Home
ಸುದ್ದಿಜಾಲ

iPhone: ಐಫೋನ್‌ ಇತಿಹಾಸದಲ್ಲಿ ಇದೇ ಮೊದಲು? ಇದಕ್ಕಾಗಿಯೇ ಜನ ಕಾಯ್ತಾ ಇದ್ದದ್ದು...

ಐಫೋನ್‌ಗಳೆಂದರೆ (iPhone) ಗ್ರಾಹಕರಿಗೆ ವಿಶೇಷವಾದ ಕ್ರೇಜ್‌. ಈ ಫೋನ್‌ಗಳನ್ನು ಸಾಲ ಮಾಡಿಯಾದರೂ ಖರೀದಿ ಮಾಡುವ ಮಂದಿ ನಮ್ಮ ನಡುವೆ ಇದ್ದಾರೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಅಫರ್ ಬೆಲೆಯಲ್ಲೂ ಸಹ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದ್ದು, ಈ ಎಲ್ಲಾ ಬೆಳವಣಿಗೆ ನಡುವೆ ಮುಂದಿನ ಐಫೋನ್‌ ಸರಣಿಗೆ ಸಂಬಂಧಿಸಿದಂತೆ ಖುಷಿ ಪಡುವ ವಿಚಾರ ಬೆಳಕಿಗೆ ಬಂದಿದೆ.

ಹೌದು, ಐಫೋನ್‌ ಗಳು ಉತ್ತಮ ಭದ್ರತಾ ಫೀಚರ್ಸ್‌ ಹಾಗೂ ಇತರೆ ವಿಶೇಷ ಫೀಚರ್ಸ್‌ ಹೊಂದಿದ್ದರೂ ಸಹ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಲಭ್ಯ ಇರುವ ಹಲವಾರು ಫೀಚರ್ಸ್‌ ಅನ್ನು ಹೊಂದಲು ಈವರೆಗೂ ಸಾಧ್ಯವಾಗಿಲ್ಲ. ಅದರಲ್ಲಿ ಎಐ ಇರಬಹುದು, ಹೆಚ್ಚಿನ ಮೆಗಾಪಿಕ್ಸೆಲ್‌ ಸಾಮರ್ಥ್ಯದ ಕ್ಯಾಮೆರಾ ಇರಬಹುದು ಹಾಗೂ ಫೋಲ್ಡಬಲ್‌ ವಿಚಾರ ಆಗಿರಬಹುದು. ಇದರ ಜೊತೆಗೆ ಇನ್ನೂ ಒಂದು ವಿಷಯ ಇದೆ. ಹಾಗಿದ್ರೆ, ಯಾವುದು ಆ ವಿಷಯ?, ಇನ್ಮುಂದೆ ಬಳಕೆದಾರರು ಈ ವಿಷಯದಲ್ಲಿ ಐಫೋನ್‌ ಅನ್ನು ದೂರುವುದಿಲ್ಲವೇ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

 ಐಫೋನ್‌ ಇತಿಹಾಸದಲ್ಲಿ ಇದೇ ಮೊದಲು? ಇದಕ್ಕಾಗಿಯೇ ಜನ ಕಾಯ್ತಾ ಇದ್ದದ್ದು...

ಐಫೋನ್ 16 ಪ್ರೊ ಮ್ಯಾಕ್ಸ್‌ನಲ್ಲಿ ದೊಡ್ಡ ಬ್ಯಾಟರಿ: ಈ ವಿಷಯ ಕೇಳಿ ನಿಮಗೆ ಖಂಡಿತಾ ಸಂತಸ ಆಗಿರಬಹುದು. ಯಾಕೆಂದರೆ ಐಫೋನ್‌ ಬಹುಪಾಲು ಎಲ್ಲದರಲ್ಲೂ ಮುಂದೆ ಇದೆಯಾದರೂ ಬ್ಯಾಟರಿ ವಿಚಾರಕ್ಕೆ ಬಂದರೆ ಆಪಲ್‌ ತುಟಿ ಬಿಚ್ಚುತ್ತಿರಲಿಲ್ಲ. ಆದರೆ ಕೊನೆಗೂ ಈ ಸಂಬಂಧ ಮಾಹಿತಿಯೊಂದು ಹೊರಬಿದ್ದಿದ್ದು, ಆ ಪ್ರಕಾರ ಐಫೋನ್ 16 ಪ್ರೊ ಮ್ಯಾಕ್ಸ್‌ನಲ್ಲಿ (iPhone 16 Pro Max) ದೊಡ್ಡ ಬ್ಯಾಟರಿ ಇರಲಿದೆ ಎಂದು ತಿಳಿದುಬಂದಿದೆ.

