ಐಫೋನ್ 15 ಮತ್ತು ಐಫೋನ್ 15 ಪ್ಲಸ್: ಭಿನ್ನತೆ ಏನು?..ಯಾವುದು ಬೆಸ್ಟ್?
ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಐಫೋನ್ 15 ಸರಣಿಯನ್ನು ಇಂದು (ಸೆ. 12 ರಂದು) ಟೆಕ್ ದಿಗ್ಗಜ ಆಪಲ್ ಸಂಸ್ಥೆಯು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಸಂಸ್ಥೆಯು 'ವಂಡರ್‌ಲಸ್ಟ್' (Wonderlust) ಹೆಸರಿನ ಕಾರ್ಯಕ್ರಮದ ಮೂಲಕ ತನ್ನ ಐಫೋನ್ 15 ಫೋನ್‌ಗಳ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಹೌದು, ಆಪಲ್ ಸಂಸ್ಥೆಯು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಪ್ರಧಾನ ಕಛೇರಿಯಿಂದ ಆಯೋಜಿಸಿದ್ದ 'ವಂಡರ್‌ಲಸ್ಟ್' ಕಾರ್ಯಕ್ರಮದಲ್ಲಿ ಐಫೋನ್ 15 ಸರಣಿಯನ್ನು ಲಾಂಚ್ ಮಾಡಿದೆ. ಈ ನೂತನ ಸರಣಿಯು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.

ಈ ನೂತನ ಐಫೋನ್ 15 ಸರಣಿಯಲ್ಲಿ ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಆರಂಭಿಕ ಮಾಡೆಲ್‌ಗಳಾಗಿದ್ದು, ಬಹುತೇಕ ಸಾಮ್ಯತೆ ಪಡೆದಿವೆ. ಅದಾಗ್ಯೂ, ಕೆಲವು ಭಿನ್ನತೆಗಳನ್ನು ಕಾಣಬಹುದಾಗಿದೆ. ಈ ಎರಡು ಐಫೋನ್‌ಗಳ ನಡುವೆ ಏನಿದೆ ವ್ಯತ್ಯಾಸ ? ಬೆಲೆ ಎಷ್ಟು? ಖರೀದಿಗೆ ಯಾವುದು ಬೆಸ್ಟ್ ? ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಐಫೋನ್ 15 v/s ಐಫೋನ್ 15 ಪ್ಲಸ್ : ಡಿಸ್‌ಪ್ಲೇ
ಐಫೋನ್ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, 1600 nits ಬ್ರೈಟ್ನಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗೆಯೇ ಇದು ಮಾತ್ರೆ ಮಾದರಿಯ (ಪಿಲ್ ಶೇಪ್ ಮಾದರಿ) ಪಂಚ್ ಹೋಲ್ ರಚನೆ ಹೊಂದಿದೆ. ಅದೇ ರೀತಿ ಐಫೋನ್ 15 ಪ್ಲಸ್ 6.7 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಕೂಡಾ ಪಿಲ್ ಶೇಪ್ ಮಾದರಿಯ ಪಂಚ್ ಹೋಲ್ ರಚನೆ ಒಳಗೊಂಡಿದೆ. ಡಾಲ್ಬಿ ವಿಷನ್ ಸಪೋರ್ಟ್ ಸಹ ಇದೆ.
ಐಫೋನ್ 15 v/s ಐಫೋನ್ 15 ಪ್ಲಸ್ : ಪ್ರೊಸೆಸರ್
ಐಫೋನ್ 15 ಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್ ios 16 ಓಎಸ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128GB, 256GB, 512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅದೇ ರೀತಿ ಐಫೋನ್ 15 ಪ್ಲಸ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.
