Home
ಸುದ್ದಿಜಾಲ

ಆಪಲ್‌ ಪ್ರಿಯರಿಗೆ ಶಾಕ್, ಐಫೋನ್ 15 ಬಿಡುಗಡೆ ವಿಳಂಬ?...ಕಾರಣ ಇದಾಗಿರಬಹುದಾ?

ಆಪಲ್ ಕಂಪನಿಯ ಮುಂದಿನ ಹೊಸ ಮಾದರಿಯಾದ ಐಫೋನ್‌ 15 ಸರಣಿಯನ್ನು (iPhone 15) ಖರೀದಿ ಮಾಡಲು ಹಲವಾರು ಜನರು ಈಗಾಗಲೇ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಈ ಫೋನ್‌ ಲಾಂಚ್‌ ವಿಳಂಬ ಆಗಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಸಾಕಷ್ಟು ಐಫೋನ್‌ ಪ್ರಿಯರು ಬೇಸರ ಹೊರಹಾಕಿದ್ದಾರೆ.

ಹೌದು, ಇತ್ತೀಚಿನ ವರದಿಯ ಪ್ರಕಾರ ಐಫೋನ್ 15 ಸರಣಿ ಬಿಡುಗಡೆಯಲ್ಲಿ ವಿಳಂಬ ಆಗಲಿದೆ ಎನ್ನಲಾಗಿದೆ. ಅದರಲ್ಲೂ ಖುಷಿ ಪಡುವ ವಿಷಯ ಏನೆಂದರೆ ವಿಳಂಬ ಆದರೂ ಸಹ ಈ ವರ್ಷದ ಒಳಗಡೆಯೇ ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆಪಲ್ ಸಾಮಾನ್ಯವಾಗಿ ತನ್ನ ಹೊಸ ಐಫೋನ್ ಸೀರಿಸ್‌ಗಳನ್ನು ಸೆಪ್ಟೆಂಬರ್‌ನಲ್ಲಿಯೇ ಲಾಂಚ್‌ ಮಾಡಿಕೊಂಡು ಬರುತ್ತದೆ. ಅಂತೆಯೇ, ಅದೇ ತಿಂಗಳಲ್ಲಿ ಅಥವಾ ಅದಾದ ಕೆಲವು ದಿನಗಳ ನಂತರ ಈ ಫೋನ್‌ ಅನ್ನು ಪ್ರಾರಂಭಿಸುವ ಸಾಧ್ಯತೆ ಸಹ ಇದೆ. ಹಾಗಿದ್ರೆ, ವಿಳಂಬಕ್ಕೆ ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ಆಪಲ್‌ ಪ್ರಿಯರಿಗೆ ಶಾಕ್, ಐಫೋನ್ 15 ಬಿಡುಗಡೆ ವಿಳಂಬ?...ಕಾರಣ ಇದಾಗಿರಬಹುದಾ?

ಅಂದು ಕೋವಿಡ್‌ ಸಮಸ್ಯೆ ಇತ್ತು, ಆದರೆ ಇಂದು?..: 2020 ರಲ್ಲಿ ಕೋವಿಡ್ ಕಾರಣದಿಂದಾಗಿ ಆಪಲ್‌ ತನ್ನ ಐಫೋನ್ 12 ಸರಣಿ ಫೋನ್‌ಗಳನ್ನು ನಿಗದಿಯ ಸಮಯಕ್ಕಿಂತ ತಡವಾಗಿ ಲಾಂಚ್ ಮಾಡಿತ್ತು. ಅಂತೆಯೇ ಈಗ ಆಪಲ್‌ನ ಮುಂಬರುವ ಐಫೋನ್ 15 ಸರಣಿಯ ಡಿವೈಸ್‌ಗಳು ಸಹ ಜನರಿಗೆ ತಲುಪುವುದು ವಿಳಂಬ ಆಗಲಿದೆ. ಆದರೆ, ಈ ಬಾರಿಯ ಕಾರಣ ಕೊರೊನಾ ಅಲ್ಲ ಬದಲಾಗಿ ಬೇರೆ ವಿಷಯ.

ಬ್ಯಾಂಕ್ ಆಫ್ ಅಮೇರಿಕಾ (BoA) ವಿಶ್ಲೇಷಕರ ಪ್ರಕಾರ, ಐಫೋನ್ 15 ಸರಣಿಯು ಸೆಪ್ಟೆಂಬರ್‌ ಬದಲಾಗಿ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿರಬಹುದು ಎಂದು ಹೇಳುತ್ತಿದ್ದಾರೆ. ಇದರೊಂದಿಗೆ ಐಫೋನ್ 15 ಬಿಡುಗಡೆಯ ವಿಳಂಬವು ಆಪಲ್‌ನ ಸೆಪ್ಟೆಂಬರ್ ತ್ರೈಮಾಸಿಕದ ಮೇಲೆ ಪರಿಣಾಮ ಬೀರುತ್ತದೆ ಎಂದೂ ಸಹ ಹೇಳಿದ್ದಾರೆ. ಇದರಿಂದಾಗಿ ಆಪಲ್‌ ನಿರ್ಧಾರ ಏನು ಎಂಬುದನ್ನು ಕಾದು ನೋಡಬಬೇಕು.

