Home
ಸುದ್ದಿಜಾಲ

iPhone 16 ಸರಣಿ ಲಾಂಚ್ ಕಾರ್ಯಕ್ರಮ: ಲೈವ್‌ ವೀಕ್ಷಣೆ ಹೇಗೆ?..ನಿರೀಕ್ಷೆಗಳು ಏನು?

ಆಪಲ್‌ (Apple) ಸಂಸ್ಥೆಯ ಹೊಸ ಡಿವೈಸ್‌ಗಳ ಬಿಡುಗಡೆ ಕಾರ್ಯಕ್ರಮ ಇದೇ ಸೆಪ್ಟೆಂಬರ್ 9 ರಂದು ನಡೆಯುವುದು ಈಗಾಗಲೇ ಅಧಿಕೃತವಾಗಿದೆ. ಈ ಗಳಿಗೆಗಾಗಿ ಆಪಲ್‌ ಪ್ರಿಯರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ಗ್ಲೋಟೈಮ್ ಕಾರ್ಯಕ್ರಮದಲ್ಲಿ ಆಪಲ್‌ ಐಫೋನ್‌ 16 ಸರಣಿ (Apple iPhone 16) ಜೊತೆಗೆ ಆಪಲ್‌ ವಾಚ್ ಸರಣಿ 10 ಮತ್ತು ಆಪಲ್‌ ಏರ್‌ಪೋಡ್ಸ್‌ 4 (AirPods 4) ಡಿವೈಸ್‌ಗಳು ಲಾಂಚ್ ಆಗುವುದು ಬಹುತೇಕ ಕನ್ಫರ್ಮ್‌ ಆಗಿದೆ.

ಹೌದು, ಆಪಲ್‌ ಸಂಸ್ಥೆಯ ಬಹುನಿರೀಕ್ಷಿತ ಆಪಲ್‌ ಐಫೋನ್‌ 16 ಸರಣಿ ಲಾಂಚ್ ಕಾರ್ಯಕ್ರಮ ಇದೇ ಸೆ. 9 ರಂದು ನಡೆಯಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ. ಅಂದಹಾಗೆ ಐಫೋನ್‌ 16 ಸರಣಿಯು ಐಫೋನ್‌ 16 (iPhone 16), ಐಫೋನ್‌ 16 ಪ್ಲಸ್‌ (iPhone 16 Plus), ಐಫೋನ್‌ 16 ಪ್ರೊ (iPhone 16 Pro) ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಮಾಡೆಲ್‌ಗಳು ಅನಾವರಣ ಆಗುವ ನಿರೀಕ್ಷೆಗಳು ಇವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

iPhone 16 ಸರಣಿ ಲಾಂಚ್ ಕಾರ್ಯಕ್ರಮ: ಲೈವ್‌ ವೀಕ್ಷಣೆ ಹೇಗೆ?..ನಿರೀಕ್ಷೆಗಳು ಏನು?

ಐಫೋನ್‌ 16 ಲಾಂಚ್‌ ಕಾರ್ಯಕ್ರಮ ವೀಕ್ಷಣೆ ಮಾಹಿತಿ

ಆಪಲ್‌ ಸಂಸ್ಥೆಯ ಮುಖ್ಯ ಭಾಷಣವನ್ನು ಸೆಪ್ಟೆಂಬರ್ 9 ರಂದು ಭಾರತೀಯ ಕಾಲಮಾನ ರಾತ್ರಿ 10:30 PM ಕ್ಕೆ ನಿಗದಿಪಡಿಸಲಾಗಿದೆ. ಆಸಕ್ತ ಗ್ರಾಹಕರು ಈ ಕಾರ್ಯಕ್ರಮವನ್ನು apple.com, Apple TV ಆಪ್‌ ಅಥವಾ YouTube ನಲ್ಲಿ ಲೈವ್ (LIVE) ಆಗಿ ವೀಕ್ಷಿಣೆ ಮಾಡಬಹುದು.

ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು?

