iPhone: ಲಾಂಚ್ ಆಗಿ ಮೂರು ತಿಂಗಳಷ್ಟೇ.. ಈಗಾಗಲೇ ಐಫೋನ್ 15 ಗೆ ಇಷ್ಟೊಂದು ರಿಯಾಯಿತಿಯೇ? ಎಲ್ಲಿ ಈ ಆಫರ್?
ನೀವೇನಾದರೂ ಹೊಸ ಐಫೋನ್ 15 (iPhone 15) ಖರೀದಿ ಮಾಡಲು ಇಚ್ಚಿಸಿದ್ರೆ ಈ ವೇಳೆ ಹಿಂದೇಟು ಹಾಕಬೇಡಿ. ಯಾಕೆಂದರೆ ಸಾಮಾನ್ಯವಾಗಿ ಐಫೋನ್‌ಗಳ ವಿಚಾರದಲ್ಲಿ ಹೊಸ ಸರಣಿ ಫೋನ್‌ಗಳನ್ನು ಅನಾವರಣ ಮಾಡಿದ ನಂತರ ಹಿಂದಿನ ಸರಣಿಯ ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ. ಆದರೆ, ಯಾವುದೇ ಹೊಸ ಸರಣಿ ಫೋನ್‌ಗಳು ಲಾಂಚ್ ಆಗದೇ ಇದ್ದರೂ ಐಫೋನ್ 15 ನಲ್ಲಿ ಆಫರ್ ಪಡೆಯಬಹುದಾಗಿದೆ.
ಹೌದು, ಈ ವಿಷಯ ಕೇಳಿ ನಿಮಗೆ ಶಾಕ್ ಆಗಿರಬಹುದು. ಅದೇಗೆ ಸಾಧ್ಯ ಎಂದು ಆದರೆ ಇದನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಸಾಧ್ಯವಾಗಿಸಿದೆ. ಅಂದರೆ ಈ ಫೋನ್ ಬೆಲೆಯನ್ನು ಆಪಲ್ ಅಧಿಕೃತವಾಗಿ ಇಳಿಕೆ ಮಾಡಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಇದರೊಂದಿಗೆ ವಿನಿಮಯ ಆಫರ್ ಇದ್ದು, ನಿಮ್ಮ ಹಳೆಯ ಐಫೋನ್ ಸುಸ್ಥಿತಿಯಲ್ಲಿ ಇದ್ದರೆ ಇನ್ನೂ ಕಡಿಮೆ ಬೆಲೆಗೆ ಈ ಹೊಸ ಐಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ವೇರಿಯಂಟ್‌ಗೆ ಎಷ್ಟು ಆಫರ್ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 15 ಗೆ ಆಫರ್:
ಮೂರು ತಿಂಗಳ ಹಿಂದೆ ಲಾಂಚ್ ಮಾಡಲಾದ ಐಫೋನ್ 15 ಗೆ ಇದೀಗ ಪ್ರಮುಖ ಇ ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) 6% ರಿಯಾಯಿತಿ ನೀಡುತ್ತಿದೆ. ಅಮೆಜಾನ್ ಅಧಿಕೃತವಾಗಿ ಈ ಆಫರ್ ಘೋಷಣೆ ಮಾಡಿದ್ದು, 128GB ಸ್ಟೋರೇಜ್ ಹೊಂದಿರುವ ಐಫೋನ್ 15 ಮಾದರಿ 79,900 ರೂ.ಗಳ ಬೆಲೆ ಹೊಂದಿದ್ದು, ನೀವೀಗ ಇದನ್ನು 74,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಇದರೊಂದಿಗೆ ಇತರೆ ವೇರಿಯಂಟ್ ಫೋನ್‌ಗಳಿಗೂ ಸಹ 6% ರಿಯಾಯಿತಿ ನೀಡಲಾಗುತ್ತಿದೆ. ಅದರಂತೆ 256GB ಸ್ಟೋರೇಜ್ ಹೊಂದಿರುವ ಐಫೋನ್ 15 ವೇರಿಯಂಟ್ 89,900 ರೂ.ಗಳ ಬೆಲೆ ಹೊಂದಿದ್ದು, ನೀವೀಗ ಇದನ್ನು 84,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಐಫೋನ್ 15 ನ 512GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್ 1,09,900 ರೂ.