Home
ಸುದ್ದಿಜಾಲ

ಆಪಲ್‌ನ ಹೊಸ iOS 18 ಓಎಸ್‌ನಲ್ಲಿ ಅಚ್ಚರಿಯ ಫೀಚರ್ಸ್‌; ಏನೆಲ್ಲಾ ಬದಲಾವಣೆ ಆಗುತ್ತೆ?

ಮೊಬೈಲ್‌ ಮಾರುಕಟ್ಟೆಯಲ್ಲಿ ದಿಗ್ಗಜ ಫೋನ್‌ಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಆಪಲ್‌ (Apple) ಸಂಸ್ಥೆಯ ಐಫೋನ್‌ಗಳು ಕಾಣಿಸಿಕೊಂಡಿವೆ. ಐಫೋನ್‌ ದುಬಾರಿ ಎನಿಸಿದರೂ ಐಫೋನ್‌ಗಳಲ್ಲಿ ಇರುವ ಅಡ್ವಾನ್ಸಡ್ ಫೀಚರ್ಸ್‌ಗಳನ್ನು ಬಳಕೆದಾರರನ್ನು ಆಕರ್ಷಿಸುತ್ತವೆ. ಸುರಕ್ಷತೆಯ ದೃಷ್ಠಿಯಿಂದಲೂ ಐಫೋನ್‌ಗಳ ಆಪರೇಟಿಂಗ್ ಸಿಸ್ಟಮ್‌ ಹೆಚ್ಚು ಉತ್ತಮ ಎನಿಸುತ್ತದೆ. ಸದ್ಯ ಆಪಲ್‌ನ iOS 17 ಓಎಸ್‌ ಚಾಲ್ತಿ ಇದ್ದು, ಇದೀಗ ಆಪಲ್‌ ಡಿವೈಸ್‌ ಪ್ರಿಯರು ಮುಂದಿನ iOS 18 ಓಎಸ್‌ನ ಫೀಚರ್ಸ್‌ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ.

ಹೌದು, ಆಪಲ್‌ ಸಂಸ್ಥೆಯು ಸೆಪ್ಟೆಂಬರ್ 9 ರಂದು ಕ್ಯಾಲಿಫೋರ್ನಿಯಾದ ಆಪಲ್ ಕ್ಯುಪರ್ಟಿನೋ ಪಾರ್ಕ್‌ನಲ್ಲಿ ತನ್ನ glowtime ಕಾರ್ಯಕ್ರಮದ ಮೂಲಕ ಐಫೋನ್‌ 16 ಸರಣಿಯನ್ನು ಲಾಂಚ್ ಮಾಡಲಿದೆ. iOS 18 ಓಎಸ್‌ ಈಗಾಗಲೇ ಡೆವಲಪರ್‌ಗಳ ಸಮ್ಮೇಳನದಲ್ಲಿ ಘೋಷಿಸಲಾಗಿದ್ದರೂ, ಬಿಡುಗಡೆಯ ದಿನಾಂಕವನ್ನು ದೃಢೀಕರಿಸಲಾಗುವುದು. ಈ ನೂತನ ಓಎಸ್‌ ಹಲವು ಅಚ್ಚರಿಯ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎಂದು ಲೀಕ್ ಮಾಹಿತಿಗಳಿಂದ ಈಗಾಗಲೇ ತಿಳಿದುಬಂದಿದೆ. ಹೀಗಾಗಿ ಆಂಡ್ರಾಯ್ಡ್‌ ಬಳಕೆದಾರರು ಐಫೋನ್‌ ಫೀಚರ್ಸ್‌ಗಳತ್ತ ಕುತೂಹಲದಿಂದ ನೋಡುವಂತೆ ಆಗಿದೆ.

