Home
ಸುದ್ದಿಜಾಲ

iPhone 16 ಸರಣಿ ಬಿಡುಗಡೆಗೆ ಮುಹೂರ್ತ ಫಿಕ್ಸ್‌!..ನಿರೀಕ್ಷೆಗಳು ಏನು?

ಟೆಕ್ ದಿಗ್ಗಜ ಆಪಲ್ ಸಂಸ್ಥೆಯು ಈಗಾಗಲೇ ಐಫೋನ್‌ 15 ಸರಣಿ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ನಡೆಸಿದೆ. ಅದರ ಮುಂದಿನ ಆವೃತ್ತಿ ಲಾಂಚ್ ಮಾಡಲು ಸಂಸ್ಥೆಯು ಇದೀಗ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಸಂಸ್ಥೆ ತನ್ನ ಬಹುನಿರೀಕ್ಷಿತ ಐಫೋನ್ 16 ಸರಣಿಯನ್ನು ಅನಾವರಣಗೊಳಿಸಲು ಇದೇ ಸೆಪ್ಟೆಂಬರ್ 9 ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ಕಾರ್ಯಕ್ರಮಕ್ಕೆ "It's Glowtime" ಎಂಬ ಅಡಿಬರಹ ತಿಳಿಸಿದೆ.

ಹೌದು, ಆಪಲ್‌ (Apple) ಸಂಸ್ಥೆಯು ತನ್ನ ಐಫೋನ್ 16 ಸರಣಿಯನ್ನು ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಕಾರ್ಯಕ್ರಮವನ್ನು ಆಪಲ್ ಪಾರ್ಕ್‌ ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಬೆಳಗ್ಗೆ 10 ಗಂಟೆಗೆ ( ಭಾರತೀಯ ಕಾಲಮಾನ ರಾತ್ರಿ 10:30 ಗಂಟೆಗೆ ) ಆಯೋಜಿಸಲಾಗುತ್ತದೆ. ಇನ್ನು ಆಸಕ್ತ ಐಫೋನ್‌ ಪ್ರಿಯರು ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಸಹ ವೀಕ್ಷಿಣೆ ಮಾಡಬಹುದು.

iPhone 16 ಸರಣಿ ಬಿಡುಗಡೆಗೆ ಮುಹೂರ್ತ ಫಿಕ್ಸ್‌!..ನಿರೀಕ್ಷೆಗಳು ಏನು?

ಅಂದಹಾಗೆ ಆಪಲ್ ಸಂಸ್ಥೆಯ ತನ್ನ ಮುಂಬರುವ ಉತ್ಪನ್ನಗಳ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ. ಈ ಕಾರ್ಯಕ್ರಮದಲ್ಲಿ iPhone 16 ಸರಣಿ ಮತ್ತು ವಾಚ್ ಸರಣಿ 10 ಅನ್ನು ಪರಿಚಯಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನುಳಿದಂತೆ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು?

ಈ ಕಾರ್ಯಕ್ರಮದಲ್ಲಿ ಆಪಲ್ ಸಂಸ್ಥೆಯು ಒಟ್ಟು ನಾಲ್ಕು ವೇರಿಯಂಟ್‌ಗಳನ್ನು ಲಾಂಚ್ ಮಾಡುವ ನಿರೀಕ್ಷಿಸಲಾಗಿದೆ. ಅವುಗಳು ಕ್ರಮವಾಗಿ ಐಫೋನ್‌ 16 (iPhone 16), ಐಫೋನ್‌ 16 ಪ್ಲಸ್‌ (iPhone 16 Plus), ಐಫೋನ್‌ 16 ಪ್ರೊ (iPhone 16 Pro) ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಆಗಿವೆ. ಅಲ್ಲದೇ ನೂತನ ಐಫೋನ್ 16 ಶ್ರೇಣಿಯು ಹೊಸ A18 ಸರಣಿಯ ಚಿಪ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಐಫೋನ್ 16 ಸರಣಿಯ ಜೊತೆಗೆ, ಕಂಪನಿಯು ವಾಚ್ ಸೀರೀಸ್ 10 ಅನ್ನು ಘೋಷಿಸುವ ನಿರೀಕ್ಷೆಯಿದೆ.

ಇನ್ನು ಲೀಕ್ ಮಾಹಿತಿಗಳ ಪ್ರಕಾರ ಐಫೋನ್‌ 15 ಸರಣಿಗೆ ಹೋಲಿಸಿದರೆ ಐಫೋನ್‌ 16 ಪ್ರೊ ಮತ್ತು ಐಫೋನ್‌ 16 ಪ್ರೊ ಮ್ಯಾಕ್ಸ್‌ ಎರಡೂ ವೇರಿಯಂಟ್‌ಗಳ ದೊಡ್ಡ ಬ್ಯಾಟರಿಗಳನ್ನು ಪಡೆದಿರಲಿವೆ. ಹಾಗೆಯೇ ಸ್ಟ್ಯಾಂಡರ್ಡ್ ಐಫೋನ್‌ 16 ವೇರಿಯಂಟ್‌ಗಳಲ್ಲಿ ಕ್ಯಾಮೆರಾ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಅನ್ನು ಸಾಧ್ಯತೆಯಿದೆ. ಅಲ್ಲದೇ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ ಎರಡು ವೇರಿಯಂಟ್‌ಗಳಲ್ಲಿಯೂ ಆಕ್ಷನ್ ಬಟನ್ ಸಾಧ್ಯತೆ ಇದೆ.

ಹಾಗೆಯೇ ಆಪಲ್‌ ಐಫೋನ್‌ 16 ಸರಣಿಯು ಇದು ದೊಡ್ಡ ಗಾತ್ರಗಳಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಇನ್ನು ಸಂಸ್ಥೆಯು ಐಫೋನ್‌ 16 ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದೆ ಎಂದು ಲೀಕ್‌ ಮಾಹಿತಿಗಳಿವೆ. ಹಾಗೆಯೇ ಸ್ಟ್ಯಾಂಡರ್ಡ್ ಐಫೋನ್ 16 ಮಾದರಿಗಳಲ್ಲಿನ ಮ್ಯೂಟ್ ಬಟನ್ ಅನ್ನು ಆಕ್ಷನ್ ಬಟನ್‌ನೊಂದಿಗೆ ಬದಲಾಯಿಸುತ್ತಿದೆ ಎಂದು ನಿರೀಕ್ಷೆಗಳಿವೆ. ಲೀಕ್ ಮಾಹಿತಿ ಪ್ರಕಾರ ಐಫೋನ್‌ 16 ಫೋನ್‌ ಬ್ಲ್ಯಾಕ್‌, ಗ್ರೀನ್‌, ಪಿಂಕ್‌, ಬ್ಲೂ ಮತ್ತು ವೈಟ್‌ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

ಆಪಲ್‌ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ ಫೋನ್‌ಗಳು 60Hz ರಿಫ್ರೆಶ್ ರೇಟ್‌ ಸೌಲಭ್ಯದಲ್ಲಿ ಇರಲಿದ್ದು, ಇವುಗಳು 6.1 ಇಂಚಿನ ಮತ್ತು 6.7 ಇಂಚಿನ OLED ಡಿಸ್‌ಪ್ಲೇ ರಚನೆಯಲ್ಲಿ ಬರುವ ನಿರೀಕ್ಷೆಗಳು ಇವೆ.

Best Mobiles in India

English summary
iPhone 16 series will launch on September 9. Check out price, specifications and all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+