iPhone: ಐಫೋನ್ 16 ಕ್ಯಾಮೆರಾ ಶೈಲಿ ಹಳೆಯ ಈ ಫೋನ್ ರೀತಿಯಲ್ಲೇ ಇರಲಿದೆಯಂತೆ! ಯಾಕೆ ಗೊತ್ತಾ?
ಐಫೋನ್ (iPhone) ಎಂದಾಕ್ಷಣ ಸಾಕಷ್ಟು ಜನರು ಆ ಫೋನ್‌ನ ಕ್ಯಾಮೆರಾ ಫೀಚರ್ಸ್ ಕಡೆ ಕಣ್ಣಾಯಿಸುತ್ತಾರೆ. ಈ ಕಾರಣಕ್ಕೆ ಅದೆಷ್ಟೋ ಜನರು ಈ ಫೋನ್‌ಗಳನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಅದರಂತೆ ಈಗ ಮುಂದಿನ ಸರಣಿಯ ಐಫೋನ್ 16 (iPhone 16) ಕ್ಯಾಮೆರಾ ಶೈಲಿ ಬಗ್ಗೆ ಮಾಹಿತಿ ಲೀಕ್ ಆಗಿದೆ.
ಹೌದು, ಐಫೋನ್ 16 ಕ್ಯಾಮೆರಾ ಶೈಲಿ (iPhone 16 camera layout ) ಬಹಿರಂಗವಾಗಿದ್ದು, ಇದು ಹಳೆಯ ಬಹುಬೇಡಿಕೆ ಇರುವ ಫೋನ್ ಶೈಲಿಯಲ್ಲೇ ಇರಲಿದೆ ಎಂದು ತಿಳಿದುಬಂದಿದೆ. ಆದರೆ ಹೊಸ ಹಾಗೂ ವಿಶೇಷ ಫೀಚರ್ಸ್ ಅನ್ನು ಹೊಸ ಫೋನ್‌ನಲ್ಲಿ ಕಾಣಬಹುದಾಗಿದೆ. ಈ ಮೂಲಕ ಈ ಫೋನ್ ಐಫೋನ್ 15, 14, ಮತ್ತು 13 ಗಿಂತ ಭಿನ್ನವಾಗಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ, ಈ ಫೋನ್ ಯಾವ ಫೋನ್‌ನ ಕ್ಯಾಮೆರಾ ಶೈಲಿ ಹೊಂದಿರಲಿದೆ?, ಇತರೆ ಲೀಕ್ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಐಫೋನ್ 16 ಕ್ಯಾಮೆರಾ ಶೈಲಿ: ಮೊದಲೇ ತಿಳಿಸಿದಂತೆ ಐಫೋನ್ 15,ಐಫೋನ್ 14, ಮತ್ತು ಐಫೋನ್ 13 (iPhone 15, iPhone 14, and iPhone 13) ಗಿಂತ ಭಿನ್ನವಾಗಿ ಕಾಣಿಸಿಕೊಳ್ಳಲು ಹಾಗೂ ಪ್ರಮುಖ ಫೀಚರ್ಸ್ ಅನ್ನು ಸಕ್ರಿಯಗೊಳಿಸಲು ಐಫೋನ್ 16 ಲಂಬ ಕ್ಯಾಮೆರಾ ವಿನ್ಯಾಸವನ್ನು (Vertical camera layout) ಹೊಂದಿರಬಹುದು ಎಂದು ತಿಳಿದುಬಂದಿದೆ. ಈ ಹೊಸ ಫೋನ್ ಸರಣಿ ಲಾಂಚ್ ಇನ್ನೂ ಹಲವಾರು ತಿಂಗಳುಗಳ ದೂರದಲ್ಲಿರುವಾಗಲೇ ಈ ಫೋನ್ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಚರ್ಚೆ ಆಗುತ್ತಿವೆ.

ಇನ್ನು ಈ ವರ್ಷದ ನಂತರ ಸೆಪ್ಟೆಂಬರ್‌ನಲ್ಲಿ ಅಧಿಕೃತ ಲಾಂಚ್ ಆನ್ನು ನಿರೀಕ್ಷೆ ಮಾಡಲಾಗಿದೆ. ಆದರೆ ಈ ಫೋನ್‌ನ ಸಂಭಾವ್ಯ ಫೀಚರ್ಸ್‌ಗಳ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಲೇ ಇವೆ. ಈ ನಡುವೆ ಟಾಪ್ ಎಂಡ್ ಐಫೋನ್ 16 ಪ್ರೊ ಮಾಡೆಲ್‌ಗಳ ಅನೇಕ ಲೀಕ್ ಮಾಹಿತಿಯನ್ನು ವರದಿ ಮಾಡಲಾಗಿತ್ತು. ಆದರೆ ಈಗ ವೆನಿಲ್ಲಾ ಐಫೋನ್ 16 ಬಗ್ಗೆ ಹೊಸ ಮಾಹಿತಿ ಲೀಕ್ ಆಗಿದೆ.
ಇತ್ತೀಚಿನ ಲೀಕ್ ಮಾಹಿತಿ ಆಧಾರದ ಮೇಲೆ ಟಿಪ್‌ಸ್ಟರ್ ಮಜಿನ್ ಬು ಐಫೋನ್ 16 ಕುರಿತು ಹಾರ್ಡ್‌ವೇರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಡಿವೈಸ್‌ನ ಕ್ಯಾಮೆರಾ ಹೌಸಿಂಗ್ ಅನ್ನು ಬಹಿರಂಗಪಡಿಸಿದ್ದಾರೆ. ಅಂದರೆ ಈ ಫೋನ್‌ನಲ್ಲಿ ನಾವು ಐಫೋನ್ 11 ಮತ್ತು ಐಫೋನ್ 12 (iPhone 11 and iPhone 12) ನಲ್ಲಿ ಇರುವ ಕ್ಯಾಮೆರಾ ಶೈಲಿಯನ್ನು ಇಲ್ಲಿ ಕಾಣಬಹುದು ಎಂದು ಉಲ್ಲೇಖಿಸಲಾಗಿದೆ.

