Home
ಸುದ್ದಿಜಾಲ

iPhone: ಐಫೊನ್‌ 16 ಪ್ರೊ ಮ್ಯಾಕ್ಸ್‌ ಡಿಸ್‌ಪ್ಲೇಗಳಿಗೆ ಇನ್ನೂ ಅನುಮೋದನೆ ದೊರಕಿಲ್ಲ! ಲಾಂಚ್‌ ತಡವಾಗಲಿದೆಯೇ?

ಆಪಲ್‌ನ ಹೊಸ ಐಫೋನ್‌ ಖರೀದಿ ಮಾಡಲು ಗ್ರಾಹಕರು ಈಗಾಗಲೇ ಸಜ್ಜಾಗಿದ್ದಾರೆ. ಅದರಲ್ಲೂ ಐಫೊನ್‌ 16 ಸರಣಿ ಫೋನ್‌ ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಲಭ್ಯ ಇರಲಿವೆ ಎಂದು ಕೆಲವು ಮಾಹಿತಿಗಳು ಈಗಾಗಲೇ ಲೀಕ್‌ ಆಗಿದ್ದು, ಗ್ರಾಹಕರಲ್ಲಿ ಭಾರೀ ಕುತೂಹಲ ಉಂಟು ಮಾಡಿದೆ. ಈ ನಡುವೆ ಆಪಲ್‌ ಆಪಲ್‌ ಐಫೊನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಡಿಸ್ಪ್ಲೇಗಳನ್ನು ಇನ್ನೂ ಅನುಮೋದಿಸಿಲ್ಲ ಎನ್ನುವ ವಿಷಯ ತಿಳಿದುಬಂದಿದ್ದು, ಇದರಿಂದಾಗಿ ಈ ಫೋನ್‌ ತಡವಾಗಿ ಲಾಂಚ್‌ ಆಗಲಿದೆಯಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಇದು ಆಪಲ್‌ ಪ್ರಿಯರಿಗೆ ಕೊಂಚ ಬೇಸರ ಉಂಟಾಗುವಂತೆಯೂ ಮಾಡಿದೆ.

ಹೌದು, ಐಫೋನ್ 16 ಸರಣಿಯು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು, ಆಪಲ್ ಅದಕ್ಕಾಗಿ ಎಲ್ಲಾ ತಯಾರಿ ಆರಂಭಿಸಿದೆ ಎಂದು ತೋರುತ್ತದೆ. ಸ್ಟ್ಯಾಂಡರ್ಡ್ ಮಾಡೆಲ್‌ಗಳ ಡಿಸ್‌ಪ್ಲೇಗಳು ಮತ್ತು ನಿಯಮಿತ ಪ್ರೊ ಆವೃತ್ತಿಯ ಉತ್ಪಾದನೆಯು ಈಗಾಗಲೇ ಪ್ರಾರಂಭವಾಗಿದ್ದು, ಆಪಲ್‌ನ ನಿಯಮಿತ ಡಿಸ್‌ಪ್ಲೇ ಪಾಲುದಾರರು, ಎಲ್‌ಜಿ ಡಿಸ್ಪ್ಲೇ ಮತ್ತು ಸ್ಯಾಮ್‌ಸಂಗ್, ಹೊಸ ಲೈನ್‌ಅಪ್‌ಗಾಗಿ ಸ್ಕ್ರೀನ್‌ಗಳನ್ನು ಉತ್ಪಾದಿಸುವ ಕೆಲಸದಲ್ಲಿ ನಿರತವಾಗಿವೆ.

ಐಫೊನ್‌ 16 ಪ್ರೊ ಮ್ಯಾಕ್ಸ್‌ ಡಿಸ್‌ಪ್ಲೇಗಳಿಗೆ ಇನ್ನೂ ಅನುಮೋದನೆ ದೊರಕಿಲ್ಲ!

ಆದರೆ ದಿ ಎಲೆಕ್‌ನ ಇತ್ತೀಚಿನ ವರದಿಯು ಸಂಭಾವ್ಯ ಸ್ನ್ಯಾಗ್ ಅನ್ನು ಸೂಚಿಸುತ್ತದೆ. ಐಫೋನ್ 16 ಪ್ರೊ ಮ್ಯಾಕ್ಸ್ ಡಿಸ್ಪ್ಲೇಗಳು ಇನ್ನೂ ಆಪಲ್‌ನ ಅನುಮೋದನೆಯನ್ನು ಸ್ವೀಕರಿಸಿಲ್ಲ ಅನ್ನೋ ಶಾಕಿಂಗ್‌ ಮಾಹಿತಿ ಬಹಿರಂಗವಾಗಿದೆ. ಈ ವಿಳಂಬವು ಐಫೋನ್ 16 ಸರಣಿಯ ಲಾಂಚ್‌ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಲೀಕ್‌ ಮಾಹಿತಿ ನಂಬುವುದಾದರೆ, ಜೂನ್ ಮಧ್ಯದಲ್ಲಿ ಎಲ್‌ಜಿ ಹಾಗೂ ಮೇ ಅಂತ್ಯದ ವೇಳೆಗೆ ಸ್ಯಾಮ್‌ಸಂಗ್ ಈ ಡಿಸ್‌ಪ್ಲೇ ಉತ್ಫಾದನೆಗೆ ಅನುಮೋದನೆಯನ್ನು ಪಡೆಯಬಹುದು ಎನ್ನಲಾಗಿದ್ದು, ಮತ್ತೊಂದು ಡಿಸ್‌ಪ್ಲೇ ತಯಾರಕರಾದ BOE ಅನ್ನು ಪ್ರೊ ಅಲ್ಲದ ಮಾದರಿಗಳಿಗಾಗಿ ಮಂಡಳಿಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ ಎನ್ನುವ ಮಾತುಗಳು ಸಹ ಕೇಳಿಬಂದಿವೆ.

