Home
ಸುದ್ದಿಜಾಲ

iPhone: ಹೊಸ ಐಫೋನ್‌ 15 ಗೆ ಬರೋಬ್ಬರಿ 8,000 ಡಿಸ್ಕೌಂಟ್‌: ಅಫರ್ ಮಿಸ್‌ ಮಾಡ್ಕೋಬೇಡಿ

ಬಹಳಷ್ಟು ಜನರಿಗೆ ಐಫೋನ್‌ಗಳನ್ನು (iPhone) ಖರೀದಿ ಮಾಡುವುದೇ ಒಂದು ಸಂತಸದ ವಿಚಾರ. ಈ ನಡುವೆ ಈ ಫೋನ್‌ಗಳು ಆಫರ್ ಬೆಲೆಗೆ ಲಭ್ಯವಾಗುತ್ತವೆ ಎಂದರೆ ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರಂತೆ ಈಗ ಹೊಸ ಐಫೋನ್‌ 15 (iPhone 15) ಖರೀದಿಯಲ್ಲಿ 8,000 ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ.

ಹೌದು, ಐಫೋನ್‌ 15 ಸರಣಿ ಫೋನ್‌ಗಳು ಇದೀಗ ಭಾರೀ ಜನಪ್ರಿಯತೆ ಪಡೆದಿದ್ದು, ಸಾಕಷ್ಟು ಗ್ರಾಹಕರು ಇವುಗಳನ್ನು ಖರೀದಿ ಮಾಡಿದ್ದರೆ ಇನ್ನೂ ಹಲವಾರು ಗ್ರಾಹಕರು ಇದನ್ನು ಖರೀದಿ ಮಾಡಲು ಯೋಜಿಸುತ್ತಿದ್ದಾರೆ. ಆದರೆ ಈ ಸಮಯ ಈ ಫೋನ್ ಖರೀದಿಗೆ ಸೂಕ್ತ ಎನ್ನಬಹುದು. ಯಾಕೆಂದರೆ ವಿಶೇಷ ಕೊಡುಗೆ ಮೂಲಕ 8,000 ರೂ.ಗಳನ್ನು ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಆಫರ್ ಎಲ್ಲಿ ಲಭ್ಯ?, ಯಾವ ವೇರಿಯಂಟ್‌ಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೊಸ ಐಫೋನ್‌ 15 ಗೆ ಬರೋಬ್ಬರಿ 8,000 ಡಿಸ್ಕೌಂಟ್‌: ಅಫರ್ ಮಿಸ್‌ ಮಾಡ್ಕೋಬೇಡಿ

ಐಫೋನ್‌ 15ಗೆ ಆಫರ್: ಐಫೋನ್ 15 ಗೆ ಈಗ ಮತ್ತೆ ದೊಡ್ಡ ರಿಯಾಯಿತಿ ನೀಡಲಾಗಿದೆ. ಈ ವಿಷಯ ಕೇಳಿ ನಿಮಗೆ ಆಶ್ಚರ್ಯವಾಗಿರಬಹುದು. ಏಕೆಂದರೆ ಆಪಲ್ ಕೆಲವು ತಿಂಗಳ ಹಿಂದೆಯಷ್ಟೇ ಲಾಂಚ್‌ ಮಾಡಿರುವ ಫೋನ್‌ಗೆ ಈಗಾಗಲೇ ಆಫರ್ ನೀಡಲು ಹೇಗೆ ಸಾಧ್ಯ ಎಂದು. ಆದರೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಗಾಗ್ಗೆ ಇಂತಹ ಆಫರ್‌ಗಳನ್ನು ನೀಡುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಅಮೆಜಾನ್‌ ಈ ಫೋನ್‌ಗೆ ಆಫರ್ ನೀಡಿತ್ತು. ಆದರೆ ಈಗ ಕ್ರೋಮಾ (Croma) ಐಫೋನ್ 15 ಗೆ ವಿಶೇಷ ಕೊಡುಗೆ ಘೋಷಣೆ ಮಾಡಿದೆ.

ಅಂದರೆ ಕ್ರೋಮಾದಲ್ಲಿ ಈ ಫೋನ್‌ ಖರೀದಿ ಮಾಡಿದ್ರೆ 8,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಬ್ಯಾಂಕ್ ಕಾರ್ಡ್ ಕೊಡುಗೆ ಮತ್ತು ಫ್ಲಾಟ್ ರಿಯಾಯಿತಿ ಕೊಡುಗೆಯನ್ನು ಒಳಗೊಂಡಿದೆ. ಈ ವಿಶೇಷ ಆಫರ್ ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಹಾಗಿದ್ರೆ, ಬನ್ನಿ ಈ ವಿಶೇಷ ಕೊಡುಗೆಯನ್ನು ಪಡೆಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಹೊಸ ಐಫೋನ್‌ 15 ಗೆ ಬರೋಬ್ಬರಿ 8,000 ಡಿಸ್ಕೌಂಟ್‌: ಅಫರ್ ಮಿಸ್‌ ಮಾಡ್ಕೋಬೇಡಿ

