ಐಫೋನ್ ಪ್ರಿಯರಿಗೆ ಸಿಹಿಸುದ್ದಿ!..iPhone 16 Pro ಮಾಡೆಲ್‌ಗಳು 15,000ರೂ. ಕಡಿಮೆ ದರದಲ್ಲಿ ಲಾಂಚ್!
ಬಹುನಿರೀಕ್ಷಿತ ಆಪಲ್ (Apple) ಸಂಸ್ಥೆಯು ಐಫೋನ್ 16 (iPhone 16) ಸರಣಿಯ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸರಣಿಯು ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ನೂತನ ಐಫೋನ್‌ಗಳು ಸಾಕಷ್ಟು ಅಪ್‌ಡೇಟ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈಗಾಗಲೇ ಐಫೋನ್ ಪ್ರಿಯರ ಗಮನ ಸೆಳೆದಿವೆ. ಅಷ್ಟೇ ಅಲ್ಲ..ವಿಶೇಷ ಅಂದ್ರೆ, ಈ ಹೊಸ ಐಫೋನ್ ಸರಣಿಯು ಬೆಲೆಯಿಂದಲೂ ಭಾರೀ ಸದ್ದು ಮಾಡಿದೆ.
ಹೌದು, ಆಪಲ್ ಸಂಸ್ಥೆಯ ಫೋನ್‌ಗಳು ದುಬಾರಿ ಬೆಲೆಯಲ್ಲಿ ಲಾಂಚ್ ಆಗುತ್ತವೆ ಎಂದು ನಿರೀಕ್ಷಿಸುತ್ತಾರೆ. ಅದು ಸರಿ ಕೂಡಾ. ಆದರೆ ಸಂಸ್ಥೆಯು ಕಳೆದ ಐಫೋನ್ 15 ಪ್ರೊ (iPhone 15 Pro) ಮಾಡೆಲ್‌ಗಳಿಗೆ ಹೋಲಿಸಿದರೆ ಹೊಸ ಆಪಲ್ ಐಫೋನ್ 16 ಪ್ರೊ (Apple iPhone 16 Pro) ಮಾಡೆಲ್‌ಗಳನ್ನು ಭಾರತದಲ್ಲಿ ಕಡಿಮೆ ಬೆಲೆಗೆ ಪರಿಚಯಿಸಿದೆ. ಇದೇ ಮೊದಲ ಬಾರಿಗೆ ಹೊಸ ಐಫೋನ್‌ಗಳು ತಮ್ಮ ಹಿಂದಿನ ಆವೃತ್ತಿಗಳಿಗಿಂತ ಕಡಿಮೆ ಬೆಲೆಯನ್ನು ಬಿಡುಗಡೆ ಆಗಿರುವುದು.

15,000ರೂ. ಕಡಿಮೆ ದರದಲ್ಲಿ ಲಾಂಚ್!
ಐಫೋನ್ 16 ಪ್ರೊ ಮೊಬೈಲ್‌ನ ಆರಂಭಿಕ ವೇರಿಯಂಟ್ ದರ - 1,19,900ರೂ. ಆಗಿದೆ. ಇನ್ನು ಕಳೆದ ಆವೃತ್ತಿಯ ಐಫೋನ್ 15 ಪ್ರೊ (iPhone 15 Pro) ಆರಂಭಿಕ ವೇರಿಯಂಟ್ ಬೆಲೆಯು 1,34,900ರೂ. ಆಗಿದೆ. ಹೋಲಿಕೆ ಮಾಡಿ ನೋಡಿದಾಗ ನೂತನ ಐಫೋನ್ 15,000ರೂ. ಕಡಿಮೆ ದರದಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಐಫೋನ್ 16 ಪ್ರೊ ಮ್ಯಾಕ್ಸ್ (iPhone 16 Pro Max) ಆರಂಭಿಕ ಬೆಲೆ 1,44,900ರೂ ಆಗಿದೆ, ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ವೇರಿಯಂಟ್ 1,59,900ರೂ. ದರದಲ್ಲಿ ಕಾಣಿಸಿಕೊಂಡಿತ್ತು.
ಐಫೋನ್ 16 ಪ್ರೊ ಬೆಲೆ ಮಾಹಿತಿ
ಐಫೋನ್ 16 ಪ್ರೊ - 128GB ವೇರಿಯಂಟ್ ದರ - 1,19,900ರೂ
ಐಫೋನ್ 16 ಪ್ರೊ - 256GB ವೇರಿಯಂಟ್ ದರ - 1,29,900ರೂ
ಐಫೋನ್ 16 ಪ್ರೊ - 512GB ವೇರಿಯಂಟ್ ದರ - 1,49,900ರೂ
ಐಫೋನ್ 16 ಪ್ರೊ - 1TB ವೇರಿಯಂಟ್ ದರ - 1,69,900ರೂ
ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ ಲಿಸ್ಟ್
ಐಫೋನ್ 16 ಪ್ರೊ ಮ್ಯಾಕ್ಸ್ - 256GB ವೇರಿಯಂಟ್ ಬೆಲೆ - 1,44,900ರೂ
ಐಫೋನ್ 16 ಪ್ರೊ ಮ್ಯಾಕ್ಸ್ - 512GB ವೇರಿಯಂಟ್ ಬೆಲೆ 1,64,900ರೂ
ಐಫೋನ್ 16 ಪ್ರೊ ಮ್ಯಾಕ್ಸ್ - 1TB ವೇರಿಯಂಟ್ ಬೆಲೆ 1,84,900 ರೂ
ಲಭ್ಯತೆಯ ಮಾಹಿತಿ
ಹೊಸ ಐಫೋನ್ 16 ಸರಣಿಯ ಐಫೋನ್‌ಗಳ ಪ್ರಿ-ಆರ್ಡರ್ (Pre-orders) ಇದೇ ಸೆಪ್ಟೆಂಬರ್ 13 ರಂದು ಭಾರತೀಯ ಕಾಲಮಾನ ಸಂಜೆ 5:30 ಗಂಟೆಗೆ ಪ್ರಾರಂಭ ಆಗುತ್ತವೆ. ಇನ್ನು ಈ ಐಫೋನ್‌ಗಳು ಇದೇ ಸೆಪ್ಟೆಂಬರ್ 20 ರಿಂದ ಖರೀದಿಗೆ ಲಭ್ಯ ಆಗಲಿವೆ.
ಐಫೋನ್ 16 ಪ್ರೊ ಮಾಡೆಲ್‌ಗಳ ಕೀ ಫೀಚರ್ಸ್
ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಕ್ರಮವಾಗಿ 6.3 ಇಂಚಿನ ಹಾಗೂ 6.9 ಇಂಚಿನ ದೊಡ್ಡ ಡಿಸ್‌ಪ್ಲೇ ರಚನೆ ಪಡೆದಿವೆ. ಹಾಗೆಯೇ ಇವು ಹೊಸ A18 ಬಯೋನಿಕ್ ಪ್ರೊ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿವೆ. ಹಾಗೆಯೇ ಕ್ಯಾಮೆರಾ ವಿಭಾಗದಲ್ಲಿ ಹೆಚ್ಚಿನ ಅಪ್‌ಡೇಟ್ ಪಡೆದಿದ್ದು, ಈ ಎರಡೂ ಮಾದರಿಗಳು ಈಗ 5x ಟೆಲಿಫೋಟೋ ಲೆನ್ಸ್ ಪಡೆದಿವೆ.


Click it and Unblock the Notifications








