iPhone 16 ಮತ್ತು iPhone 16 Plus ಲಾಂಚ್; ಫೀಚರ್ಸ್ ನೋಡಿ ಗ್ರಾಹಕರು ಫಿದಾ!
ಟೆಕ್ ದೈತ್ಯ ಆಪಲ್ (Apple) ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 16 ಸರಣಿಯನ್ನು ಇಂದು (ಸೆಪ್ಟೆಂಬರ್ 9 ರಂದು) ಅಧಿಕೃತವಾಗಿ ಬಿಡುಗಡೆ ಮಾಡಿದೆ. 'ಗ್ಲೋಟೈಮ್' (glowtime) ಹೆಸರಿನ ಈ ಲಾಂಚ್ ಕಾರ್ಯಕ್ರಮದ ಮೂಲಕ ಐಫೋನ್ 16 ಫೋನ್‌ಗಳ ಸರಣಿಯನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಫೋನ್ ಸರಣಿಯ ಜೊತೆಗೆ ಆಪಲ್ ಸಂಸ್ಥೆಯು ಆಪಲ್ ವಾಚ್ ಸೀರಿಸ್ 10 (Watch Series 10) ಹಾಗೂ ಏರ್‌ಪಾಡ್ಸ್ 4 ಅನ್ನು ಸಹ ಬಿಡುಗಡೆ ಮಾಡಿದೆ.
ಹೌದು, ಟೆಕ್ ದೈತ್ಯ ಆಪಲ್ ಸಂಸ್ಥೆಯು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಪ್ರಧಾನ ಕಛೇರಿಯಿಂದ ಆಯೋಜಿಸಿದ್ದ 'ಗ್ಲೋಟೈಮ್' (glowtime) ಕಾರ್ಯಕ್ರಮದಲ್ಲಿ ಐಫೋನ್ 16 ಸರಣಿ (iPhone 16 Series) ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಈ ಸರಣಿಯ ಆರಂಭಿಕ ಮಾಡೆಲ್‌ಗಳಾಗಿ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಮಾಡೆಲ್‌ಗಳನ್ನು ಘೋಷಣೆ ಮಾಡಿದೆ. ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 16 ಫೀಚರ್ಸ್ ಹೀಗಿವೆ
ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಅದೇ ರೀತಿ ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಅಂದಹಾಗೆ ಆಪಲ್ ಐಫೋನ್ 16 ಮೊಬೈಲ್‌ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಆಪಲ್ ತನ್ನ ದೇಹವು ಇತರ ಯಾವುದೇ ಗ್ಲಾಸ್-ಬ್ಯಾಕ್ ಫೋನ್‌ಗಿಂತ 2x ಹೆಚ್ಚು ಬಾಳಿಕೆ ಬರುವಂತಹದ್ದಾಗಿದೆ ಸಂಸ್ಥೆಯು ಎಂದು ಹೇಳಿಕೊಂಡಿದೆ.
ಐಫೋನ್ 16 ಮೊಬೈಲ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಈ ಚಿಪ್ ಎರಡು ಪಟ್ಟು ವೇಗದ ನ್ಯೂರಲ್ ಎಂಜಿನ್ ಮತ್ತು 17 ಪ್ರತಿಶತ ಹೆಚ್ಚು ಬ್ಯಾಂಡ್‌ವಿಡ್ತ್‌ನೊಂದಿಗೆ ನವೀಕರಿಸಿದ ಮೆಮೊರಿ ಉಪವ್ಯವಸ್ಥೆಯನ್ನು ಪಡೆದಿದೆ. ಅಲ್ಲದೇ ಇದು ಇದು ಐಫೋನ್ 15 ನಲ್ಲಿನ CPU ಗಿಂತ 30 ಪ್ರತಿಶತದಷ್ಟು ವೇಗ ಪಡೆದಿರುತ್ತದೆ.
ಐಫೋನ್ 16 ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಸಹ ಪಡೆದಿದೆ. ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಹೊಸ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹಿಂದಿನ ಮಾದರಿಗಳಿಗಿಂತ 2.6 ಪಟ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ ಅಲ್ಲದೇ ಮ್ಯಾಕ್ರೋ ಫೋಟೋಗ್ರಫಿಯನ್ನು ಸಪೋರ್ಟ್ ಮಾಡುತ್ತದೆ.
ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಮೊಬೈಲ್ ತನ್ನ ಈ ಹಿಂದಿನ ಸರಣಿಗಿಂತ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದು ಐಫೋನ್ ಪ್ರಿಯರ ಗಮನ ಸೆಳೆದಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆಯನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ ಹಾಗೆಯೇ ವಾಯರ್‌ಲೆಸ್ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ಇದರ ಜೊತೆಗೆ ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಇದೆ.

ಬೆಲೆ ಮಾಹಿತಿ ಇಲ್ಲಿದೆ
ನೂತನ ಐಫೋನ್ 16 ಮೊಬೈಲ್ ಆರಂಭಿಕ 128 GB ವೇರಿಯಂಟ್ ಬೆಲೆಯು $799 (ಭಾರತದಲ್ಲಿ ಭಾರತದಲ್ಲಿ ಆರಂಭಿಕ ಬೆಲೆ 79,900 ರೂ) ಎಂದು ಅಂದಾಜಿಸಲಾಗಿದೆ. ಹಾಗೆಯೇ ಐಫೋನ್ 16 ಪ್ಲಸ್ ಮೊಬೈಲ್‌ನ ಆರಂಭಿಕ ವೇರಿಯಂಟ್ 128GB ವೇರಿಯಂಟ್ ಬೆಲೆಯು $899 ಆಗಿದೆ.


Click it and Unblock the Notifications








