ಆಪಲ್ 15 ಪ್ರೊ ಮ್ಯಾಕ್ಸ್ ಲಾಂಚ್: ಅಬ್ಬಬ್ಬಾ... ಈ ಫೀಚರ್ಸ್ ಬಗ್ಗೆ ತಿಳಿದ್ರೆ ವಾವ್ ಆಂತೀರಾ!
ಇಡೀ ಜಗತ್ತೆ ಬಹಳ ಕುತೂಹಲ ಇಟ್ಟುಕೊಂಡು ಕಾಯುತ್ತಿದ್ದ ಆಪಲ್ ವಂಡರ್‌ಲಸ್ಟ್ ಈವೆಂಟ್‌ನಲ್ಲಿ (apple wanderlust event 2023) ಕೊನೆಗೂ ಬಹು ನಿರೀಕ್ಷಿತ ಆಪಲ್ ಡಿವೈಸ್‌ಗಳನ್ನು ಅನಾವರಣ ಮಾಡಲಾಗಿದೆ. ಈ ಮೂಲಕ ಕೋಟ್ಯಂತರ ಆಪಲ್ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಈ ಸಮಾರಂಭದಲ್ಲಿ ವಿಶೇಷವಾಗಿ ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ (iPhone 15 Pro Max) ಎಲ್ಲರ ಗಮನ ಸೆಳೆದಿದೆ.
ಹೌದು, ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ನಡೆದ ಬಹು ನಿರೀಕ್ಷಿತ ಈವೆಂಟ್‌ನಲ್ಲಿ, ಆಪಲ್ ತನ್ನ ಇತ್ತೀಚಿನ ಡಿವೈಸ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಇದರಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಹೊಸ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್‌ನೊಂದಿಗೆ ಕಾಣಿಸಿಕೊಂಡಿದೆ, ಇದು ಫೋಟೋ ಕ್ಲಿಕ್ ಮಾಡಲು, ಅಥವಾ ಶಾರ್ಟ್‌ಕಟ್‌ಗಳನ್ನು ತೆರೆಯಲು ಅನುಕೂಲ ಮಾಡಿಕೊಡುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 15 ಪ್ರೊ ಮ್ಯಾಕ್ಸ್ ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮೂಲಕ ಈ ಫೋನ್ ವಿಶೇಷ ಎನಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ವರದಿಯಾದ ವದಂತಿಗಳು ನಿಜವಾಗಿದ್ದು, ಈ ಫೋನ್ ತೆಳುವಾದ ಬೆಜೆಲ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಬಳಕೆ ಮಾಡುವಾಗ ಹೊಸ ಅನುಭವ ನೀಡಲಿದೆ.
ಇಲ್ಲಿಯವರೆಗೆ ಆಪಲ್ ತನ್ನ ಫೋನ್‌ಗಳಲ್ಲಿ ಬಳಕೆ ಮಾಡುತ್ತಿದ್ದ ಸ್ಟೇನ್‌ಲೆಸ್ ಸ್ಟೀಲ್ ಬದಲಿಗೆ ಹೊಸ ಟೈಟಾನಿಯಂ ಮಿಶ್ರಲೋಹವನ್ನು ಚಾಸಿಸ್‌ಗಾಗಿ ಬಳಕೆ ಮಾಡಲಾಗಿದೆ. ಉಕ್ಕಿನೊಂದಿಗೆ ಹೋಲಿಸಿದರೆ, ಟೈಟಾನಿಯಂ ಹಲವು ಪ್ರಯೋಜನಗಳನ್ನು ನೀಡಲಿದೆ ಅಂದರೆ ಇದು ಹೆಚ್ಚು ಬಲವಾಗಿರಲಿದ್ದು, ಹಗುರವಾಗಿಯೂ ಇದೆ. ಇದರೊಂದಿಗೆ ಮುಂಭಾಗದಲ್ಲಿ ಡೈನಾಮಿಕ್ ಐಲ್ಯಾಂಡ್ ಆಯ್ಕೆ ನೀಡಲಾಗಿದೆ.
ಐಫೋನ್ 15 ಪ್ರೊ ಮ್ಯಾಕ್ಸ್ ಪ್ರೊಸೆಸರ್ ಮಾಹಿತಿ: ಈ ಫೋನ್ A17 ಪ್ರೊ ಬಯೋನಿಕ್ ಚಿಪ್‌ಸೆಟ್ ಬಲ ಪಡೆದುಕೊಂಡಿದ್ದು, ಇದು 3 ನ್ಯಾನೋಮೀಟರ್ ಚಿಪ್, ವೇಗವಾದ ಕಾರ್ಯಕ್ಷಮತೆಗಾಗಿ 19 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದೆ. ಹೊಸ ಆರು-ಕೋರ್ ಜಿಪಿಯು A16 ನ ಜಿಪಿಯು ಗಿಂತ 20% ವೇಗವಾಗಿರುತ್ತದೆ. ಹಾಗೆಯೇ ರೇ ಟ್ರೇಸಿಂಗ್ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಬೇಸ್ ಮಾಡೆಲ್ 8GB RAM ಹಾಗೂ 256GB ಇಂಟರ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಇದನ್ನು 1TB ವರೆಗೂ ವಿಸ್ತರಣೆ ಮಾಡಬಹುದಾಗಿದೆ.
