Home
ಸುದ್ದಿಜಾಲ

iPhone 16 Launch: ಐಫೋನ್ 16 ಸರಣಿಯ ಮಾರಾಟ ಯಾವಾಗ? ಇಲ್ಲಿದೆ ಮಾಹಿತಿ

iPhone 16 Launch: ಆಪಲ್‌ ಪ್ರಿಯರು ಐಫೋನ್ 16 (iPhone 16) ಸರಣಿಯ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆಪಲ್‌ ಕಂಪನಿಯು ತನ್ನ ಇತ್ತೀಚಿನ ಐಫೋನ್ 16 ಸರಣಿಯನ್ನು ನಾಳೆ (ಸೆಪ್ಟೆಂಬರ್ 9 ರಂದು) ನಡೆಯಲಿರುವ ಗ್ಲೋಟೈಮ್ ಈವೆಂಟ್‌ನಲ್ಲಿ ಬಿಡುಗಡೆ ಮಾಡಲಿದೆ. ಎಲ್ಲರ ಚಿತ್ತ ನಾಳೆ ನಡೆಯುವ ಸಮಾರಂಭದತ್ತ ನೆಟ್ಟಿದೆ.

ಹೌದು, ಐಫೋನ್ 16 ಸರಣಿಯ ಅಡಿಯಲ್ಲಿ ಕಂಪನಿಯು 4 ಹೊಸ ಸ್ಮಾರ್ಟ್‌ಫೋನ್‌ಗಳಾದ ಐಫೋನ್ 16 (iPhone 16), ಐಫೋನ್ 16 ಪ್ಲಸ್ (iPhone 16 Plus), ಐಫೋನ್ 16 ಪ್ರೊ (iPhone 16 Pro) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಅನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮಧ್ಯತೆ ಸಾಕಷ್ಟು ಜನರ ಮನಸ್ಸಿನಲ್ಲಿ ಐಫೋನ್ 16 ಸರಣಿಯ ಮಾರಾಟ ಯಾವಾಗ ಪ್ರಾರಂಭ? ಎಂಬ ಪ್ರಶ್ನೆ ಹುಟ್ಟಿದೆ. ನಿಮ್ಮ ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

iPhone 16 ಸರಣಿಯ ಮಾರಾಟ ಯಾವಾಗ ಪ್ರಾರಂಭ? ಇಲ್ಲಿದೆ ಮಾಹಿತಿ

ಆಪಲ್‌ನ ಪ್ರಕಟಣೆ ಏನು?

ಆಪಲ್ ಕಂಪನಿಯು ಇತ್ತೀಚೆಗೆ ಸ್ಟಾಕ್‌ಹೋಮ್ ಬಳಿಯ ಮಾಲ್ ಆಫ್ ಸ್ಕ್ಯಾಂಡಿನೇವಿಯಾದಲ್ಲಿ ತನ್ನ ಹೊಚ್ಚ ಹೊಸ ಚಿಲ್ಲರೆ ಅಂಗಡಿಯನ್ನು ಸೆಪ್ಟೆಂಬರ್ 20, 2024 ರಂದು ಶುಕ್ರವಾರ ತೆರೆಯಲಾಗುವುದು ಎಂದು ಘೋಷಿಸಿದೆ. ಅದರಂತೆ ಕಂಪನಿಯು, ತನ್ನ ಪ್ರಕಟಣೆಯ ನಂತರ ಎರಡನೇ ಶುಕ್ರವಾರ ಅಂದರೆ 20 ಸೆಪ್ಟೆಂಬರ್ ರಂದು ಅಂಗಡಿಗಳಲ್ಲಿ ಹೊಸ ಐಫೋನ್ ಅನ್ನು ಮಾರಾಟ ಮಾಡಬಹುದು. ಸೆಪ್ಟೆಂಬರ್ 20 ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಐಫೋನ್ 16 ಸರಣಿಯ ಫೋನ್‌ಗಳು ಲಭ್ಯವಿರಲಿವೆ ಎಂದು ಈ ಪ್ರಕಟಣೆ ಬಹಿರಂಗಪಡಿಸುತ್ತದೆ.

ಸ್ವೀಡನ್ ಮಾತ್ರ ಏಕೆ ಪ್ರಾರಂಭ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಕಂಪನಿಯು ಕಳೆದ ವರ್ಷ ಜುಲೈನಲ್ಲಿ ಹೆಲ್ಸಿಂಗ್‌ಬೋರ್ಗ್‌ನಲ್ಲಿ ತನ್ನ ವಾಲಾ ಸೆಂಟ್ರಮ್ ಸ್ಟೋರ್ ಅನ್ನು ಶಾಶ್ವತವಾಗಿ ಮುಚ್ಚಿದೆ. ಆದರೆ, ಮಾಲ್ ಆಫ್ ಸ್ಕ್ಯಾಂಡಿನೇವಿಯಾವನ್ನು ಪ್ರಾರಂಭಿಸುವುದರೊಂದಿಗೆ, ಕಂಪನಿಯು ಇನ್ನೂ ಮೂರು ಚಿಲ್ಲರೆ ಅಂಗಡಿಗಳನ್ನು ಸ್ವೀಡನ್‌ನಲ್ಲಿ ಹೊಂದಿದೆ. ಮತ್ತು ಈ ಸ್ಟೋರ್ ಬಿಡುಗಡೆಯು ಕೇವಲ ಐಫೋನ್ 16 ಸರಣಿಯ ಮೊಬೈಲ್‌ಗಳಿಗಾಗಿ ಮಾತ್ರ ಇರುತ್ತದೆ.

