Home
ಸುದ್ದಿಜಾಲ

ಇಂದು ಐಫೋನ್‌ 15 ಸರಣಿ ಸೇಲ್‌ ಪ್ರಾರಂಭ; ಏನೆಲ್ಲಾ ಆಫರ್‌ ಇದೆ ನೋಡಿ!

ಆಪಲ್‌ ಸಂಸ್ಥೆಯು ನೂತನ ಐಫೋನ್ 15 ಸರಣಿಯು ಇಂದು ಭಾರತದ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಈ ಸರಣಿಯು ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.

ಹೌದು, ಆಪಲ್‌ ಕಂಪನಿಯ ಐಫೋನ್ 15 ಸರಣಿಯ ಫೋನ್‌ಗಳು ಇಂದು ಖರೀದಿಗೆ ಲಭ್ಯ. ಇತ್ತೀಚಿಗಷ್ಟೆ ಮುಂಗಡ ಬುಕಿಂಗ್ ಕೂಡಾ ಪ್ರಾರಂಭಿಸಿತ್ತು. ಅಂದಹಾಗೆ ಈ ನೂತನ ಐಫೋನ್‌ ಸರಣಿಯು USB-C, ಡೈನಾಮಿಕ್ ಐಲ್ಯಾಂಡ್, ಸುಧಾರಿತ ವಿನ್ಯಾಸ ಹಾಗೂ ಸುಧಾರಿತ ಕ್ಯಾಮರಾ ಸಾಮರ್ಥ್ಯಗಳ ಆಯ್ಕೆ ಪಡೆದುಕೊಂಡಿದೆ. ಹಾಗಾದರೆ ಈ ಐಫೋನ್‌ 15 ಸರಣಿಯ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದು ಐಫೋನ್‌ 15 ಸರಣಿ ಸೇಲ್‌ ಪ್ರಾರಂಭ; ಏನೆಲ್ಲಾ ಆಫರ್‌ ಇದೆ ನೋಡಿ!

ಐಫೋನ್‌ 15 ಬೆಲೆ ಮಾಹಿತಿ :
128GB ವೇರಿಯಂಟ್‌ ಬೆಲೆ - 79,900ರೂ
256GB ವೇರಿಯಂಟ್‌ ಬೆಲೆ - 89,900ರೂ
512GB ವೇರಿಯಂಟ್‌ ಬೆಲೆ - 1,09,900ರೂ

ಐಫೋನ್‌ 15 ಪ್ಲಸ್‌ ಬೆಲೆ ಮಾಹಿತಿ :
128GB ವೇರಿಯಂಟ್‌ ಬೆಲೆ - 89,900 ರೂ
256GB ವೇರಿಯಂಟ್‌ ಬೆಲೆ - 99,000 ರೂ
512GB ವೇರಿಯಂಟ್‌ ಬೆಲೆ - 1,19,900 ರೂ

ಐಫೋನ್‌ 15 ಪ್ರೊ ಬೆಲೆ ಮಾಹಿತಿ :
128GB ವೇರಿಯಂಟ್‌ ಬೆಲೆ - 1,34,900 ರೂ
256GB ವೇರಿಯಂಟ್‌ ಬೆಲೆ - 1,44,900 ರೂ
512GB ವೇರಿಯಂಟ್‌ ಬೆಲೆ - 1,64,900 ರೂ
1TB ವೇರಿಯಂಟ್‌ ಬೆಲೆ - 1,84,900 ರೂ

ಐಫೋನ್‌ 15 ಪ್ರೊ ಮ್ಯಾಕ್ಸ್‌ ಬೆಲೆ ಮಾಹಿತಿ :
256GB ವೇರಿಯಂಟ್‌ ಬೆಲೆ - 1,59,900 ರೂ
512GB ವೇರಿಯಂಟ್‌ ಬೆಲೆ - 1,79,900 ರೂ
1 TB ವೇರಿಯಂಟ್‌ ಬೆಲೆ - 1,99,900 ರೂ

ಆಫರ್‌ ಏನಿದೆ :
ಆಪಲ್‌ ಸಂಸ್ಥೆಯು ಹೆಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಮೂಲಕ ಹಾಗೂ ಇಎಮ್‌ಐ ಮೂಲಕ ಖರೀದಿಸುವ ಗ್ರಾಹಕರಿಗೆ 6,000 ರೂ. ಗಳ ಇನ್‌ಸ್ಟಂಟ್‌ ಡಿಸ್ಕೌಂಟ್‌ ನೀಡಲಿದೆ.

ಡಿಸ್‌ಪ್ಲೇ ಹೀಗಿವೆ :
ಐಫೋನ್‌ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್‌ ಬೆಂಬಲ ಸಹ ಪಡೆದಿದೆ. ಈ ಐಫೋನ್‌ ಪಿಲ್‌ ಶೇಪ್‌ ಮಾದರಿ ಪಂಚ್‌ ಹೋಲ್‌ ರಚನೆ ಪಡೆದಿದೆ. ಇನ್ನು ಐಫೋನ್‌ 15 ಪ್ಲಸ್‌ 6.7 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಕೂಡಾ ಪಿಲ್ ಶೇಪ್‌ ಮಾದರಿಯ ಪಂಚ್‌ ಹೋಲ್ ರಚನೆ ಕೂಡಾ. ಡಾಲ್ಬಿ ವಿಷನ್ ಸಪೋರ್ಟ್‌ ಸಹ ಇದೆ.

ಪ್ರೊಸೆಸರ್‌ ಕಾರ್ಯವೈಖರಿ :
ಐಫೋನ್‌ 15 ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಬಲವನ್ನು ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ios 17 ಓಎಸ್‌ ಸಪೋರ್ಟ್ ಸಹ ಹೊಂದಿದೆ. ಅಲ್ಲದೇ ಇದು 128GB, 256GB, 512GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಐಫೋನ್‌ 15 ಪ್ಲಸ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.

ಕ್ಯಾಮೆರಾ ಸೆನ್ಸಾರ್ :
ಐಫೋನ್‌ 15 ಫೋನ್‌ ಎರಡು ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಪಡೆದಿದ್ದು, 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಐಫೋನ್‌ 15 ಪ್ಲಸ್‌ ಫೋನಿನ ಮುಖ್ಯ ಕ್ಯಾಮೆರಾವು ಕೂಡಾ 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ತಂತ್ರಜ್ಞಾನ ಪಡೆದುಕೊಂಡಿದೆ.

Best Mobiles in India

English summary
iPhone 15 sale in India starts today. check out offer, price and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+