Home
ಸುದ್ದಿಜಾಲ

iPhone: ಐಫೋನ್‌ 16 ನಲ್ಲಿ ಈ ವಿಶೇಷ ಬಟನ್‌ ಇರಲಿದೆಯಂತೆ: ಇತರೆ ನಿರೀಕ್ಷಿತ ಫೀಚರ್ಸ್‌ ಏನು?

ಐಫೋನ್‌ಗಳು (iPhone) ಬಳಕೆದಾರರಿಗೆ ಭಿನ್ನ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಉತ್ತಮ ಫೋನ್‌ ಎನಿಸಿಕೊಂಡಿವೆ. ಅದರಲ್ಲೂ ಐಫೋನ್‌ 15 ಸರಣಿ (iPhone 15 series) ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದ್ದು, ಈ ಫೋನ್‌ಗಳನ್ನು ಈ ಕ್ಷಣಕ್ಕೂ ಸಹ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದರ ನಡುವೆ ಐಫೋನ್‌ 16 ಫೋನ್‌ (iPhone 16 series) ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗುತ್ತಿವೆ.

ಹೌದು, ಐಫೋನ್‌ಗಳು ಆಪಲ್‌ ಪ್ರಿಯರಿಗೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕುತ್ತವೆ. ಪ್ರತಿ ವರ್ಷವೂ ಆಪಲ್‌ ಹೊಸ ಸರಣಿ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಮುಂದಿನ ವರ್ಷದಲ್ಲಿ ಐಫೋನ್‌ 16 ಫೋನ್‌ಗಳನ್ನು ಅನಾವರಣ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇದರ ನಡುವೆ ಈಗ ಈ ಫೋನ್‌ಗಳ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಲೀಕ್‌ ಆಗುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಮೀಸಲಾದ ಬಟನ್‌ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಲೀಕ್‌ ಮಾಹಿತಿ ಪ್ರಕಾರ ಈ ಫೋನ್‌ ಏನೆಲ್ಲಾ ಹೊಸ ಫೀಚರ್ಸ್‌ ಪಡೆಯಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 16 ನಲ್ಲಿ ಈ ವಿಶೇಷ ಬಟನ್‌ ಇರಲಿದೆಯಂತೆ: ಇತರೆ ನಿರೀಕ್ಷಿತ ಫೀಚರ್ಸ್‌ ಏನು?

ಐಫೋನ್‌ 16 ಫೋನ್‌: ಆಪಲ್ ಹೊಸ ಆಕ್ಷನ್ ಬಟನ್‌ನೊಂದಿಗೆ ಐಫೋನ್ 15 ಪ್ರೊ ಸರಣಿಯನ್ನು ಪರಿಚಯಿಸಿ ಭಾರೀ ಸದ್ದು ಮಾಡಿತ್ತು. ಅದರಂತೆ ಈಗ ಐಫೋನ್ 16 ಸರಣಿಯಲ್ಲಿ ಮೀಸಲಾದ ಕ್ಯಾಪ್ಚರ್ ಬಟನ್‌ (Capture button) ಆಯ್ಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಈ ಫೋನ್‌ಗಳು ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಐಫೋನ್ 16 ಸರಣಿ ಅನಾವರಣಕ್ಕೆ ಸಮಯ ಒಂದು ವರ್ಷಕ್ಕಿಂತ ಕಡಿಮೆ ಇದೆ. ಅದಾಗ್ಯೂ, ಮುಂದಿನ ಪೀಳಿಗೆಯ ಐಫೋನ್‌ಗಳ ಲೀಕ್‌ ಮಾಹಿತಿ ಕಳೆದ ವಾರದಿಂದಲೇ ಆರಂಭ ಆಗಿದೆ. ಅದರಂತೆ ಐಫೋನ್ 16 ಸರಣಿಯಲ್ಲಿ ಮೀಸಲಾದ ಕ್ಯಾಪ್ಚರ್ ಬಟನ್ ಆಯ್ಕೆ ತ್ವರಿತವಾಗಿ ವಿಡಿಯೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ಲೂಮ್‌ ಬರ್ಗ್ ವರದಿ ಮಾಡಿದೆ.

ಐಫೋನ್‌ 16 ನಲ್ಲಿ ಈ ವಿಶೇಷ ಬಟನ್‌ ಇರಲಿದೆಯಂತೆ: ಇತರೆ ನಿರೀಕ್ಷಿತ ಫೀಚರ್ಸ್‌ ಏನು?

