Home
ಸುದ್ದಿಜಾಲ

ಇಂದು ಲಾಂಚ್ ಆಗಲಿದೆ iPhone 16 ಸರಣಿ; ಭಾರತದಲ್ಲಿ ಬೆಲೆ ಎಷ್ಟು ಗೊತ್ತಾ?

ಆಪಲ್‌ (Apple) ಸಂಸ್ಥೆಯ ಬಹುನಿರೀಕ್ಷಿತ ಐಫೋನ್‌ 16 ಸರಣಿ (iPhone 16 Series) ಇಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಆಪಲ್‌ ಸಂಸ್ಥೆಯ ತನ್ನ 'ಗ್ಲೋಟೈಮ್' (glowtime) ಸ್ಪೆಷಲ್‌ ಕಾರ್ಯಕ್ರಮವನ್ನು ಇಂದು ಸೆಪ್ಟೆಂಬರ್ 9 ರಂದು ಪ್ರಾರಂಭ ಮಾಡಲಿದೆ. ಟೆಕ್ ದೈತ್ಯ ಆಪಲ್‌ ಕಂಪನಿಯು ತನ್ನ ಹೊಸ iPhone 16 ಸರಣಿ ಬಿಡುಗಡೆ ಜೊತೆಗೆ ಆಪಲ್‌ ವಾಚ್‌ ಸೀರಿಸ್‌ 10 ಡಿವೈಸ್‌ ಅನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತ ಆಗಿದೆ.

ಕಾರ್ಯಕ್ರಮದ ಸಮಯ

ಆಪಲ್ ಸಂಸ್ಥೆಯ 'glowtime' ಸ್ಪೆಷಲ್ ಕಾರ್ಯಕ್ರಮ, ಕ್ಯಾಲಿಫೋರ್ನಿಯಾದ ಆಪಲ್ ಕ್ಯುಪರ್ಟಿನೋ ಪಾರ್ಕ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 10:30 ಕ್ಕೆ ಈ ಕಾರ್ಯಕ್ರಮ ಶುರುವಾಗಲಿದೆ. ಇನ್ನು ಆಸಕ್ತ ಗ್ರಾಹಕರು ಈ ಕಾರ್ಯಕ್ರಮವನ್ನು Apple ಅಧಿಕೃತ ವೆಬ್‌ಸೈಟ್, Apple YouTube ಚಾನಲ್ ಅಥವಾ Apple TV ಆಪ್‌ ಮೂಲಕ ಲೈವ್‌ಸ್ಟ್ರೀಮ್ (LIVE) ಅನ್ನು ವೀಕ್ಷಿಸಬಹುದು.

ಇಂದು ಲಾಂಚ್ ಆಗಲಿದೆ iPhone 16 ಸರಣಿ; ಭಾರತದಲ್ಲಿ ಬೆಲೆ ಎಷ್ಟು ಗೊತ್ತಾ?

ನಿರೀಕ್ಷೆಗಳು ಏನು?

ಅಂದಹಾಗೆ ಐಫೋನ್‌ 16 ಸರಣಿಯು ಐಫೋನ್‌ 16 (iPhone 16), ಐಫೋನ್‌ 16 ಪ್ಲಸ್‌ (iPhone 16 Plus), ಐಫೋನ್‌ 16 ಪ್ರೊ (iPhone 16 Pro) ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಮಾಡೆಲ್‌ಗಳು ಅನಾವರಣ ಆಗುವ ನಿರೀಕ್ಷೆಗಳು ಇವೆ. ಜೊತೆಗೆ ಸಂಸ್ಥೆಯು ಆಪಲ್‌ ವಾಚ್‌ ಸೀರಿಸ್‌ 10 (Apple Watch Series 10) ಹಾಗೂ ಆಪಲ್‌ ಏರ್‌ಪೋಡ್ಸ್‌ 4 (AirPods 4) ಡಿವೈಸ್‌ಗಳು ಸಹ ಎಂಟ್ರಿ ಕೊಡಲಿವೆ ಎನ್ನಲಾಗಿದೆ.