ಆಪಲ್‌ ಸಂಸ್ಥೆಯು ಈ 'ಗ್ಲೋಟೈಮ್' ಹೆಸರಿನ ಕಾರ್ಯಕ್ರಮದಲ್ಲಿ ಹೊಸ ಐಫೋನ್ 16 ಸರಣಿಯು ಮೇನ್‌ ಹೈಲೈಟ್‌ ಆಗಿದೆ. ಇನ್ನು ಮುಂಬರುವ ಈ ಐಫೋನ್ 16 ಸರಣಿಯು ನಾಲ್ಕು ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದ್ದು, ಅವುಗಳು ಕ್ರಮವಾಗಿ ಐಫೋನ್‌ 16 ಸರಣಿಯು ಐಫೋನ್‌ 16 (iPhone 16), ಐಫೋನ್‌ 16 ಪ್ಲಸ್‌ (iPhone 16 Plus), ಐಫೋನ್‌ 16 ಪ್ರೊ (iPhone 16 Pro) ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಆಗಿರಲಿವೆ.

ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌

ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಮಾಡೆಲ್‌ಗಳು ಹಿಂದಿನ ಕ್ಯಾಮೆರಾ ಮಾಡ್ಯೂಲ್ ಈಗ ಲಂಬ ವಿನ್ಯಾಸವನ್ನು ಅಳವಡಿಸುವ ಸಾಧ್ಯತೆಗಳು ಇವೆ. ಹೊಸ ಸರಣಿಯು ಸದ್ಯ ಚಾಲ್ತಿ ಇರುವ ಐಫೋನ್‌ 15 ಸರಣಿಯಲ್ಲಿ ಕರ್ಣೀಯ ವಿನ್ಯಾಸಕ್ಕೆ ಗುಡ್ ಬೈ ಹೇಳಲಿದೆ.

ಇನ್ನು ಕಾರ್ಯಕ್ಷಮತೆಯ ವಿಚಾರಕ್ಕೆ ಬರುವುದಾದರೇ, ಈ ಐಫೋನ್‌ಗಳು ಆಪಲ್‌ನ A18 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿವೆ. ಇದಲ್ಲದೆ, 'Apple Intelligence' ಆಯ್ಕೆಗಳ್ನು ಒಳಗೊಂಡಿರುವ AI ಏಕೀಕರಣವನ್ನು ನಿರೀಕ್ಷಿಸಲಾಗಿದೆ. ಇನ್ನು ಬೇಸ್‌ ಮಾಡೆಲ್‌ಗಳು 8GB RAM ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ.

ಈ ಹಿಂದಿನ ಐಫೋನ್‌ 15 ಮತ್ತು ಐಫೋನ್‌ 15 ಪ್ಲಸ್‌ ವೇರಿಯಂಟ್‌ಗಳಲ್ಲಿ 6GB RAM ಗೆ ಹೋಲಿಕೆ ಮಾಡಿ ನೋಡಿದರೆ. ಸಹಜವಾಗಿ, ಆಪಲ್ ಬಿಡುಗಡೆಯ ಸಮಯದಲ್ಲಿ ಅಥವಾ ಈವೆಂಟ್ ನಂತರ RAM ಅನ್ನು ಎಂದಿಗೂ ಉಲ್ಲೇಖಿಸುವುದಿಲ್ಲ, ಆದರೆ ಆಪಲ್ ಇಂಟೆಲಿಜೆನ್ಸ್ ಅನ್ನು ಬೆಂಬಲಿಸುವುದನ್ನು ಖಚಿತಪಡಿಸಿಕೊಳ್ಳಲು RAM ಅನ್ನು ಹೆಚ್ಚಿಸಲಾಗುವುದು ಎಂಬ ಊಹಾಪೋಹ ಇದೆ.

ಹಾಗೆಯೇ ಈ ಕಾರ್ಯಕ್ರಮದಲ್ಲಿ ಆಪಲ್‌ ಐಫೋನ್‌ 16 ಪ್ರೊ ಹಾಗೂ ಐಫೋನ್‌ 16 ಪ್ರೊ ಮ್ಯಾಕ್ಸ್‌ ಮಾಡೆಲ್‌ ಕೂಡಾ ಬಿಡುಗಡೆ ಆಗಲಿವೆ. ಅದೇ ರೀತಿ ಈ ಐಫೋನ್‌ಗಳ ಜೊತೆಗೆ ಸಂಸ್ಥೆಯು ಆಪಲ್‌ ವಾಚ್‌ ಸೀರಿಸ್‌ 10 (Apple Watch Series 10) ಹಾಗೂ ಆಪಲ್‌ ಏರ್‌ಪೋಡ್ಸ್‌ 4 (AirPods 4) ಡಿವೈಸ್‌ಗಳು ಸಹ ಎಂಟ್ರಿ ಕೊಡಲಿವೆ ಎನ್ನಲಾಗಿದೆ.

Best Mobiles in India

English summary
iPhone 16 Series Event: How to Watch and What to Expect. check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+