ಇನ್ನು ಸಾಮಾನ್ಯ ಬಟನ್‌ಗಳಿಗಿಂತ ಭಿನ್ನವಾಗಿ ಇದು ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ನೀವು ಅದನ್ನು ಒತ್ತಿದಾಗ ಕ್ಯಾಪ್ಚರ್ ಬಟನ್ ಭೌತಿಕವಾಗಿ ಚಲಿಸುವುದಿಲ್ಲ. ಬದಲಾಗಿ, ಇದು ಹ್ಯಾಪ್ಟಿಕ್ ಫೀಡ್‌ಬ್ಯಾಕ್ ಎಂಬ ತಂತ್ರಜ್ಞಾನವನ್ನು ಬಳಕೆ ಮಾಡಲಿದ್ದು, ನೀವು ಅದನ್ನು ಸ್ಪರ್ಶಿಸಿದಾಗ ಪ್ರತಿಕ್ರಿಯೆಯನ್ನು ಪಡೆಯಬಹುದಾಗಿದೆಯಂತೆ. ಈ ಮೂಲಕ ಸೂಕ್ಷ್ಮ ಬಟನ್‌ ಆಯ್ಕೆ ಪಡೆದಿರುತ್ತದೆ ಎಂದು ತಿಳಿದುಬಂದಿದೆ.

ಐಫೋನ್ 16 ನಲ್ಲಿ ಈ ಬಟನ್ ಅನ್ನು ಫೋನ್‌ನ ಬಲಭಾಗದಲ್ಲಿ ಇರಿಸಲಾಗುವುದು ಎಂದು ಕೆಲವು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ಬಟನ್‌ನ ವಿಶೇಷ ಫೀಚರ್ಸ್‌ ಏನೆಂದರೆ ನೀವು ಯಾವ ರೀತಿಯ ಒತ್ತುತ್ತೀರೋ ಅದರ ಆಧಾರದ ಮೇಲೆ ಬಟನ್ ವಿಭಿನ್ನ ಕೆಲಸಗಳನ್ನು ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಅಂದರೆ ಸಾಮಾನ್ಯವಾಗಿ ಪ್ರೆಸ್ ಮಾಡಿದ್ರೆ ಫೋಟೋಗಳನ್ನು ತೆಗೆಯಲು ಅನುಕೂಲ ಮಾಡಿಕೊಡುತ್ತದೆ. ಅದರಂತೆ ಗಟ್ಟಿಯಾಗಿ ಒತ್ತಿದ್ರೆ ವಿಡಿಯೋ ರೆಕಾರ್ಡಿಂಗ್ ಮಾಡಲು ಅನುಮತಿ ನೀಡುತ್ತದೆ ಎಂದು ತಿಳಿದುಬಂದಿದೆ.

ಇತರ ಲೀಕ್‌ ಫೀಚರ್ಸ್‌ ಕಡೆ ಗಮನಹರಿಸುವುದಾದರೆ ಐಫೋನ್ 16 ಪ್ರೊ ಸರಣಿಯು ಸುಧಾರಿತ A18 ಪ್ರೊ ಚಿಪ್‌ಸೆಟ್‌ಗಳನ್ನು ಹೊಂದುವ ಸಾಧ್ಯತೆಯಿದೆ ಎನ್ನಲಾಗಿದೆ. ಮತ್ತೊಂದೆಡೆ A17 ಪ್ರೊನ ಮಾರ್ಪಡಿಸಿದ ಆವೃತ್ತಿಯನ್ನು ಸ್ವೀಕರಿಸಬಹುದಾ ಎಂಬ ಪ್ರಶ್ನೆ ಸಹ ಮೂಡಿದೆ. ಇದರೊಂದಿಗೆ 2024 ಐಫೋನ್‌ಗಳ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಐಫೋನ್‌ 16 ನಲ್ಲಿ ಈ ವಿಶೇಷ ಬಟನ್‌ ಇರಲಿದೆಯಂತೆ: ಇತರೆ ನಿರೀಕ್ಷಿತ ಫೀಚರ್ಸ್‌ ಏನು?

ಉಳಿದಂತೆ ಈ ಐಫೋನ್ 16 ಮತ್ತು 16 ಪ್ಲಸ್ ನಲ್ಲಿ 6.1 ಇಂಚಿನ ಮತ್ತು 6.7 ಇಂಚಿನ ಡಿಸ್ಪ್ಲೇ ಇರಲಿದೆ ಎನ್ನಲಾಗಿದ್ದು, ಐಫೋನ್‌ 16 ಪ್ರೊ ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ ಕ್ರಮವಾಗಿ 6.23 ಇಂಚಿನ ಮತ್ತು 6.85 ಇಂಚಿನ ಡಿಸ್‌ಪ್ಲೇ ಹೊಂದಿರಬಹುದು ಎಂದು ಹೇಳಲಾಗಿದೆ. ಅದಾಗ್ಯೂ ನಿಖರ ಮಾಹಿತಿಗಾಗಿ ಆಪಲ್‌ನ ಅಧಿಕೃತ ಹೇಳಿಕೆಗಾಗಿ ಕಾಯಬೇಕಿದೆ.

Best Mobiles in India

English summary
iPhone 15 Pro series made a lot of noise with special features. Accordingly, it is said that a dedicated capture button will be available in the iPhone 16 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+