Home
ಸುದ್ದಿಜಾಲ

iPhone 16 ನ ಮಾಹಿತಿ ಲೀಕ್‌: ಡಿಸ್‌ಪ್ಲೇ, ಚಿಪ್‌ಸೆಟ್‌ನಲ್ಲಿ ಏನೆಲ್ಲಾ ಬದಲಾವಣೆ?

ಐಫೋನ್ 15 ಸರಣಿ (iPhone 15 series) ಫೋನ್‌ಗಳು ಇನ್ನೂ ಅನೇಕ ಜನರಿಗೆ ಲಭ್ಯವೇ ಆಗಿಲ್ಲ. ಈ ನಡುವೆ ಐಫೋನ್‌ 16 ಫೋನ್‌ (iPhone 16 series ) ಬಗ್ಗೆ ಕೆಲವು ಮಾಹಿತಿಗಳು ಲೀಕ್‌ ಆಗಿವೆ. ಈ ಮೂಲಕ ಐಫೋನ್‌ ಪ್ರಿಯರ ಗಮನ ಈಗ ಐಫೋನ್‌ 16 ಸರಣಿ ಮೇಲೆ ಹೋಗಿದೆ.

ಹೌದು, ಐಫೋನ್ 15 ಸರಣಿ ಲಾಂಚ್‌ ಆಗಿ ವಾರ ಕಳೆದರೂ ಪ್ರೀ ಬುಕ್ಕಿಂಗ್‌ ಮಾಡಿದ್ದ ಅದೆಷ್ಟೋ ಜನರಿಗೆ ಆ ಫೋನ್‌ಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಸಹ ಇದ್ದು, ಸಾಕಷ್ಟು ಜನರು ಈ ಫೋನ್‌ಗಳಿಗೆ ಬಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ನಡುವೆ ಮುಂದಿನ ಐಫೋನ್ ಸರಣಿ ಬಗ್ಗೆ ಕೆಲವು ಮಾಹಿತಿಗಳು ಲೀಕ್‌ ಆಗಿವೆ.

iPhone 16 ನ ಮಾಹಿತಿ ಲೀಕ್‌: ಡಿಸ್‌ಪ್ಲೇ, ಚಿಪ್‌ಸೆಟ್‌ನಲ್ಲಿ ಏನೆಲ್ಲಾ ಬದಲಾವಣೆ?

ಐಫೋನ್‌ 16 ಸರಣಿ: ಮೊದಲೇ ತಿಳಿಸಿದಂತೆ ಐಫೋನ್ 15 ಸರಣಿಯನ್ನು ಇನ್ನೂ ಪಡೆದೇ ಇಲ್ಲ. ಇನ್ನೂ ಹಲವರು ಈಗಷ್ಟೇ ಈ ಫೋನ್‌ಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಪೀಳಿಗೆಯ ಐಫೋನ್ 16 ಕುರಿತು ಮಾಹಿತಿ ಲೀಕ್‌ ಆಗಿದೆ. ಅಂದರೆ 2024 ರ ಆವೃತ್ತಿಗಳು ಹಲವಾರು ಬದಲಾವಣೆಗಳನ್ನು ಸ್ವೀಕರಿಸುತ್ತಿರಬಹುದು ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಲೀಕ್‌ ಮಾಹಿತಿ ಪ್ರಕಾರ, 120Hz ರಿಫ್ರೆಶ್‌ ರೇಟ್‌, ಹೊಸ ಚಿಪ್‌ಸೆಟ್ ಮತ್ತು ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಸೂಚಿಸಲಾಗಿದೆ. ಇಲ್ಲಿಯವರೆಗೆ, ಐಫೋನ್‌ಗಳು 60Hz ರಿಫ್ರೆಶ್‌ ರೇಟ್‌ ಡಿಸ್‌ಪ್ಲೇಯನ್ನು ಮಾತ್ರ ಹೊಂದಿವೆ. ವಿಷಯ ಏನೆಂದರೆ ಅಗ್ಗದ ದರದ ಆಂಡ್ರಾಯ್ಡ್‌ ಫೋನ್‌ಗಳು ಸಹ ಹೆಚ್ಚಿನ ದರದ ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಳ್ಳುತ್ತಿವೆ. ಆದರೂ ಈ ಪ್ರೀಮಿಯಂ ಫೋನ್‌ಗಳಲ್ಲಿ ಈವರೆಗೂ ರಿಫ್ರೆಶ್ ರೇಟ್ ಏರಿಕೆ ಆಗದೆ ಇದ್ದುದ್ದು ಐಫೋನ್‌ ಪ್ರಿಯರಲ್ಲಿ ಭಾರೀ ಬೇಸರ ಉಂಟು ಮಾಡಿತ್ತು. ಆದರೆ ಮುಂದಿನ ಸರಣಿ ಫೋನ್‌ಗಳಲ್ಲಿ ಇದು ಬದಲಾಗಲಿದೆ ಎನ್ನಲಾಗಿದೆ.

ಇದರೊಂದಿಗೆ ಐಫೋನ್ 16 ಪ್ರೊ ದೊಡ್ಡ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. ಆಂದರೆ ಈ ಫೋನ್ 6.3 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ ಎಂಬ ವದಂತಿಗಳಿವೆ. ಇದರೊಂದಿಗೆ ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆಯಬಹುದು ಎಂದೂ ಸಹ ಹೇಳಲಾಗಿದೆ. ಆದರೆ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ ಡಿಸ್‌ಪ್ಲೇ ಗಾತ್ರ ತಟಸ್ಥವಾಗಿರಲಿದೆ ಎನ್ನಲಾಗಿದೆ. ಅಂದರೆ ಕ್ರಮವಾಗಿ 6.1 ಇಂಚು ಹಾಗೂ 6.7 ಇಂಚಿನ ಡಿಸ್‌ಪ್ಲೇ ಇರಲಿದೆ.