ಗಳ ಬೆಲೆ ಹೊಂದಿದ್ದು, ನೀವೀಗ ಇದನ್ನು 1,07,900 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇದಿಷ್ಟೇ ಅಲ್ಲದೆ ನೀವು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 3,745ರೂ.ಗಳ ಹೆಚ್ಚುವರಿ ರಿಯಾಯಿತಿ ಕೊಡುಗೆಯನ್ನು ಸಹ ಪಡೆಯಬಹುದಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ನೀವು ಮೊಬೈಲ್‌ನಲ್ಲಿ ಅಮೆಜಾನ್ ಓಪನ್ ಮಾಡಿದರೆ ಮಾತ್ರ ಈ ಆಫರ್ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಈ ಐಫೋನ್ ಅನ್ನು 71,155 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಕಾರ್ಡ್ ನಿಮ್ಮಲ್ಲಿ ಇಲ್ಲ ಎಂದರೆ ಚಿಂತೆ ಬೇಡ ಅಮೆಜಾನ್ ಪೇ ಆಪ್ ಬಳಕೆ ಮಾಡಿಕೊಂಡು ಮನವಿ ಸಲ್ಲಿಸಿದ್ರೆ ಸಾಕು. ಈ ಮೂಲಕ ಮುಂದಿನ ದಿನಗಳಲ್ಲಾದರೂ ವಿಶೇಷ ರಿಯಾಯಿತಿ ಪಡೆಯಲು ಇದನ್ನು ಬಳಕೆ ಮಾಡಬಹುದಾಗಿದೆ.

ಈ ಫೋನ್‌ನಲ್ಲಿ ವಿಶೇಷತೆ ಏನಿದೆ?
ಐಫೋನ್ 14 ಅಥವಾ ಐಫೋನ್ 13 ಗೆ ಹೋಲಿಸಿದರೆ ಐಫೋನ್ 15 ಹೆಚ್ಚು ಉತ್ತಮವಾದ ಕ್ಯಾಮೆರಾ ಸೌಲಭ್ಯ ಪಡೆದಿದೆ. ಇದರೊಂದಿಗೆ ಈ ಫೋನ್‌ನ ಡಿಸ್‌ಪ್ಲೇ ಸಹ ಆಕರ್ಷಕವಾಗಿದೆ. ಪರಿಣಾಮ ಯಾವುದೇ ಕಂಟೆಂಟ್ ಸಹ ಉತ್ತಮವಾಗಿ ಕಾಣಿಸಿಕೊಳ್ಳಲಿದೆ. ಇದರೊಂದಿಗೆ ಐಫೋನ್ 14 ಪ್ರೊ ನಲ್ಲಿ ಕಂಡುಬಂದ ವಿಶೇಷ ಶೈಲಿಯನ್ನು ಈ ಫೋನ್‌ನಲ್ಲಿ ಕಾಣಬಹುದು.
ಐಫೋನ್ 14 ಗೆ ಹೋಲಿಸಿದರೆ ಹೊಸ ಐಫೋನ್ ಹೆಚ್ಚು ಶಕ್ತಿಯುತ ಪ್ರೊಸೆಸರ್ ಅನ್ನು ಪಡೆದುಕೊಂಡಿದೆ. ಈ ಮೂಲಕ ಸುಗಮ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು. ಜೊತೆಗೆ 20W ನ ಚಾರ್ಜಿಂಗ್ ಬೆಂಬಲವಿದ್ದು, ಉತ್ತಮ ಬ್ಯಾಕಪ್ ಪಡೆಯಬಹುದಾಗಿದೆ. ಅದಾಗ್ಯೂ ಆಪಲ್ ಬ್ಯಾಟರಿ ವಿಚಾರದಲ್ಲಿ ಮಾತ್ರ ಆಂಡ್ರಾಯ್ಡ್ ಫೋನ್‌ಗಳಿಗಿಂತಲೂ ಕಡಿಮೆ ಸಾಮರ್ಥ್ಯ ಹೊಂದಿರುವುದು ಸತ್ಯ. ಪರಿಣಾಮ ಉತ್ತಮ ಬ್ಯಾಟರಿ ಸಾಮರ್ಥ್ಯ ಹಾಗೂ ವೇಗದ ಚಾರ್ಜಿಂಗ್ ಆಯ್ಕೆ ನೀಡುವ ವರೆಗೆ ಆಪಲ್ ಪ್ರೇಮಿಗಳು ಸಹಿಸಿಕೊಳ್ಳಲೇಬೇಕಿದೆ.


Click it and Unblock the Notifications








