19 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಒಳಗೊಂಡಿದೆ.

ಸ್ಟೋರೇಜ್‌ ಹಾಗೂ ಕ್ಯಾಮೆರಾ ಮಾಹಿತಿ

ಅಂದಹಾಗೆ ಇದು 8GB RAM ಹಾಗೂ 256GB, 512GB, 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಪಡೆದಿದ್ದು, ಈ ಐಫೋನ್ ಹೆಚ್ಚು ಸುಧಾರಿತ 48 ಮೆಗಾ ಪಿಕ್ಸೆಲ್ ಸೆನ್ಸರ್‌ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದು LiDAR ಸ್ಕ್ಯಾನಿಂಗ್ ಲೋ ಲೈಟ್‌ ಮತ್ತು ನೈಟ್‌ ಮೋಡ್‌ ಫೋಟೋ ಫೀಚರ್ಸ್‌ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ.

ಸೆಲ್ಫಿ ಕ್ಯಾಮೆರಾ ಮಾಹಿತಿ

ಇದರೊಂದಿಗೆ ಈ ಐಫೋನ್‌ ಮುಂಭಾಗದಲ್ಲಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್‌ ಅನ್ನು ಒಳಗೊಂಡಿದ್ದು, ಇದರಲ್ಲಿ ಸ್ಪೆಷಲ್‌ ಏನೆಂದರೆ ಉತ್ತಮವಾದ ಜೂಮ್, ಅಂದರೆ 5x ಆಪ್ಟಿಕಲ್ ಜೂಮ್ ಸೌಲಭ್ಯ ಕೂಡಾ ಲಬ್ಯ ಇದೆ.

ಕಲರ್ ಆಯ್ಕೆ ಹೀಗಿದೆ

ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನ್ಯಾಚುರಲ್ ಟೈಟಾನಿಯಂ ಸೇರಿದಂತೆ ನಾಲ್ಕು ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇದರ ಬೆಲೆಯು 1,59,900ರೂ. ಆಗಿದೆ.

Best Mobiles in India

English summary
iPhone 15 Pro Max is the Best Selfie Camera Phone. as per DxOMark report. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+