ಆಪಲ್‌ನ ಹೊಸ iOS 18 ಓಎಸ್‌ನಲ್ಲಿ ಅಚ್ಚರಿಯ ಫೀಚರ್ಸ್‌; ಏನೆಲ್ಲಾ ಬದಲಾವಣೆ ಆಗುತ್ತೆ

ಆಪಲ್‌ ಸಂಸ್ಥೆಯ ಹೊಸ 'iOS 18' ಓಎಸ್‌ ರಲ್ಲಿ ಫೋನ್‌ ಅಪಿರಿಯನ್ಸ್‌ ಕಸ್ಟಮೈಸ್ ನಿಂದ ಹಿಡಿದು, ಫೋನ್ ಅಪಿರೀಯನ್ಸ್‌ ಬದಲಾವಣೆ, ಗೌಪ್ಯತೆ ಸೇರಿದಂತೆ ಹತ್ತು ಹಲವು ನೂತನ ಫೀಚರ್ಸ್‌ಗಳು ಸೇರಿಕೊಳ್ಳಲಿದ್ದು, ಐಫೋನ್‌ ಬಳಕೆದಾರರಿಗೆ ಸದ್ಯ ಖುಷಿಯ ಸಡಗರ ಹೆಚ್ಚಾಗಿದೆ ಎನ್ನಬಹುದು. ಹಾಗಾದರೇ ಐಫೋನ್ iOS 18 ಓಎಸ್‌ ಹೊಸದಾಗಿ ಸೇರಿಕೊಳ್ಳಲಿರುವ ವಿಶೇಷ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಕಸ್ಟಮೈಸೇಬಲ್ ಹೋಮ್ ಸ್ಕ್ರೀನ್‌ ಆಯ್ಕೆ
ಹೋಮ್ ಸ್ಕ್ರೀನ್ ಗ್ರಿಡ್‌ನಲ್ಲಿ ಎಲ್ಲಿಯಾದರೂ ಆಪ್‌ನ ಐಕಾನ್‌ಗಳನ್ನು ಇರಿಸಲು ಹೊಸ iOS 18 ಓಎಸ್‌ ಬಳಕೆದಾರರಿಗೆ ಅನುಮತಿಸುತ್ತದೆ . ಅಲ್ಲದೇ ಅಪ್ಲಿಕೇಶನ್ ಐಕಾನ್‌ಗಳನ್ನು ಮರುವರ್ಣಿಸಲು ಹೊಸ ಡಾರ್ಕ್ ಮತ್ತು ಟಿಂಟೆಡ್ ಕಸ್ಟಮೈಸೇಶನ್ ಆಯ್ಕೆಗಳು ದೊರೆಯುತ್ತವೆ. ಕೆಳಗಿನ ಟೆಕ್ಸ್ಟ್‌ ಲೇಬಲ್‌ಗಳು ಇಲ್ಲದೆಯೇ ಬಳಕೆದಾರರು ಆಪ್‌ಗಳ ಐಕಾನ್‌ಗಳನ್ನು ದೊಡ್ಡದಾಗಿ ಕಾಣುವಂತೆ ಸೆಟ್‌ ಮಾಡಬಹುದು.

ಸ್ಯಾಟಲೈಟ್‌ ಟೆಕ್ಸ್ಟ್‌ ಮೆಸೆಜ್‌ ಕಳುಹಿಸುವ ಸೌಲಭ್ಯ
iOS 18 ಓಎಸ್‌ ಕುತೂಹಲ ಆಯ್ಕೆಗಳಲ್ಲಿ ಸ್ಯಾಟಲೈಟ್‌ ಟೆಕ್ಸ್ಟ್‌ ಮೆಸೆಜ್‌ ಕಳುಹಿಸುವ ಒಂದಾಗಿದೆ. ಸ್ಯಾಟಲೈಟ್‌ ಸಂಪರ್ಕವನ್ನು (Satellite text messaging) ಇನ್ನು ಮುಂದೆ ತುರ್ತು ಪರಿಸ್ಥಿತಿಗಳಿಗಾಗಿ ಕಾಯ್ದಿರಿಸಲಾಗಿಲ್ಲ. ಬಳಕೆದಾರರು ವೈ-ಫೈ ಮತ್ತು ಸೆಲ್ಯುಲಾರ್ ಕನೆಕ್ಷನ್‌ ಇಲ್ಲದೇ ಇದ್ದರೂ ಸಹ ತಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೆ ಮೆಸೆಜ್‌ಗಳನ್ನು ಕಳುಹಿಸಬಹುದು.