ಐಫೋನ್ 16 ಸರಣಿ ಬಿಡುಗಡೆ ಕಾರ್ಯಕ್ರಮವನ್ನು ಎಲ್ಲಿ ವೀಕ್ಷಿಸಬಹುದು?

ಪ್ರಸ್ತುತ, ಈ ಮಾಹಿತಿಯು ಕೇವಲ ನಿರೀಕ್ಷೆಯಾಗಿದೆ. ಉಳಿದ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ನೀವು ಸೆಪ್ಟೆಂಬರ್ 9 ರಂದು ಆಪಲ್ ಈವೆಂಟ್‌ನಲ್ಲಿ ತಿಳಿಯಬಹುದು. ಐಫೋನ್ 16 ಸರಣಿ ಬಿಡುಗಡೆ ಕಾರ್ಯಕ್ರಮವು ಸ್ಟೀವ್ ಜಾಬ್ಸ್ ಥಿಯೇಟರ್, ಆಪಲ್ ಪಾರ್ಕ್, ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾದಲ್ಲಿ ನೇರ ಪ್ರಸಾರವಾಗಲಿದೆ. ಈ ಸಮಾರಂಭವು ಭಾರತೀಯ ಕಾಲಮಾನ ರಾತ್ರಿ 10.30 ಗಂಟೆಗೆ ಪ್ರಾರಂಭವಾಗುತ್ತದೆ. ನೀವು ಇದನ್ನು YouTube, Apple TV ಮತ್ತು ಆಪಲ್‌ನ ವೆಬ್‌ಸೈಟ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.

ಐಫೋನ್ 16 ಸರಣಿ ಬಗ್ಗೆ ನಿರಂತರವಾಗಿ ಹೊಸ ಅಪ್ಡೇಟ್‌ ಸೋರಿಕೆ

ಐಫೋನ್ 16 ಸರಣಿ ಬಿಡುಗಡೆ ದಿನ ಹತ್ತಿರವಾಗುತ್ತಿದ್ದಂತೆಯೇ ನಿರಂತರವಾಗಿ ಹೊಸ ಅಪ್ಡೇಟ್‌ಗಳು ಲಭ್ಯವಾಗುತ್ತಿದೆ. ಇತ್ತೀಚೆಗೆ, ಐಫೋನ್ 16 ಸರಣಿಯ ಬೆಲೆ, ವೈಶಿಷ್ಟ್ಯಗಳು ಮತ್ತು ವಿನ್ಯಾಸವು ಸೋರಿಕೆಯಾಗಿದೆ. ಇದರಲ್ಲಿ ಐಫೋನ್ 16 ಸರಣಿಯ ಟಾಪ್ ಮಾಡೆಲ್‌ನ ಬೆಲೆ 2 ಲಕ್ಷ ರೂ.ಗಳಿಗಿಂತ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ, ಐಫೋನ್ 16 ಸರಣಿಯಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು.

ಮಾಹಿತಿಯ ಪ್ರಕಾರ, ನಾವು ಐಫೋನ್ 16 ಸರಣಿಯ ಪ್ರೊ ಮೊಬೈಲ್‌ನಲ್ಲಿ ಮೀಸಲಾದ ಕ್ಯಾಮೆರಾ ಬಟನ್ ಅನ್ನು ಕಾಣಬಹುದು. ಇದು ಅಸ್ತಿತ್ವದಲ್ಲಿರುವ ಆಕ್ಷನ್ ಬಟನ್ ಅನ್ನು ಬದಲಾಯಿಸುತ್ತದೆಯೇ? ಅಥವಾ ಇಲ್ಲವೇ? ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಇದರ ಹೊರತಾಗಿ ನಾವು ಪ್ರೊ ಮಾದರಿಯಲ್ಲಿ ಕ್ರಮವಾಗಿ 6.3 ಇಂಚುಗಳು ಮತ್ತು 6.9 ಇಂಚುಗಳ ದೊಡ್ಡ ಡಿಸ್ಪ್ಲೇಗಳನ್ನು ಸಹ ನೋಡಬಹುದು.

ಪ್ರಸ್ತುತ ಈ ಮಾಹಿತಿಯು ಸಾಧ್ಯತೆಯನ್ನು ಅವಲಂಬಿಸಿರುತ್ತದೆ. ಉಳಿದ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ನೀವು ಸೆಪ್ಟೆಂಬರ್ 9 ರಂದು ಆಪಲ್‌ ಈವೆಂಟ್ 2024 ನಲ್ಲಿ ಮಾತ್ರ ಕಾಣಬಹುದು. ಅಲ್ಲಿಯವರೆಗೆ, ಆಪಲ್‌ನ ಈ ಮಹತ್ವದ ಸಮಾರಂಭಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ನಮ್ಮ ವೆಬ್‌ಸೈಟ್ ಗಿಜ್ಬಾಟ್ ಕನ್ನಡದ ಮೂಲಕ ತಿಳಿಬಹುದು.

Best Mobiles in India

English summary
iPhone 16 Launch: When will the sale of iPhone 16 series start, know here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+