ಐಫೋನ್ 15 ಸ್ಮಾರ್ಟ್‌ಫೋನ್‌ ಕ್ರೋಮಾದಲ್ಲಿ 79,900 ರೂಗಳ ಆರಂಭಿಕ ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಇದು ಈ ಐಫೋನ್‌ನ ಮೂಲ ಬೆಲೆಯಾಗಿದೆ. ಆದರೆ, ನೀವು ಐಫೋನ್‌ 15 ರ ಪಾವತಿ ಪೇಜ್‌ಗೆ ಹೋದಾಗ ಬೆಲೆ 76,900 ರೂ.ಗೆ ಕಡಿಮೆಯಾಗುತ್ತದೆ ಅಂದರೆ ಫ್ಲಾಟ್ ಡಿಸ್ಕೌಂಟ್ 3,000 ರೂ.ಗಳು ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 5,000 ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇದರಿಂದ ನೀವು ಈ ಫೋನ್‌ ಅನ್ನು 71,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಸುಮಾರು 72,000 ರೂಪಾಯಿಗಳನ್ನು ಖರ್ಚು ಮಾಡಲು ನೀವು ಶಕ್ತರಾಗಿದ್ದರೆ ಈ ಫೋನ್‌ ಅನ್ನು ಈಗ ಇದೀಗ ಖರೀದಿ ಮಾಡಬಹುದಾಗಿದೆ. ಈ ವಿಶೇಷ ಫೋನ್ ಹೊಸ 48 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಇದು 4K ಸಿನಿಮಾಟಿಕ್ ಮೋಡ್ ಬೆಂಬಲಿಸಲಿದೆ. ಇದರೊಂದಿಗೆ ವೇಗವಾದ ಚಿಪ್‌ಸೆಟ್, ಹೊಸ ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸ ಮತ್ತು ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ವಿಶೇಷ ಎನಿಸಿದೆ.

ಹೊಸ ಐಫೋನ್‌ 15 ಗೆ ಬರೋಬ್ಬರಿ 8,000 ಡಿಸ್ಕೌಂಟ್‌: ಅಫರ್ ಮಿಸ್‌ ಮಾಡ್ಕೋಬೇಡಿ

ಯುಎಸ್‌ಬಿ-ಸಿ ಪೋರ್ಟ್ ಹೊಂದಿರುವ ಪ್ರಯೋಜನವೆಂದರೆ ನೀವು ಪ್ರತ್ಯೇಕ ಚಾರ್ಜಿಂಗ್ ಕೇಬಲ್ ಮತ್ತು ಐಫೋನ್ 15 ಗಾಗಿ ಅಡಾಪ್ಟರ್ ಅನ್ನು ಒಯ್ಯಬೇಕಾಗಿಲ್ಲ. ನಿಮ್ಮ ಮನೆಯಲ್ಲಿ ಇತರೆ ಡಿವೈಸ್‌ಗಳಿಗೆ ಬಳಕೆ ಮಾಡುವ ಯಾವುದೇ ಟೈಪ್-ಸಿ ಚಾರ್ಜರ್ ಅನ್ನು ಇದಕ್ಕೆ ಬಳಕೆ ಮಾಡಬಹುದು. ಇದು ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಉದ್ದೇಶದಿಂದ ತೆಗೆದುಕೊಂಡ ನಿರ್ಧಾರದಿಂದ ಬಂದ ಆಯ್ಕೆಯಾಗಿದೆ.

ಈ ಫೋನ್‌ಗಳು ಹಿಂದಿನ ಮಾದರಿಗಳಿಗಿಂತ ಸ್ವಲ್ಪ ಪ್ರಕಾಶಮಾನವಾದ ಡಿಸ್‌ಪ್ಲೇ ಆಯ್ಕೆಯನ್ನು ಪಡೆದುಕೊಂಡಿವೆ. ಹಾಗೆಯೇ ಇದು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದ್ದು, IP68 ರೇಟಿಂಗ್ ಆಯ್ಕೆ ಸಹ ಪಡೆದಿದೆ. ಇದರಿಂದ ನೀರಿಗೆ ಬಿದ್ದರೂ ಅಥವಾ ಮಳೆಯಲ್ಲಿ ನೆನೆದರೂ ಸಹ ಯಾವುದೇ ಸಮಸ್ಯೆ ಆಗುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇದರ ಕಾರ್ಯಕ್ಷಮತೆಗೆ ಸರಿಸಾಟಿಯೇ ಇಲ್ಲ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಫೋನ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
iPhone 15 phone is now very popular and many customers are buying it. Meanwhile, this phone has been given a discount of Rs 8000 on Chroma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+