ಮತ್ತೊಂದು ವರದಿ ಪ್ರಕಾರ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಡಿಸ್‌ಪ್ಲೇ ಉತ್ಪಾದನಾ ಸಮಸ್ಯೆಗಳಿಂದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಆಗುವುದಿಲ್ಲ ಎನ್ನಲಾಗಿದೆ. ಇದನ್ನು ಗಮನಿಸಿದರೆ, ಐಫೋನ್ 15 ಬಿಡುಗಡೆಯು ಕೆಲವು ವಾರಗಳವರೆಗೆ ವಿಳಂಬವಾಗಬಹುದು ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಈ ಮುಂದಿನ ಪೀಳಿಗೆಯ ಐಫೋನ್‌ಗಳ ಬಿಡುಗಡೆಯನ್ನು ಡಿಸೆಂಬರ್ ತ್ರೈಮಾಸಿಕಕ್ಕೆ ತಳ್ಳಬಹುದು ಎಂದೂ ಸಹ ಅಂದಾಜಿಸಲಾಗಿದೆ.

ಆಪಲ್‌ನ ಡಿಸ್‌ಪ್ಲೇ ಪೂರೈಕೆದಾರರು ಬೆಜೆಲ್‌ಗಳ ಅಗಲವನ್ನು ಕಡಿಮೆ ಮಾಡಲು ಪ್ರೊ ಮಾದರಿಗಳಿಗೆ ಹೊಸ ಉತ್ಪಾದನಾ ಪ್ರಕ್ರಿಯೆಯನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಐಫೋನ್ 15 ಪ್ರೊ ಮಾದರಿಗಳು ಸ್ವಲ್ಪ ದೊಡ್ಡ ಡಿಸ್‌ಪ್ಲೇ ಗಾತ್ರವನ್ನು ಪಡೆಯಲಿವೆ. ಇಷ್ಟು ಮಾತ್ರವಲ್ಲದೆ ಲೋಹದ ಶೆಲ್‌ನೊಂದಿಗೆ ಫ್ಯೂಷನ್ ಪ್ರಕ್ರಿಯೆಯಲ್ಲಿ ಡಿಸ್‌ಪ್ಲೇಗಳು ವಿಶ್ವಾಸಾರ್ಹತೆಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ಕಾರಣ ಎಲ್‌ಜಿ ಡಿಸ್‌ಪ್ಲೇ ಉತ್ಪಾದನಾ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದಾಗಿ ಐಫೋನ್‌ 15 ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.

ಇಷ್ಟಾಗಿಯೂ ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆಯಿಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ. ಉತ್ಪಾದನಾ ಸಮಸ್ಯೆಗಳಿಂದಾಗಿ, ಬಿಡುಗಡೆಯ ಸಮಯದಲ್ಲಿ ಕಡಿಮೆ ಘಟಕಗಳು ಲಭ್ಯವಿರಬಹುದು. ಎರಡು ಮಾದರಿಗಳಲ್ಲಿ ಐಫೋನ್‌ 15 ಪ್ರೊ ಮ್ಯಾಕ್ಸ್‌ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಲಾಂಚ್‌ ಕಾರ್ಯಕ್ರಮದ ನಂತರ ಕೊರತೆಗೆ ಕಾರಣವಾಗಬಹುದಷ್ಟೇ ಎಂದು ತಿಳಿಸಲಾಗಿದೆ.

ಆಪಲ್‌ ಪ್ರಿಯರಿಗೆ ಶಾಕ್, ಐಫೋನ್ 15 ಬಿಡುಗಡೆ ವಿಳಂಬ?...ಕಾರಣ ಇದಾಗಿರಬಹುದಾ?

ಇನ್ನು ಐಫೋನ್ 15 ಸರಣಿಯ ಎಲ್ಲಾ ಫೋನ್‌ಗಳು ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಅನ್ನು ಹೊಂದುವ ನಿರೀಕ್ಷೆಯಿದೆ. ಅಂದರೆ ಪಂಚ್-ಹೋಲ್ ನಾಚ್ ವಿನ್ಯಾಸ. ಸ್ಟ್ಯಾಂಡರ್ಡ್ ಮಾದರಿಯು A16 SoC ಅನ್ನು ಹೊಂದಿರಲಿದ್ದು, ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಇತ್ತೀಚಿನ ಬಯೋನಿಕ್ A17 ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ .ಇದರೊಂದಿಗೆ ಬ್ಯಾಟರಿ ವಿಚಾರದಲ್ಲೂ ಗಮನಾರ್ಹ ಹೆಚ್ಚಳ ನಿರೀಕ್ಷಿಸಲಾಗಿದೆ.

Best Mobiles in India

English summary
According to a recent report, the launch of the iPhone 15 series is said to be delayed. What is especially exciting is that despite the delay, it is known that it will be launched within this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+