Home
ಸುದ್ದಿಜಾಲ

iPhone: ಐಫೋನ್‌ 16 ಪ್ರೊ ನ ಪ್ರಮುಖ ಮಾಹಿತಿ ಲೀಕ್! ಯಾವ ರೀತಿಯ ಡಿಸ್‌ಪ್ಲೇ ?

ಆಪಲ್ ಈಗಷ್ಟೇ ಐಫೋನ್ 15 ಸರಣಿ (iPhone 15 series) ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ಈಗಾಗಲೇ ಬುಕಿಂಗ್‌ ಮಾಡಲಾದ ಅದೆಷ್ಟೋ ಜನರಿಗೆ ಇನ್ನೂ ಸಹ ಈ ಫೋನ್‌ಗಳನ್ನು ತಲುಪಿಸಿಲ್ಲ. ಅದಾಗ್ಯೂ ಮುಂದಿನ ಸರಣಿಯ ಐಫೋನ್‌ 16 ಪ್ರೊ (iPhone 16 Pro) ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ.

ಹೌದು, ಆಪಲ್ ಇತ್ತೀಚೆಗೆ ಐಫೋನ್ 15 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದ್ದು, ಐಫೋನ್ 16 ಫೋನ್‌ಗಳನ್ನು 2024 ರ ಕೊನೆಯಲ್ಲಿ ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ವಿಭಾಗದಲ್ಲಿ ಐಫೋನ್ 16, ಐಫೋನ್ 16 ಪ್ಲಸ್‌, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್‌ (iPhone 16, iPhone 16 Plus, iPhone 16 Pro, iPhone 16 Pro Max) ಈ ಸರಣಿಯ ಅಡಿಯಲ್ಲಿ ಲಾಂಚ್‌ ಆಗಲಿವೆ. ಈ ಫೋನ್‌ಗಳ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿ ಲೀಕ್‌ ಆಗಿವೆ.

ಐಫೋನ್‌ 16 ಪ್ರೊ ನ ಪ್ರಮುಖ ಮಾಹಿತಿ ಲೀಕ್! ಯಾವ ರೀತಿಯ ಡಿಸ್‌ಪ್ಲೇ ?

ಪಂಚ್ ಹೋಲ್ ಡಿಸ್‌ಪ್ಲೇ ಆಯ್ಕೆ: ಇತ್ತೀಚಿನ ಕೆಲವು ಲೀಕ್‌ ಮಾಹಿತಿ ಪ್ರಕಾರ, ಐಫೋನ್ 16 ಪ್ರೊ ಸ್ಮಾರ್ಟ್‌ಫೋನ್ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ (Dynamic Island Features) ಬದಲಿಗೆ ಪಂಚ್ ಹೋಲ್ ಕಟೌಟ್ (Punch hole cutout) ಅನ್ನು ಪಡೆಯಲಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷದ ಐಫೋನ್‌ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ ನಲ್ಲಿ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಅನ್ನು ಮೊದಲ ಬಾರಿಗೆ ಪರಿಚಯಿಸಿದ ಆಪಲ್‌, ಐಫೋನ್‌ 15 ಸರಣಿಗೆ ಸಂಪೂರ್ಣವಾಗಿ ಇದನ್ನು ಅನ್ವಯಿಸಲಾಗಿದೆ. ಅದರಂತೆ ಈಗ ಐಫೋನ್ 16 ಪ್ರೊ ನಲ್ಲಿ ಹೊಸ ಫೀಚರ್ಸ್‌ ಕಾಣಿಸಿಕೊಳ್ಳಲಿದೆ ಎಂದು ಭಾವಿಸಲಾಗಿದೆ.