ಐಫೋನ್ 15 v/s ಐಫೋನ್ 15 ಪ್ಲಸ್ : ಕ್ಯಾಮೆರಾ
ಐಫೋನ್ 15 ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಅನ್ನು ಹೊಂದಿದ್ದು, 12 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಅದೇ ರೀತಿ ಐಫೋನ್ 15 ಪ್ಲಸ್ ಫೋನಿನ ಮುಖ್ಯ ಕ್ಯಾಮೆರಾವು ಕೂಡಾ 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಪೋರ್ಟ್ರೇಟ್ ಫೋಟೋಗಳಿಗೆ ಹೊಸ ಲುಕ್ ನೀಡಿರುವ ಜೊತೆಗೆ ಇನ್ನು ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ತಂತ್ರಜ್ಞಾನ ಪಡೆದಿವೆ.
ಐಫೋನ್ 15 v/s ಐಫೋನ್ 15 ಪ್ಲಸ್ : ಬ್ಯಾಟರಿ
ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಮಾಡೆಲ್‌ಗಳು ತನ್ನ ಈ ಹಿಂದಿನ ಸರಣಿಗಿಂತ ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಐಫೋನ್ ಪ್ರಿಯರ ಗಮನ ಸೆಳೆದಿದೆ. ಜೊತೆಗೆ ಎರಡು ಐಫೋನ್‌ಗಳು 5G ಸಪೋರ್ಟ್ ಪಡೆದಿವೆ. ಅಲ್ಲದೇ ಹೊಸ ವಾಯರ್‌ಲೆಸ್ ಕನೆಕ್ಟಿವಿಟಿ ಸೌಲಭ್ಯ ಸಹ ಒಳಗೊಂಡಿರುವುದು ಪ್ಲಸ್ ಪಾಯಿಂಟ್. ಇದರೊಂದಿಗೆ ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಹಾಗೂ ಡೈನಾಮಿಕ್ ಐಲ್ಯಾಂಡ್ ಆಯ್ಕೆಗಳನ್ನು ಪಡೆದಿವೆ.
ಐಫೋನ್ 15 v/s ಐಫೋನ್ 15 ಪ್ಲಸ್ : ಬೆಲೆ ಎಷ್ಟು
ಆಪಲ್ ಐಫೋನ್ 15 ಆರಂಭಿಕ ವೇರಿಯಂಟ್ ಬೆಲೆಯು $799 (ಭಾರತದಲ್ಲಿ ಅಂದಾಜು 66,199ರೂ. ಎನ್ನಲಾಗಿದೆ) ಆಗಿದೆ. ಅದೇ ರೀತಿ ಐಫೋನ್ 15 ಪ್ಲಸ್ ಆರಂಭಿಕ ವೇರಿಯಂಟ್ ಬೆಲೆಯು $899 (ಭಾರತದಲ್ಲಿ ಅಂದಾಜು 74,499ರೂ. ಎನ್ನಲಾಗಿದೆ.) ಪ್ರೈಸ್‌ಟ್ಯಾಗ್ ಪಡೆದಿದೆ. ಇದು ಈ ಐಫೋನ್‌ಗಳು ಐದು ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಐಫೋನ್ 15 v/s ಐಫೋನ್ 15 ಪ್ಲಸ್ : ಯಾವುದು ಬೆಸ್ಟ್
ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಈ ಎರಡು ನೂತನ ಐಫೋನ್‌ಗಳು ಬಹುತೇಕ ಒಂದೇ ರೀತಿಯ ಫೀಚರ್ಸ್‌ಗಳ ಆಯ್ಕೆ ಪಡೆದಿವೆ. ಅದಾಗ್ಯೂ, ಐಫೋನ್ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಕಂಪ್ಯಾಕ್ಟ್ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಐಫೋನ್ 15 ಪ್ಲಸ್ 6.7 ಇಂಚಿನ ಡಿಸ್‌ಪ್ಲೇ ಪಡೆದಿದೆ. ಇದರ ಜೊತೆಗೆ ಬೆಲೆಯಿಂದಲೂ ಭಿನ್ನತೆ ಕಾಣಬಹುದಾಗಿದೆ.


Click it and Unblock the Notifications