ಉಳಿದಂತೆ ಐಫೋನ್ SE ಸರಣಿಯಲ್ಲಿ ಇರುವಂತೆ ಐಫೋನ್ 15 ಪ್ರೊ ಲೈನ್‌ಅಪ್‌ನೊಂದಿಗೆ ಘನ-ಸ್ಥಿತಿಯ ಬಟನ್‌ಗಳನ್ನು ಪರಿಚಯಿಸಲು ಆಪಲ್‌ ಆರಂಭದಲ್ಲಿ ಪರಿಗಣಿಸಿತ್ತು. ಆದರೆ ಐಫೋನ್ 15 ಪ್ರೊನಲ್ಲಿ ಈ ಫೀಚರ್ಸ್‌ ಕಾಣಿಸಿಕೊಂಡಿಲ್ಲ. ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಅವರ ಪ್ರಕಾರ ಈ ಬಟನ್‌ಗಳು ಐಫೋನ್ 16 ಪ್ರೊ ಮಾದರಿಗಳಲ್ಲಿ ಎಂಟ್ರಿ ನೀಡಬಹುದು ಎಂದು ಹೇಳಲಾಗಿದೆ.

ಇದಲ್ಲದೆ ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ ಟೆಟ್ರಾ-ಪ್ರಿಸ್ಮ್ ಟೆಲಿಫೋಟೋ ಎಂಬ ಕ್ಯಾಮೆರಾ ಫೀಚರ್ಸ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಈ ವಿಶೇ‍ಷ ಫೀಚರ್ಸ್‌ ಐಫೋನ್‌ 15 ಪ್ರೊ ಮ್ಯಾಕ್ಸ್‌ ನಲ್ಲಿದೆ. ಈ ತಂತ್ರಜ್ಞಾನವು 3x ನಿಂದ 5x ವರೆಗೆ ಆಪ್ಟಿಕಲ್ ಜೂಮ್ ಬೂಸ್ಟ್ ಅನ್ನು ನೀಡಲಿದೆ.ಸ ಇದು ಗರಿಗರಿಯಾದ ಮತ್ತು ಹೆಚ್ಚು ವಿವರವಾದ ಫೋಟೋಗಳನ್ನು ಸೆರೆಹಿಡಿಯಲು ಸಹಕಾರಿ.

ಹೆಚ್ಚುವರಿಯಾಗಿ, ಹೈಟಾಂಗ್ ಇಂಟರ್ನ್ಯಾಷನಲ್ ಸೆಕ್ಯುರಿಟೀಸ್‌ನ ಟೆಕ್ ವಿಶ್ಲೇಷಕ ಜೆಫ್ ಪು ಅವರ ಪ್ರಕಾರ, ಐಫೋನ್ 16 ಪ್ರೊ ಸರಣಿಯಲ್ಲಿ 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಇರಲಿದೆ ಎನ್ನಲಾಗಿದ್ದು, ಇದು ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ವರ್ಧಿತ ಕಾರ್ಯಕ್ಷಮತೆಯನ್ನು ನೀಡಲಿದೆಯಂತೆ. ಜೊತೆಗೆ ಲ್ಯಾಂಡ್‌ಸ್ಕೇಪ್ ಛಾಯಾಗ್ರಹಣದ ಆಕರ್ಷಣೆಯನ್ನು ಹೆಚ್ಚಿಸುವ, ಅಲ್ಟ್ರಾವೈಡ್ ಲೆನ್ಸ್‌ಗಳಿಗೆ ಸಂಬಂಧಿಸಿದ ಚಿತ್ರ ಸ್ಪಷ್ಟತೆಯನ್ನು ನೀಡುವ ಗುರಿ ಹೊಂದಿದೆ.

iPhone 16 ನ ಮಾಹಿತಿ ಲೀಕ್‌: ಡಿಸ್‌ಪ್ಲೇ, ಚಿಪ್‌ಸೆಟ್‌ನಲ್ಲಿ ಏನೆಲ್ಲಾ ಬದಲಾವಣೆ?

ಇದೆಲ್ಲಕ್ಕಿಂತ ಮಿಗಿಲಾಗಿ 2024ರ ಐಫೋನ್‌ಗಳು ಆಪಲ್‌ನ ಮುಂದಿನ ಪೀಳಿಗೆಯ ಚಿಪ್‌ಸೆಟ್ ಹೊಂದಿರಲಿವೆ ಎನ್ನಲಾಗಿದೆ. ಅಂದರೆ ಆಪಲ್‌ ಐಫೋನ್‌ 16 ಪ್ರೊ ಮಾದರಿಗಳಿಗೆ A18 ಪ್ರೊ ಚಿಪ್ ಅನ್ನು ಬಳಸಬಹುದು ಮತ್ತು A17 ಅನ್ನು ನೀಡಲಾಗುತ್ತದೆ ಎಂಬ ಮಾಹಿತಿ ಇದೆ. ಆದರೆ, ಇದರ ಬಗ್ಗೆ ಯಾವುದೇ ನಿಖರತೆ ಇಲ್ಲ. ಇಷ್ಟು ಬದಲಾವಣೆಗಳು ಏನಾದರೂ ಆದರೆ ಜನರು ಐಫೋನ್ 15 ಬದಲು ಐಫೋನ್ 16 ಫೋನ್‌ಗಳಿಗೆ ಕಾಯುವುದಂತೂ ಪಕ್ಕಾ.

Best Mobiles in India

English summary
Even after a week has passed since the iPhone 15 series launch, they are not able to supply those phones to so many people who had made pre-bookings. Some information about the next series iPhone 16 has already been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+