ರಿಡಿಸೈನ್ಡ್‌ ಕಂಟ್ರೋಲ್‌ ಸೆಂಟರ್
ರಿಡಿಸೈನ್ಡ್‌ ಕಂಟ್ರೋಲ್‌ ಸೆಂಟರ್
iOS 18 ನಲ್ಲಿ ಮರುವಿನ್ಯಾಸಗೊಳಿಸಲಾಗಿದೆ. ಹೋಮ್ ಸ್ಕ್ರೀನ್‌ನಂತೆ, ಇದು ಈಗ ಹೆಚ್ಚು ಗ್ರಾಹಕೀಯಗೊಳಿಸಬಹುದಾಗಿದೆ, ಬಹು ಪುಟಗಳಾದ್ಯಂತ ನಿಯಂತ್ರಣಗಳನ್ನು ಮರುಹೊಂದಿಸಲು ಮತ್ತು ಮರುಗಾತ್ರಗೊಳಿಸಲು ನಿಮಗೆ ಅನುಮತಿಸುತ್ತದೆ. ಎಲ್ಲಾ-ಹೊಸ ನಿಯಂತ್ರಣಗಳ ಗ್ಯಾಲರಿಯಿಂದ ನೀವು ಸುಲಭವಾಗಿ ಹೆಚ್ಚಿನ ನಿಯಂತ್ರಣಗಳನ್ನು ಸೇರಿಸಬಹುದು.

ವಾಯಿಸ್‌ ಮೆಮೊ ಟ್ರಾನ್ಸಕ್ರೀಪ್ಶನ್‌
ಬರಲಿರುವ ಹೊಸ iOS 18 ಓಎಸ್‌ ಹಲವು ಹೊಸ ಫೀಚರ್ಸ್‌ ಒಳಗೊಂಡಿರಲಿದೆ. ಆ ಪೈಕಿ ವಾಯಿಸ್‌ ಮೆಮೊ ಟ್ರಾನ್ಸಕ್ರೀಪ್ಶನ್‌ ಆಯ್ಕೆ ಸಹ ಒಂದು. ಬಳಕೆದಾರರು ತಮ್ಮ ಎಲ್ಲಾ ರೆಕಾರ್ಡಿಂಗ್‌ಗಳನ್ನು ಲಿಪ್ಯಂತರಗೊಳಿಸಬಹುದು (transcribed) ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ವಾಯ್ಸ್ ಮೆಮೊ ಆಪ್‌ ತೆರೆದು ಮಾಡಿ, ಮೆಸೆಜ್‌ ಅನ್ನು ರೆಕಾರ್ಡ್ ಮಾಡಿ ಮತ್ತು ರೆಕಾರ್ಡಿಂಗ್‌ನ ಮೇಲಿನ ಬಲ ಮೂಲೆಯಲ್ಲಿರುವ ಟ್ರಿಪಲ್-ಡಾಟ್ ಐಕಾನ್ ಮೇಲೆ ಟ್ಯಾಪ್ ಮಾಡಬೇಕು. iOS 18 ನ ಸ್ಪೀಚ್-ಟು-ಟೆಕ್ಸ್ಟ್ ಸಾಮರ್ಥ್ಯಗಳನ್ನು ಕ್ರಿಯೆಯಲ್ಲಿ ನೋಡಲು ವೀಕ್ಷಿಸಲು ಟ್ರಾನ್ಸಕ್ರೀಪ್ಶನ್‌ ಅನ್ನು ಟ್ಯಾಪ್ ಮಾಡಿ.

Best Mobiles in India

English summary
Discover the latest iOS 18 updates for the iPhone 16 Series. Explore new features, improvements, and key changes that enhance your iPhone experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+