ಐಫೋನ್ 16 ಪ್ರೊ ಮ್ಯಾಕ್ಸ್‌ ಟಾಪ್ ಎಂಡ್ ಫ್ಲ್ಯಾಗ್‌ಶಿಪ್ ಮಾದರಿಯಾಗಿದ್ದು, ಐಫೋನ್‌ಗಳ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಟರಿಯನ್ನು ಇದು ಪಡೆಯಬಹುದು ಅಲ್ಲದೆ 30 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಅನ್ನು ನೀಡುವ ಟೆಕ್ನಾಲಜಿಯನ್ನು ಇದು ಪಡೆಯಬಹುದು ಎಂದು ವರದಿಯೊಂದು ಹೇಳುತ್ತದೆ. ಇನ್ನು ಐಫೋನ್‌ 16 ನ ನಿರೀಕ್ಷಿತ ಬಿಡುಗಡೆ ದಿನಾಂಕವು ಆರು ತಿಂಗಳಿಗಿಂತ ಹೆಚ್ಚಿದೆ. ಅದಾಗಲೇ ಈ ಫೋನ್‌ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆ ಆಗುತ್ತಿದೆ.

 ಐಫೋನ್‌ ಇತಿಹಾಸದಲ್ಲಿ ಇದೇ ಮೊದಲು? ಇದಕ್ಕಾಗಿಯೇ ಜನ ಕಾಯ್ತಾ ಇದ್ದದ್ದು...

ಮ್ಯಾಕ್ ರೂಮರ್ಸ್‌, ಪೂರೈಕೆ ಸರಪಳಿಯ ಮೂಲಗಳ ಆಧಾರದ ಮೇಲೆ ಮುಂಬರುವ ಐಫೋನ್ ಮಾದರಿಗಳ ಕುರಿತು ಕೆಲವು ಸಂಭಾವ್ಯ ವಿವರಗಳನ್ನು ಉಲ್ಲೇಖಿಸಿದೆ. ಅದರಂತೆ ಮುಂಬರುವ ಐಫೋನ್ ಉತ್ತಮ ಆಪ್ಟಿಕಲ್ ಜೂಮ್ ಸಾಮರ್ಥ್ಯದೊಂದಿಗೆ ಐಫೋನ್‌ ಡಿಸ್‌ಪ್ಲೇಯನ್ನು 6.1 ಇಂಚುಗಳಿಂದ 6.3 ಇಂಚುಗಳಿಗೆ ಹೆಚ್ಚಿಸಲಿದೆ ಎಂದು ಅದು ಉಲ್ಲೇಖ ಮಾಡಿದೆ.

ಹಾಗೆಯೇ ಐಫೋನ್‌ 16 ಪ್ರೊ ಸರಣಿಯು ಬ್ಯಾಟರಿ ಮತ್ತು ವಿದ್ಯುತ್ ಬಳಕೆಯಲ್ಲಿನ ಹೊಸ ಸುಧಾರಣೆಗಳೊಂದಿಗೆ ದೀರ್ಘ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ತಮ ಬ್ಯಾಟರಿ ಅವಧಿಯನ್ನು ನೀಡಲು ಐಫೋನ್ 16 ಪ್ರೊ ಸರಣಿಯು ದೊಡ್ಡ ಬ್ಯಾಟರಿ ಸೆಲ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಐಫೋನ್ 15 ಪ್ರೊ ಮ್ಯಾಕ್ಸ್‌ನಲ್ಲಿ (iPhone 15 Pro Max) ಕ್ಲೈಮ್ ಮಾಡಿದ 29 ಗಂಟೆಗಳಿಗೆ ಹೋಲಿಸಿದರೆ ಐಫೋನ್ 16 ಪ್ರೊ ಸರಣಿಯು ಇನ್ನೂ ಹೆಚ್ಚಿನ ಬ್ಯಾಕಪ್ ನೀಡಬಹುದು ಎಂದು ತಿಳಿದುಬಂದಿದೆ. ಅಂದರೆ 30 ಗಂಟೆಗಳ ಗಡಿಯನ್ನು ಮುಟ್ಟಬಹುದು.

 ಐಫೋನ್‌ ಇತಿಹಾಸದಲ್ಲಿ ಇದೇ ಮೊದಲು? ಇದಕ್ಕಾಗಿಯೇ ಜನ ಕಾಯ್ತಾ ಇದ್ದದ್ದು...

ಈ ಹಿಂದೆ, ಟಿಪ್‌ಸ್ಟರ್ ಮಜಿನ್ ಬು, ಐಫೋನ್‌ 16 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ 4,676 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ಹೇಳಿದ್ದರು. ಆದಾಗ್ಯೂ, ಕಂಪನಿಯು ಐಫೋನ್‌ 16 ಸರಣಿಯಲ್ಲಿ ಯಾವುದೇ ನವೀಕರಣವನ್ನು ದೃಢೀಕರಿಸಿಲ್ಲ. ಜೊತೆಗೆ ಕಂಪನಿಯು ಸಾಮಾನ್ಯವಾಗಿ ಮುಂದಿನ ಪೀಳಿಗೆಯ ಐಫೋನ್‌ಗಳನ್ನು ಪರಿಚಯಿಸುವವರೆಗೆ ಅಂದರೆ ಸೆಪ್ಟೆಂಬರ್‌ವರೆಗೆ ಕಾದು ನೋಡಬೇಕಿದೆ.

Best Mobiles in India

English summary
It is known that the iPhone 16 Pro Max will have a bigger battery. That means it will provide approximately 30 hours of battery backup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+