ಟಿಪ್‌ಸ್ಟರ್ ಮಜಿನ್‌ಬು ಅವರ ವರದಿಯ ಪ್ರಕಾರ, ಮುಂದಿನ ವರ್ಷ ಲಭ್ಯವಾಗುವ ಐಫೋನ್ 16 ಪ್ರೊ ನ ಮೂಲ ಮಾದರಿಯು ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಬದಲಿಗೆ ಪಂಚ್-ಹೋಲ್ ಡಿಸ್‌ಪ್ಲೇನಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ಅದಾಗ್ಯೂ ನಿಖರ ವಿನ್ಯಾಸದ ಕುರಿತು ಮಾರ್ಚ್ 2024 ರವರೆಗೆ ಯಾವುದೇ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ ಎಂದು ಸಹ ಹೇಳಲಾಗಿದೆ. ಆದರೆ ಐಫೋನ್ 17 ಫೋನ್‌ಗಳು ಮಾತ್ರ ಪಕ್ಕಾ ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸ ಹೊಂದಿರುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಲಾಗಿದೆ.

ಐಫೋನ್‌ 16 ಪ್ರೊ ನ ಪ್ರಮುಖ ಮಾಹಿತಿ ಲೀಕ್! ಯಾವ ರೀತಿಯ ಡಿಸ್‌ಪ್ಲೇ ?

ಇನ್ನು ಕಳೆದ ವರ್ಷ ಬಿಡುಗಡೆಯಾದ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ನಲ್ಲಿ (iPhone 14 Pro, iPhone 14 Pro Max) ಸಾಫ್ಟ್‌ವೇರ್ ಆಧಾರಿತ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಅನ್ನು ಪರಿಚಯಿಸಲಾಗಿತ್ತಿ. ಡೈನಾಮಿಕ್ ಲೈಟ್‌ ಫೇಸ್ ಐಡಿ ಸೆನ್ಸರ್‌ ಆಯ್ಕೆ ಮತ್ತು ಮುಂಭಾಗದ ಕ್ಯಾಮೆರಾವನ್ನು ಮರೆ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ ನೋಟಿಫಿಕೇಶನ್‌, ಲೈವ್ ಆಕ್ಟಿವಿಟಿಗೆ ಪ್ರವೇಶಿಸಲು, ಆಡಿಯೊ ಪ್ಲೇಬ್ಯಾಕ್‌ಗಾಗಿ ಇದು ಅತ್ಯಾನುಕೂಲ.

ಇನ್ನು ಐಫೋನ್ 16 ಪ್ರೊ 6.3 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ಟಿಪ್ಸ್ಟಾರ್ ರಾಸ್ ಯಂಗ್ ಹೇಳಿದ್ದಾರೆ. ಐಫೋನ್‌ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ 3nm ಪ್ರಕ್ರಿಯೆಯ ಆಧಾರದ ಮೇಲೆ A18 Pro ಬಯೋನಿಕ್ ಚಿಪ್ ಅನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಹಾಗೆಯೇ ಐಫೋನ್‌ 16, ಐಫೋನ್‌ 16 ಪ್ಲಸ್‌ ಸ್ನಾಪ್‌ಡ್ರಾಗನ್ X70 ಅನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಐಫೋನ್‌ 16 ಪ್ರೊ ನ ಪ್ರಮುಖ ಮಾಹಿತಿ ಲೀಕ್! ಯಾವ ರೀತಿಯ ಡಿಸ್‌ಪ್ಲೇ ?

ಈ ನಡುವೆ ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ಫೋನ್‌ಗಳು 128GB, 256GB ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಎರಡು ಫೋನ್‌ಗಳು ಕಪ್ಪು, ನೀಲಿ, ಹಸಿರು, ಗುಲಾಬಿ ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಿವೆ. ಹಾಗೆಯೇ ಐಫೋನ್‌ 15 ನ ಮೂಲ ಮಾದರಿಯ ಬೆಲೆ 79,900 ಮತ್ತು ಐಫೋನ್ 15 ಪ್ಲಸ್‌ ನ ಆರಂಭಿಕ ಬೆಲೆ 89,900 ಆಗಿತ್ತು.

Best Mobiles in India

English summary
According to some recent leaked information, it is known that the iPhone 16 Pro smartphone will get a punch hole cutout instead of Dynamic Island Features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+