ಐಫೋನ್ 15 ಪ್ರೊ ಮ್ಯಾಕ್ಸ್ ಕ್ಯಾಮೆರಾ ವಿಶೇಷತೆ: ಈ ಐಫೋನ್ ಹೆಚ್ಚು ಸುಧಾರಿತ 48 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ಪಡೆದುಕೊಂಡಿದ್ದು, LiDAR ಸ್ಕ್ಯಾನಿಂಗ್ ಲೋ ಲೈಟ್ ಮತ್ತು ನೈಟ್ ಮೋಡ್ ಫೋಟೋ ಫೀಚರ್ಸ್ ಬಹಳ ವಿಶೇಷ ಎನಿಸಿದೆ. ಇದರೊಂದಿಗೆ ಈ ಫೋನ್ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದರಲ್ಲಿ ವಿಶೇಷ ಏನೆಂದರೆ ಉತ್ತಮವಾದ ಜೂಮ್, ಅಂದರೆ 5x ಆಪ್ಟಿಕಲ್ ಜೂಮ್ ಆಯ್ಕೆ.
ಆಕ್ಷನ್ ಬಟನ್ ಆಯ್ಕೆ: ಈ ಫೋನ್‌ನಲ್ಲಿ ಗಮನಿಸಬೇಕಾದ ಮತ್ತೊಂದು ಹೊಸ ಫೀಚರ್ಸ್‌ಎಂದರೆ ಅದು ಆಕ್ಷನ್ ಬಟನ್. ಕೆಲವು ಫೀಚರ್ಸ್‌ಗಳಿಗೆ ಶಾರ್ಟ್‌ಕಟ್ ಆಯ್ಕೆಯನ್ನು ಇದು ನೀಡುತ್ತದೆ. ವಿವರವಾಗಿ ಹೇಳಬೇಕು ಎಂದರೆ ಈ ಫೋನ್‌ನ ಬದಿಯಲ್ಲಿರುವ ಆಕ್ಷನ್ ಬಟನ್ ಬಳಕೆದಾರರಿಗೆ ಮ್ಯೂಟ್ ಮೋಡ್ ಅನ್ನು ಆನ್ ಮತ್ತು ಆಫ್ ಮಾಡಲು ಅನುಮತಿಸಲಿದೆ. ಇಷ್ಟೇ ಅಲ್ಲದೆ ಹಲವು ಕಾರ್ಯಕ್ಕೆ ಇದನ್ನು ಬಳಕೆ ಮಾಡಬಹುದು. ಈ ಮೂಲಕ ಹಲವಾರು ವರ್ಷಗಳಿಂದ ಐಫೋನ್‌ಗಳು ಹೊಂದಿದ್ದ ಸ್ವಿಚ್ ಅನ್ನು ಬದಲಾಯಿಸಲಾಗಿದೆ.
ಇದರೊಂದಿಗೆ ಈ ಪ್ರೊ ಮ್ಯಾಕ್ಸ್ ನವೀಕರಿಸಿದ ಬ್ಯಾಟರಿ ಘಟಕಗಳನ್ನು ಪಡೆದಿದೆ ಅಂದರೆ. ಡ್ರಮ್‌ರೋಲ್‌ಗಳ ಮೂಲಕ ಚಾರ್ಜ್ ಮಾಡಬಹುದಾಗಿದೆ. ಈ ಫೋನ್ ಯುಎಸ್‌ಬಿ ಟೈಪ್ ಸಿ ಪೋರ್ಟ್ ಆಯ್ಕೆ ಹೊಂದಿದ್ದು, ಇದು ಐಚ್ಛಿಕ USB3 ಕೇಬಲ್‌ನೊಂದಿಗೆ 10Gbps ಡೇಟಾ ವರ್ಗಾವಣೆಯನ್ನು ಸಹ ಬೆಂಬಲಿಸುತ್ತದೆ.
ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ ವಿವರ: ಈ ವರ್ಷ ಎಲ್ಲಾ ಹೊಸ ಆಪಲ್ ಡಿವೈಸ್‌ಗಳು ಗಮನಾರ್ಹವಾದ ನವೀಕರಣಗಳನ್ನು ಪಡೆದಿದ್ದು, ಕಾರಣಕ್ಕೆ ಬೆಲೆಗಳು ಕನಿಷ್ಠ ಹೆಚ್ಚಳವನ್ನು ಕಂಡಿವೆ. ಅದರಂತೆ 15 ಪ್ರೊ ಮ್ಯಾಕ್ಸ್ ಮಾದರಿಯು ಭಾರತದಲ್ಲಿ 1,59,900 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿರಲಿದೆ.

ಉಳಿದಂತೆ ಐಫೋನ್‌ನ ಮೂಲ ಮಾದರಿಗಳು 79,900ರೂ. ಗಳ ಆರಂಭಿಕ ಬೆಲೆ ಹೊಂದಿವೆ. ಸೆಪ್ಟೆಂಬರ್ 15, 2023 ರಿಂದ ಮುಂಗಡ-ಕೋರಿಕೆಗೆ ಲಭ್ಯವಿರುತ್ತದೆ. ಈ ಫೋನ್ ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನೀಲಿ ಟೈಟಾನಿಯಂ ಮತ್ತು ನ್ಯಾಚುರಲ್ ಟೈಟಾನಿಯಂ ಸೇರಿದಂತೆ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.


Click it and Unblock the Notifications