ಈ ಬದಲಾವಣೆಯು ವೆನಿಲ್ಲಾ ಐಫೋನ್‌ಗಳಲ್ಲಿ ಪ್ರಾದೇಶಿಕ ವಿಡಿಯೋ ರೆಕಾರ್ಡಿಂಗ್ (Spatial Video recording) ಅನ್ನು ಸಕ್ರಿಯಗೊಳಿಸಬಹುದು ಎನ್ನಲಾಗಿದೆ. ಇದಕ್ಕೆ ಕಾರಣ ಏನೆಂದರೆ ಇದು ಪ್ರಸ್ತುತ ದುಬಾರಿ ಐಫೋನ್ 15 ಪ್ರೊ ಮಾದರಿಯಲ್ಲಿ ಕಾಣಬಹುದಾಗಿದೆ. ಐಫೋನ್ 15 ಪ್ರೊ ನ ಟ್ರಿಪಲ್ ಕ್ಯಾಮೆರಾ ರಚನೆ ಕಡೆ ಗಮನ ಹರಿಸಿದಾಗ, ಆಪಲ್ ಮುಖ್ಯ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್ ಸೆನ್ಸರ್ ಅನ್ನು ಯಾವ ರೀತಿ ಜೋಡಿಸಲಾಗಿದೆ ಅನ್ನೋದನ್ನು ನೋಡಿದ್ರೆ ನಿಮಗೆ ಇದರ ಬಗ್ಗೆ ತಿಳಿಯುತ್ತದೆ.
ಈಗ ಲಭ್ಯವಿರುವ ಆಪಲ್ ವಿಷನ್ ಪ್ರೊ (Apple Vision Pro) ನಲ್ಲಿ ಈ ಸೆನ್ಸರ್ ಕಾಣಬಹುದಾಗಿದೆ. ಈ ನಡುವೆ ಆಪಲ್ ಈ ವಿಷಯದ ಕಡೆ ಹೆಚ್ಚು ಗಮನಹರಿಸಿದೆ. ಅದಾಗ್ಯೂ ವೆನಿಲ್ಲಾ ಫೋನ್‌ಗಳೊಂದಿಗೆ ಈ ಸೌಲಭ್ಯ ನೀಡುತ್ತಿರುವುದು ಸಹ ಆಪಲ್ ಬಗ್ಗೆ ಮಿಶ್ರ ಚರ್ಚೆ ಆಗಲಿ ಕಾರಣವಾಗಬಹುದು ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಏನಿದು ಪ್ರಾದೇಶಿಕ ವಿಡಿಯೋ ರೆಕಾರ್ಡಿಂಗ್?: ಈ ಫೀಚರ್ಸ್ ಅನ್ನು ಮೊದಲೇ ತಿಳಿಸಿದಂತೆ ನೀವು ಐಫೋನ್ 15 ಪ್ರೊನಲ್ಲಿ ಕಾಣಬಹುದಾಗಿದೆ. ಇದು 3D ವಿಡಿಯೋಗಳನ್ನು ಸೆರೆಹಿಡಿಯಲು LiDAR ತಂತ್ರಜ್ಞಾನವನ್ನು ಬಳಕೆ ಮಾಡುತ್ತದೆ. ಅದರಂತೆ ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 1080p ನಲ್ಲಿ ಪ್ರಾದೇಶಿಕ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಆಪಲ್ ವಿಷನ್ ಪ್ರೊನಲ್ಲಿ ಪ್ರಾದೇಶಿಕ ವಿಡಿಯೋಗಳು ಸಹ 3D ಆಗಿ ಕಾಣುತ್ತವೆ. ಆದರೆ, ಇತರ ಡಿವೈಸ್‌ಗಳಲ್ಲಿ 2D ಕಾಣಿಸಿಕೊಳ್ಳುತ್ತವೆ.


Click it and Unblock the Notifications