ಇನ್ನು ಆಪಲ್‌ನ ವಿಶಿಷ್ಟ ಉತ್ಪಾದನಾ ವೇಳಾಪಟ್ಟಿ ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ, ಕಂಪನಿಯು ಐಫೋನ್ 16 ಪ್ರೊ ಮ್ಯಾಕ್ಸ್ ಡಿಸ್ಪ್ಲೇಗಳನ್ನು ಅನುಮೋದಿಸಿದರೆ, ಅದು ಇನ್ನೂ ಅದರ ಸಾಂಪ್ರದಾಯಿಕ ಉಡಾವಣಾ ಟೈಮ್‌ಲೈನ್‌ಗೆ ಬದ್ಧವಾಗಿರಬಹುದು ಎನ್ನಲಾಗಿದೆ. ಆದಾಗ್ಯೂ, ಆಪಲ್‌ನಿಂದ ಅಧಿಕೃತ ಸಂವಹನದ ಅನುಪಸ್ಥಿತಿಯು ಊಹಾಪೋಹ ಮತ್ತು ಅನಿಶ್ಚಿತತೆಗೆ ಅವಕಾಶ ನೀಡುತ್ತದೆ.

ಐಫೋನ್ 16 ಸರಣಿಯು ಪ್ರೊ ಮಾಡೆಲ್‌ಗಳಿಗಾಗಿ ಹೆಚ್ಚಿದ ಡಿಸ್‌ಪ್ಲೇ ಗಾತ್ರಗಳನ್ನು ಒಳಗೊಂಡಂತೆ ಹಲವಾರು ನವೀಕರಣಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಫೋನ್ 16 ಪ್ರೊ 6.27 ಇಂಚಿನ ಡಿಸ್‌ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ.ಆದರೆ, ಐಫೋನ್ 16 ಪ್ರೊ ಮ್ಯಾಕ್ಸ್ 6.85 ಇಂಚಿನ ಡಿಸ್‌ಪ್ಲೇಯನ್ನು ಪ್ಯಾಕ್ ಮಾಡಬಹುದು. ಎರಡೂ ಮಾದರಿಗಳು ತೆಳುವಾದ ಬೆಜೆಲ್‌ಗಳನ್ನು ಹೊಂದಿರಬಹುದು ಎಂದು ಲೀಕ್‌ ಮಾಹಿತಿಯಿಂದ ತಿಳಿದುಬಂದಿದೆ.

ಐಫೊನ್‌ 16 ಪ್ರೊ ಮ್ಯಾಕ್ಸ್‌ ಡಿಸ್‌ಪ್ಲೇಗಳಿಗೆ ಇನ್ನೂ ಅನುಮೋದನೆ ದೊರಕಿಲ್ಲ!

ಹೆಚ್ಚುವರಿಯಾಗಿ, ಪ್ರೊ ಮಾದರಿಗಳು ಸುಧಾರಿತ ಬ್ರೈಟ್‌ನೆಸ್‌ ಮಟ್ಟವನ್ನು ಹೊಂದಿವೆ ಎಂದು ವದಂತಿಗಳಿವೆ. ವಿಶಿಷ್ಟವಾದ ಗರಿಷ್ಠ ಬ್ರೈಟ್‌ನೆಸ್‌ 1,200 ನಿಟ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಇದು ಐಫೋನ್ 15 ಪ್ರೊ ನ ವಿಶಿಷ್ಟವಾದ ಗರಿಷ್ಠ ಬ್ರೈಟ್‌ನೆಸ್‌ 200 ನಿಟ್ಸ್‌ಗಿಂತ ಭಾರೀ ಹೆಚ್ಚಳವಾಗಿದೆ. ಇನ್ನು ಪ್ರೊ ಮಾದರಿಗಳೊಂದಿಗೆ ಗರಿಷ್ಠ ಹೆಚ್‌ಡಿಆರ್‌ ಬ್ರೈಟ್‌ನೆಸ್‌ ಅನ್ನೂ ಸಹ ಒಟ್ಟುಗೂಡಿಸುತ್ತದೆ.

ಈ ಭರವಸೆಯ ಅಪ್‌ಗ್ರೇಡ್‌ಗಳ ಹೊರತಾಗಿಯೂ, ಡಿಸ್‌ಪ್ಲೇ ಅನುಮೋದನೆಯಲ್ಲಿನ ವಿಳಂಬವು ಒಟ್ಟಾರೆ ಉತ್ಪಾದನಾ ಟೈಮ್‌ಲೈನ್‌ನ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದ್ದು, ಆಪಲ್ ತನ್ನ ಸಾಂಪ್ರದಾಯಿಕ ಉಡಾವಣಾ ವೇಳಾಪಟ್ಟಿಯನ್ನು ಪೂರೈಸುವ ಸಾಮರ್ಥ್ಯವು ಈ ಅನುಮೋದನೆ ಸಮಸ್ಯೆಗಳ ತ್ವರಿತ ಪರಿಹಾರವನ್ನು ಅವಲಂಬಿಸಿರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಈ ಐಫೋನ್ 16 ಸರಣಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಲಾಂಚ್‌ ಆಗುವ ನಿರೀಕ್ಷೆಯಿದೆ.

Best Mobiles in India

English summary
Shocking information revealed that iPhone 16 Pro Max display have not yet received Apple's approval. This raises questions whether the delay could affect the launch of the iPhone 16 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+