ಫೀಚರ್ಸ್‌ ಹೈಲೈಟ್ಸ್‌

ಐಫೊನ್‌ 16 ಪ್ರೊ (iPhone 16 Pro) ಮತ್ತು ಐಫೊನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಫೋನ್‌ಗಳು ಕ್ರಮವಾಗಿ 6.3 ಇಂಚಿನ ಮತ್ತು 6.9 ಇಂಚಿನ ಡಿಸ್‌ಪ್ಲೇ ರಚನೆಯೊಂದಿಗೆ ಬರುವ ನಿರೀಕ್ಷೆಯಿದೆ. ಹಾಗೆಯೇ ಆಪಲ್ ಐಫೋನ್ 16 ಪ್ರೊ ಮಾದರಿಗಳಿಗಾಗಿ ಹೊಸ ಬಾರ್ಡರ್ ರಿಡಕ್ಷನ್ ಸ್ಟ್ರಕ್ಚರ್ (BRS) ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಮಾಹಿತಿಗಳಿವೆ. ಅಲ್ಲದೇ ಆಪಲ್‌ ಐಫೊನ್‌ 16 ಪ್ರೊ ವೇರಿಯಂಟ್‌ A18 Pro ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯದ ಜೊತೆಗೆ ಪವರ್ ಮಾಡುವ ನಿರೀಕ್ಷೆಯಿದೆ.

ಇನ್ನು ಐಫೊನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಮಾಡೆಲ್‌ ಸುಧಾರಿತ 48 ಮೆಗಾ ಪಿಕ್ಸಲ್‌ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಅನ್ನು ಹೊಂದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಈ ಹಿಂದಿನ ಐಫೋನ್ 15 ಪ್ರೊ ಮ್ಯಾಕ್ಸ್‌ನ ಟೆಟ್ರಾಪ್ರಿಸಂ ಟೆಲಿಫೋಟೋ ಲೆನ್ಸ್ ಅನ್ನು ಮುಂದುವರಿಸುವ ಸಾಧ್ಯತೆಗಳು ಇವೆ. ಇನ್ನು ಈ ಐಫೋನ್‌ಗಳು ನೀಲಿ, ಹಸಿರು, ಗುಲಾಬಿ, ಬಿಳಿ ಮತ್ತು ಕಪ್ಪು ಸೇರಿದಂತೆ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಐಫೊನ್‌ 16 ಪ್ರೊ ಮ್ಯಾಕ್ಸ್‌ ಮಾಡೆಲ್‌ 4,676 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಬಹುದು. ಜೊತೆಗೆ ಐಫೊನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ವೇರಿಯಂಟ್‌ 256GB ಸ್ಟೋರೇಜ್‌ ಆಯ್ಕೆ ಪಡೆದಿರುವ ಸಾಧ್ಯತೆಯಿದೆ. ಇನ್ನು ಬರಲಿರುವ ಈ ನೂತನ ಐಫೋನ್‌ಗಳು ಆಪಲ್‌ನ A18 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿವೆ. ಅಲ್ಲದೇ ಇವುಗಳು 'Apple Intelligence' ಆಯ್ಕೆಗಳ್ನು ಒಳಗೊಂಡಿರುವ AI ಏಕೀಕರಣವನ್ನು ನಿರೀಕ್ಷಿಸಲಾಗಿದೆ. ಇನ್ನು ಬೇಸ್‌ ಮಾಡೆಲ್‌ಗಳು 8GB RAM ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ.

ಐಫೋನ್ 16 ಸರಣಿಯ ನಿರೀಕ್ಷಿತ ಬೆಲೆ ಮಾಹಿತಿ

iPhone 16 ಆರಂಭಿಕ ವೇರಿಯಂಟ್‌ ದರ - 67,000 ರೂ.
iPhone 16 Plus ಆರಂಭಿಕ ವೇರಿಯಂಟ್‌ ದರ - 75,490 ರೂ.
iPhone 16 Pro ಆರಂಭಿಕ ವೇರಿಯಂಟ್‌ ದರ - 84,000 ರೂ.
iPhone 16 Pro Max ಆರಂಭಿಕ ವೇರಿಯಂಟ್‌ ದರ - 84,000 ರೂ.

Best Mobiles in India

English summary
iPhone 16 series price leaked, what could be the prices in India. check details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+