iPhone 16 ಮತ್ತು iPhone 16 Pro: ಪ್ರಿ-ಆರ್ಡರ್, ಸೇಲ್ ಯಾವಾಗ, ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಆಪಲ್ (Apple) ಸಂಸ್ಥೆಯು ಐಫೋನ್ 16 (iPhone 16) ಸರಣಿಯು ಬಿಡುಗಡೆ ಆಗಿದ್ದು, ಟೆಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಸರಣಿಯು ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಈಗಾಗಲೇ ಐಫೋನ್ ಪ್ರಿಯರನ್ನು ತಮ್ಮತ್ತ ಸೆಳೆದಿವೆ. ಇನ್ನು ಸದ್ಯದಲ್ಲೇ iPhone 16 ಸರಣಿ ಮೊಬೈಲ್‌ಗಳು ಭಾರತದಲ್ಲಿ ಖರೀದಿಗೆ ಲಭ್ಯ ಆಗಲಿವೆ.
ಹೌದು, ಆಪಲ್ ಸಂಸ್ಥೆಯ ಐಫೋನ್ 16 ಸರಣಿ ಫೋನ್‌ಗಳು ಆಕರ್ಷಕ ಹಾಗೂ ಅಪ್‌ಡೇಟ್ ಫೀಚರ್ಸ್ ಮೂಲಕ ಮಾರುಕಟ್ಟೆಗೆ ಪ್ರವೇಶ ಮಾಡಿವೆ. ಈ ಸರಣಿಯ ಪೈಕಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲ್‌ಗಳ ಪ್ರಿ-ಆರ್ಡರ್ ದಿನಾಂಕ ಒಂದೇ ಆಗಿದೆ. ಹಾಗಾದರೇ ಐಫೋನ್ 16 ಸರಣಿಯ ಸೇಲ್ ದಿನಾಂಕ, ಭಾರತದಲ್ಲಿ ಬೆಲೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಪ್ರಿ-ಆರ್ಡರ್ ಮಾಹಿತಿ
ಮಾರುಕಟ್ಟೆಗೆ ಅದ್ಧೂರಿಯಾಗಿಯೇ ಲಾಂಚ್ ಆಗಿರುವ ಐಫೋನ್ 16 ಸರಣಿಯ ಮೊಬೈಲ್‌ಗಳು ಟ್ರೆಂಡ್ ಹುಟ್ಟುಹಾಕಿವೆ. ಈ ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲ್‌ಗಳ ಪ್ರಿ-ಆರ್ಡರ್ ದಿನಾಂಕ ಇದೇ ಸೆಪ್ಟೆಂಬರ್ 13ರಂದು ಪ್ರಾರಂಭವಾಗಲಿದೆ. ಇನ್ನು ಮಾರಾಟವು ಇದೇ ಸೆಪ್ಟೆಂಬರ್ 20 ರಿಂದ ಶುರುವಾಗಲಿದೆ.
ಐಫೋನ್ 16 ಬೆಲೆ ಮಾಹಿತಿ
ಐಫೋನ್ 16 - 128GB ಮಾಡೆಲ್ ಬೆಲೆ - 79,900ರೂ
ಐಫೋನ್ 16 - 256GB ಮಾಡೆಲ್ ಬೆಲೆ - 89,900ರೂ
ಐಫೋನ್ 16 - 512GB ಮಾಡೆಲ್ ಬೆಲೆ - 1,09,900ರೂ
ಐಫೋನ್ 16 ಪ್ಲಸ್ ಬೆಲೆ ಮಾಹಿತಿ
ಐಫೋನ್ 16 ಪ್ಲಸ್ - 128GB ವೇರಿಯಂಟ್ ಬೆಲೆ - 89,900ರೂ
ಐಫೋನ್ 16 ಪ್ಲಸ್ - 256GB ವೇರಿಯಂಟ್ ಬೆಲೆ - 99,900ರೂ
ಐಫೋನ್ 16 ಪ್ಲಸ್ - 512GB ವೇರಿಯಂಟ್ ಬೆಲೆ - 1,19,900ರೂ
ಐಫೋನ್ 16 ಪ್ರೊ ಬೆಲೆ ಮಾಹಿತಿ
ಐಫೋನ್ 16 ಪ್ರೊ - 128GB ವೇರಿಯಂಟ್ ದರ - 1,19,900ರೂ
ಐಫೋನ್ 16 ಪ್ರೊ - 256GB ವೇರಿಯಂಟ್ ದರ - 1,29,900ರೂ
ಐಫೋನ್ 16 ಪ್ರೊ - 512GB ವೇರಿಯಂಟ್ ದರ - 1,49,900ರೂ
ಐಫೋನ್ 16 ಪ್ರೊ - 1TB ವೇರಿಯಂಟ್ ದರ - 1,69,900ರೂ
ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ ಲಿಸ್ಟ್
ಐಫೋನ್ 16 ಪ್ರೊ ಮ್ಯಾಕ್ಸ್ - 256GB ವೇರಿಯಂಟ್ ಬೆಲೆ - 1,44,900ರೂ
ಐಫೋನ್ 16 ಪ್ರೊ ಮ್ಯಾಕ್ಸ್ - 512GB ವೇರಿಯಂಟ್ ಬೆಲೆ 1,64,900ರೂ
ಐಫೋನ್ 16 ಪ್ರೊ ಮ್ಯಾಕ್ಸ್ - 1TB ವೇರಿಯಂಟ್ ಬೆಲೆ 1,84,900 ರೂ
ಸೇಲ್ ಮಾಹಿತಿ
ಹೊಸ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಮೊಬೈಲ್‌ಗಳ ಪ್ರಿ-ಆರ್ಡರ್ (Pre-orders) ಇದೇ ಸೆಪ್ಟೆಂಬರ್ 13 ರಂದು ಭಾರತೀಯ ಕಾಲಮಾನ ಸಂಜೆ 5:30 ಗಂಟೆಗೆ ಶುರು ಆಗಲಿದೆ. ಇನ್ನು ಈ ಐಫೋನ್‌ಗಳು ಇದೇ ಸೆಪ್ಟೆಂಬರ್ 20 ರಿಂದ ಗ್ರಾಹಕರ ಖರೀದಿಗೆ ಲಭ್ಯ ಆಗಲಿವೆ.


Click it and Unblock the Notifications








